ಸೂಪರ್ ಸ್ಟಾರ್ ರಜನಿಕಾಂತ್‍ಗೆ ಕೋರ್ಟ್ ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಚೆನ್ನೈ, ಅ.14- ಪಾಲಿಕೆ ವಿರುದ್ಧ ಕೋರ್ಟ್‍ನಲ್ಲಿ ದಾವೆ ಹೂಡಿದ್ದ ತಮಿಳು ಚಿತ್ರರಂಗದ ಸೂಪರ್‍ಸ್ಟಾರ್ ರಜನಿಕಾಂತ್‍ಗೆ ಮದ್ರಾಸ್ ಕೋರ್ಟ್ ಎಚ್ಚರಿಕೆ ನೀಡಿದೆ.

ಚೆನ್ನೈನ ಕೋಡಂಬಕ್ಕಾಂ ನಲ್ಲಿ ರಜನಿಕಾಂತ್ ಒಡೆತನದ ಶ್ರೀ ರಾಘವೇಂದ್ರ ಕಲ್ಯಾಣಮಂಟಪಕ್ಕೆ ಚೆನ್ನೈ ಪಾಲಿಕೆ ವತಿಯಿಂದ 6.50 ಲಕ್ಷ ತೆರಿಗೆ ವಿಸಲಾಗಿತ್ತು.

ಕಳೆದ ಮಾರ್ಚ್‍ನಿಂದ ಕೊರೊನಾ ಹಿನ್ನೆಲೆಯಲ್ಲಿ ಕಲ್ಯಾಣಮಂಟಪಗಳಲ್ಲಿ ಮದುವೆ ಸಮಾರಂಭಗಳು ನಡೆಯದೆ ಖಾಲಿ ಹೊಡೆದು ನಷ್ಟ ಅನುಭವಿಸಿದ್ದರೂ ಕೂಡ ಚೆನ್ನೈ ಪಾಲಿಕೆಯವರು ಸಾರ್ವಜನಿಕರ ಆಸ್ತಿಗಳಿಗೆ ಏಪ್ರಿಲ್‍ನಿಂದ ಸೆಪ್ಟೆಂಬರ್‍ವರೆಗಿನ ತೆರಿಗೆಯನ್ನು ಹಾಕಿದ್ದು ರಜನಿ ಒಡೆತನದ ಶ್ರೀ ರಾಘವೇಂದ್ರ ಕಲ್ಯಾಣಮಂಟಪಕ್ಕೂ ತೆರಿಗೆಯನ್ನು ವಿಸಿದ್ದಾರೆ.

ಇದರಿಂದ ಕುಪಿತಗೊಂಡ ರಜನಿ ಮಾರ್ಚ್‍ನಿಂದ ನನ್ನ ಒಡೆತನದ ಶ್ರೀ ರಾಘವೇಂದ್ರ ಕಲ್ಯಾಣಮಂಟಪದಲ್ಲಿ ವಿವಾಹ, ಮತ್ತಿತರೆ ಸಮಾರಂಭಗಳು ನಡೆಯದಿದ್ದರೂ ಅದಕ್ಕೆ ತೆರಿಗೆ ವಿಸಿರುವುದು ಸರಿಯಲ್ಲ ಎಂದು ಕೋರ್ಟ್ ಮೊರೆ ಹೋಗಿದ್ದರಾದರೂ ರಜನಿಯ ಈ ಕ್ರಮವನ್ನು ಕೋರ್ಟ್ ಅಲ್ಲಗಳೆದಿದ್ದಲ್ಲದೆ ಅವರಿಗೆ ಎಚ್ಚರಿಕೆಯನ್ನು ನೀಡಿದೆ.

Facebook Comments

Sri Raghav

Admin