ಭಾರತದಲ್ಲಿ ಕೊರೊನಾ ಪೀಡಿತರ ಸಂಖ್ಯೆ 150ಕ್ಕೇರಿಕೆ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಮುಂಬೈ, ಮಾ.18- ಕಠಿಣ ಮುನ್ನೆಚ್ಚರಿಕೆ ಕ್ರಮಗಳ ಹೊರತಾಗಿಯೂ ಭಾರತದಲ್ಲಿ ಕೊರೊನಾ ವೈರಾಣು ಸೋಂಕು ಆತಂಕ ಮುಂದುವರಿದಿದ್ದು, ಪೀಡಿತರ ಸಂಖ್ಯೆ 150ಕ್ಕೇರಿದೆ. ಮಹಾಮಾರಿ ಕೋವಿಡ್-19 ಈಗಾಗಲೇ ದೇಶದಲ್ಲಿ ಮೂವರನ್ನು ಬಲಿತೆಗೆದುಕೊಂಡಿದ್ದು, ಸೋಂಕು ದೃಢಪಟ್ಟವರಲ್ಲಿ ಕೆಲವರ ಸ್ಥಿತಿ ಶೋಚನೀಯವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಕಳವಳ ಸೃಷ್ಟಿಯಾಗಿದೆ.

ಅಲ್ಲದೇ ಬಾಧಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಮುಂದಿನ 24 ಗಂಟೆಗಳಲ್ಲಿ ಇದು ಮತ್ತಷ್ಟುಏರಿಕೆಯಾಗುವ ಭೀತಿ ಇದೆ. ವಿವಿಧ ರಾಜ್ಯಗಳಲ್ಲಿ ಕಳೆದ 12 ತಾಸುಗಳ ಅವಧಿಯಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕು ಪೀಡಿತರ ಸಂಖ್ಯೆಏರುತ್ತಲೇಇದೆ. ಮಹಾರಾಷ್ಟ್ರದ ಪುಣೆಯಲ್ಲಿ ಮಹಿಳೆಯೊಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಇದರಿಂದಾಗಿಅಲ್ಲಿರೋಗ ಪೀಡಿತರ ಸಂಖ್ಯೆ 42ಕ್ಕೇರಿದೆ. ದೇಶದಲ್ಲಿ ಅತಿ ಹೆಚ್ಚು ಕೊರೊನಾ ಸೋಂಕು ಪ್ರಕರಣದಾಖಲಾಗಿರುವರಾಜ್ಯ ಮಹಾರಾಷ್ಟ್ರ. ತೀವ್ರಕಟ್ಟೆಚ್ಚರದ ನಡುವೆಯೂರಾಜ್ಯದಲ್ಲಿ ಹೊಸ ಹೊಸ ಕೇಸ್‍ಗಳು ಮರುಕಳಿಸುತ್ತಿರುವ ಹಿನ್ನೆಲೆಯಲ್ಲಿಜನರಲ್ಲಿ ದಿಗಿಲುಗೊಂಡಿದ್ದಾರೆ. ಮಹಾರಾಷ್ಟ್ರದ 64 ವರ್ಷದ ವೃದ್ಧರೊಬ್ಬರುನಿನ್ನೆ ಬೆಳಗ್ಗೆ ಮುಂಬೈನಲ್ಲಿ ಈ ವೈರಾಣು ದಾಳಿಗೆ ಬಲಿಯಾಗಿದ್ದಾರೆ.

ಸೋಂಕು ತಗುಲಿದ್ದಇವರಿಗೆ ಪ್ರತ್ಯೇಕ ಕೊಠಡಿಯಲ್ಲಿ ಕೆಲಕಾಲದಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದರು. ಇದು ಮಹಾರಾಷ್ಟ್ರದಲ್ಲಿನ ಮೊದಲ ಕೊರೊನಾ ಸಾವಿನ ಪ್ರಕರಣವಾಗಿದೆ.  ಈಗಾಗಲೇ ಕರ್ನಾಟಕದ ಕಲಬುರಗಿಯ 76 ವರ್ಷದ ವೃದ್ದ ಮತ್ತುದೆಹಲಯ 68 ವರ್ಷದ ಮಹಿಳೆಯನ್ನು ಕೋವಿಡ್ ವೈರಸ್ ಆಪೋಶನ ತೆಗೆದುಕೊಂಡಿದೆ. ಕಲಬುರಗಿ ವೃದ್ಧನ ಸಾವು ದೇಶದಲ್ಲಿಕೊರೊನಾ ಸೋಂಕಿಗೆ ಬಲಿಯಾದ ಪ್ರಥಮ ಪ್ರಕರಣವಾಗಿತ್ತು.

ದೇಶದ ಗಡಿ ಭಾಗ ಲೇಹ್ ಪ್ರಾಂತ್ಯದ 34 ವರ್ಷದ ಯೋಧನೊಬ್ಬನಿಗೂ ಕೋವಿಡ್-19 ಸೋಂಕು ಇರುವುದು ದೃಢಪಟ್ಟಿದೆ. ಇದರು ಭಾರತೀಯ ಸೇನಾ ಪಡೆಯಲ್ಲಿ ಕಂಡು ಬಂದ ಪ್ರಪ್ರಥಮ ಸೋಂಕು ಪ್ರಕರಣ. ಮಹಾರಾಷ್ಟ್ರದಲ್ಲಿ 42 ಕೇರಳದಲ್ಲಿ 27, ಕರ್ನಾಟಕದಲ್ಲಿ 11, ದೆಹಲಿಯಲ್ಲಿ 9, ತೆಲಂಗಾಣದಲ್ಲಿ 4, ಲಡಕ್‍ನಲ್ಲಿ 8, ಜಮ್ಮು-ಕಾಶ್ಮೀರದಲ್ಲಿ 4, ತಮಿಳುನಾಡು, ಆಂಧ್ರಪ್ರದೇಶ, ಪಂಜಾಬ್, ಒಡಿಶಾ, ಉತ್ತರಖಂಡ ರಾಜ್ಯಗಳಲ್ಲಿಯೂ ಪ್ರಕರಣಗಳು ದೃಡಪಟ್ಟಿವೆ. ಭಾರತದಲ್ಲಿದೃಢಪಟ್ಟಿರುವ ಸೋಂಕು ಪ್ರಕರಣದಲ್ಲಿ 25 ವಿದೇಶಿಯರೂ ಇದ್ದಾರೆ.

ಮುನ್ನೆಚ್ಚರಿಕೆ ಕ್ರಮವಾಗಿ ದೇಶದಲ್ಲಿ ಸೋಂಕು ಹಬ್ಬದಂತೆ ವ್ಯಾಪಕ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ, ಸಾಂಕ್ರಾಮಿಕ ಪಿಡುಗಿನ ಆರ್ಭಟ ಮುಂದುವರಿದಿದೆ. ಈಗಾಗಲೇ ಕರ್ನಾಟಕ ಸೇರಿದಂತೆ 20ಕ್ಕೂ ಹೆಚ್ಚು ರಾಜ್ಯಗಳು ಸ್ತಭ್ದವಾಗಿದ್ದು, ಜನಜೀವನ ಅಯೋಮಯವಾಗಿದೆ. ಕೊರೊನಾ ನಿಯಂತ್ರಣಕ್ಕೆ ಬರದಿದ್ದಲ್ಲಿ ಮುಂದಿನ ದಿನಗಳಲ್ಲಿ ಈ ಪ್ರಕರಣ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.

Facebook Comments