ಇಂದು 8,932 ಮಂದಿಗೆ ಪಾಸಿಟಿವ್ : ಕೊರೊನಾ ಸೋಂಕಿತ ದೇಶಗಳ ಪಟ್ಟಿಯಲ್ಲಿ 7ನೇ ಸ್ಥಾನಕ್ಕೇರಿದ ಭಾರತ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಮುಂಬೈ, ಜೂ. 1-ದೇಶಾದ್ಯಂತ ಕಿಲ್ಲರ್ ಕೋವಿಡ್-19 ವೈರಸ್‍ರಣಕೇಕೆ ಮತ್ತಷ್ಟುತೀವ್ರಗೊಂಡಿದ್ದು 24 ತಾಸುಗಳ ಅವಧಿಯಲ್ಲಿದಾಖಲೆ ಪ್ರಮಾಣದ 8,932 ಮಂದಿಗೆ ಸೋಂಕು ತಗುಲಿದೆ. ಇದೇಅವಧಿಯಲ್ಲಿ230 ರೋಗಿಗಳು ಬಲಿಯಾಗಿದ್ದಾರೆ.  ಕೇಂದ್ರ ಮತ್ತುರಾಜ್ಯ ಸರ್ಕಾರಗಳು ಕಿಲ್ಲರ್‍ ಕೊರೊನಾ ವೈರಸ್ ನಿಗ್ರಹಕ್ಕಾಗಿ ನಿರಂತರ ಸಂಘಟಿತ ಹೋರಾಟ ನಡೆಸುತ್ತಿದ್ದರೂ ಹೆಮ್ಮಾರಿಯ ಅಟ್ಟಹಾಸ ಮತ್ತಷ್ಟುತೀವ್ರಗೊಂಡಿದ್ದು, ಜೂನ್ ತಿಂಗಳ ಆರಂಭದ ದಿನವೇ ಆತಂಕಕಾರಿ ಮಟ್ಟದಲ್ಲಿ ಸೋಂಕು ಮತ್ತು ಸಾವು ಹೆಚ್ಚಾಗುತ್ತಿದೆ.

ಈವರೆಗೆ ಮೃತರ ಸಂಖ್ಯೆ 5,400 ಹಾಗೂ ರೋಗಪೀಡಿತರ ಸಂಖ್ಯೆ 1.19 ಲಕ್ಷದಾಟಿದೆ. ದೇಶದಲ್ಲಿ ಸತತ11 ದಿನ 6,000ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಅಲ್ಲದೇ 7,000ಕ್ಕೂ ಅಧಿಕ ಪಾಸಿಟಿವ್ ಕೇಸ್‍ಗಳು ಪತ್ತೆಯಾದ ನಾಲ್ಕನೇ ದಿನವಾಗಿದ್ದುದೇಶದಗಂಭೀರ ಸ್ಥಿತಿಗೆ ಸಾಕ್ಷಿಯಾಗಿದೆ. ಸಾಂಕ್ರಾಮಿಕ ರೋಗ ಉಲ್ಬಣಗೊಂಡ ನಂತರದೇಶದಲ್ಲಿ 8,932 ಮಂದಿಗೆ ತಗುಲಿರುವುದುಗರಿಷ್ಠ ಮಟ್ಟದಾಗಿದ್ದು, ದಾಖಲೆ ಮಟ್ಟದ ಭಾರೀಜಿಗಿತವಾಗಿದೆ. 8,300ಕ್ಕೂ ಅಧಿಕ ಸೋಂಕು ಪ್ರಕರಣ ವರದಿಯಾದ ಎರಡನೇ ದಿನ ಇದಾಗಿದೆ.

ನಿನ್ನೆ ಒಂದೇ ದಿನ ಅಂದರೆ 24 ತಾಸುಗಳ ಅವಧಿಯಲ್ಲಿ 8,932 (ಶನಿವಾರ8,380 ಶುಕ್ರವಾರ7.964, ಗುರುವಾರ 7,466, ಬುಧವಾರ 6,566 ಮಂಗಳವಾರ 6,387, ಸೋಮವಾರ6,535, ಭಾನುವಾರ6,977, ಶನಿವಾರ6,767, ಶುಕ್ರವಾರ6,654, ಮತ್ತು ಗುರುವಾರ 6,088 ಕೇಸ್‍ಗಳು) ಜನರಿಗೆ ಸೋಂಕು ದೃಢಪಟ್ಟಿದೆ. ಸಾಂಕ್ರಾಮಿಕ ರೋಗ ಉಲ್ಬಣದಲ್ಲಿ ನಿರಂತರ11 ದಿನದ ಭಾರೀ ಜಿಗಿತ ಇದಾಗಿದೆ.ಅಲ್ಲದೇಕಳೆದ 11 ದಿನಗಳಲ್ಲಿ ಒಂಭತ್ತು ದಿವಸಗಳಿಂದಲೂ6,500ಕ್ಕೂ ಹೆಚ್ಚು ಪಾಸಿಟಿವ್ ಕೇಸ್‍ಗಳು ದಾಖಲಾಗಿವೆ.

ನಿನ್ನೆಒಂದೇ ದಿನ ದೇಶದ ವಿವಿಧ ರಾಜ್ಯಗಳಲ್ಲಿ ಒಟ್ಟು230 ಮಂದಿ ಸಾವಿಗೀಡಾಗಿದ್ದು, ಒಟ್ಟಾರೆ ಮೃತ ಸಂಖ್ಯೆ5,394ಕ್ಕೇರಿದೆ. ಭಾರತದಲ್ಲಿ. ಸೋಂಕು ಪೀಡಿತರ ಸಂಖ್ಯೆ 1,90,535ತಲುಪಿದೆಎಂದುಕೇಂದ್ರಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.  ಇಂದು ಮಧ್ಯರಾತ್ರಿಯೊಳಗೆ ಸಾವಿನ ಸಂಖ್ಯೆ ಸುಮಾರು 5,650 ಮತ್ತುಸೋಂಕಿತರ ಪ್ರಮಾಣ1.98 ಲಕ್ಷದಾಟುವಆತಂಕವೂಇದೆ. ಅಲ್ಲದೇ ಭಾರತದಲ್ಲಿ ರೋಗಿಗಳ ಸಂಖ್ಯೆ 2 ಲಕ್ಷಕ್ಕೇರುವ ಭೀತಿಯೂಕಾಡುತ್ತಿದೆ.

ಮೇ ತಿಂಗಳಿನಲ್ಲಿ ದೇಶದ ವಿವಿಧೆಡೆಅತಿ ಹೆಚ್ಚು ಸೋಂಕು ಪ್ರಕರಣಗಳುದೇಶದ ವಿವಿಧ ರಾಜ್ಯಗಳಲ್ಲಿ ವರದಿಯಾಗುತ್ತಲೇಇದ್ದು, ದಿನೇ ದಿನೇ ಆಘಾತಕಾರಿ ಮಟ್ಟದಲ್ಲಿ ಉಲ್ಬಣಗೊಳ್ಳುತ್ತಿದೆ. ತಿಂಗಳ ಕೊನೆ ದಿನವಾದನಿನ್ನೆಹೆಮ್ಮಾರಿಅಬ್ಬರ ಭಯಾನಕವಾಗಿಕಂಡುಬಂದಿದೆ. ಜೂನ್‍ನಲ್ಲಿ ಸಾಂಕ್ರಾಮಿಕರೋಗ ಮತ್ತು ಸಾವಿನ ಪ್ರಕರಣ ಮತ್ತಷ್ಟು ಹೆಚ್ಚಾಗುವ ಆತಂಕವೂಇದೆ.

ನಿನ್ನೆ ಬೆಳಗ್ಗೆ 8 ಗಂಟೆಯಿಂದ24 ಗಂಟೆಗಳ ಅವಧಿಯಲ್ಲಿದೇಶದ ವಿವಿಧ ರಾಜ್ಯಗಳಲ್ಲಿ 230ಮಂದಿಯನ್ನುಕಿಲ್ಲರ್‍ಕೊರೊನಾ ಬಲಿ ತೆಗೆದುಕೊಂಡಿದೆ.  ಮಹಾರಾಷ್ಟ್ರದಲ್ಲಿ89,ದೆಹಲಿ 57, ಗುಜರಾತ್ 31, ತಮಿಳುನಾಡು 13, ಉತ್ತರ ಪ್ರದೇಶ 12, ಪಶ್ಚಿಮ ಬಂಗಾಳ 8,ಮಧ್ಯಪ್ರದೇಶ5, ತೆಲಂಗಾಣ 5, ಕರ್ನಾಟಕ 3, ಹಿಮಾಚಲ ಪ್ರದೇಶ 2, ಹಾಗೂ ಬಿಹಾರ, ಪಂಜÁಬ್, ಮತ್ತುರಾಜಸ್ತಾನರಾಜ್ಯಗಳಲ್ಲಿತಲಾಒಂದು ಸಾವು ಪ್ರಕರಣ ವರದಿಯಾಗಿದೆ.

ಈವರೆಗೆ ಸಂಭವಿಸಿರುವ 5,394 ಸಾವು ಪ್ರಕರಣಗಳಲ್ಲಿ, ಮಹಾರಾಷ್ಟ್ರ ಎಂದಿನಂತೆ ಪ್ರಥಮ ಸ್ಥಾನದಲ್ಲಿಯೇ ಮುಂದುವರಿದಿದೆ. ಆ ರಾಜ್ಯದಲ್ಲಿಸಾವಿನ ಸಂಖ್ಯೆ 2,300ರ ಸನಿಹದಲ್ಲಿದೆ. ಈವರೆಗೆ 2,286ಮಂದಿ ಸಾವಿಗೀಡಾಗಿದ್ದು, ಸೋಂಕಿತರ ಸಂಖ್ಯೆಯಲ್ಲಿಯೂ ಭಾರೀಏರಿಕೆಕಂಡುಬಂದಿದೆ. 65,000ಕ್ಕೂ ಹೆಚ್ಚು ಮಂದಿ ರೋಗ ಪೀಡಿತರಾಗಿದ್ದಾರೆ.  ಎರಡನೇ ಸ್ಥಾನದಲ್ಲಿರುವಗುಜರಾತ್‍ನಲ್ಲಿ 1,038 ಸಾವುಗಳು ಸಂಭವಿಸಿವೆ. ನಂತರದ ಸ್ಥಾನಗಳಲ್ಲಿದೆಹಲಿ (473), ಮಧ್ಯಪ್ರದೇಶ (350), ಪಶ್ಚಿಮ ಬಂಗಾಳ (317), ಉತ್ತರ ಪ್ರದೇಶ (213),ರಾಜಸ್ಥಾನ (194),ತಮಿಳುನಾಡು (173),ತೆಲಂಗಾಣ (82),

ಆಂಧ್ರಪ್ರದೇಶ(62), ಕರ್ನಾಟಕ(51),ಹಾಗೂ ಪಂಜಾಬ್ (45) ರಾಜ್ಯಗಳಿವೆ. ಜಮ್ಮು-ಕಾಶ್ಮೀರ28,ಬಿಹಾರ 21, ಹರಿಯಾಣ 20,ಕೇರಳ 9, ಒಡಿಶಾಏಳು, ಹಿಮಾಚಲ ಪ್ರದೇಶ, ಜÁರ್ಖಂಡ್ ಮತ್ತು ಉತ್ತರಾಖಂಡ ತಲಾ 5,ಅಸ್ಸಾಂ ಮತ್ತುಚಂಡಿಗಢ ತಲಾ ನಾಲ್ಕು, ಹಾಗೂ ಪುದುಚೇರಿ, ಮತ್ತು ಮೇಘಾಲಯ ರಾಜ್ಯಗಳಲ್ಲಿ ತಲಾಒಂದೊಂದು ಸಾವುಗಳು ವರದಿಯಾಗಿವೆ.

ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ ಸಹ ಹೆಚ್ಚಾಗುತ್ತಿದ್ದು, 93,322ಕ್ಕೇರಿದೆ. ಈವರೆಗೆ 91,818 ಮಂದಿ ಗುಣಮುಖರಾಗಿದ್ದಾರೆ. ದೇಶದಲ್ಲಿ ವೈರಾಣು ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯಲ್ಲಿ ಶೇ.48.19ರಷ್ಟು ವೃದ್ದಿ ಕಂಡುಬಂದಿರುವುದು ಸಮಾಧಾನಕರ ಸಂಗತಿಯಾದರೂ, ಮತ್ತೊಂದಡೆ ಸೋಂಕು ಮತ್ತು ಸಾವು ಹೆಚ್ಚಾಗುತ್ತಿರುವುದು ಕಳವಳಕಾರಿಯಾಗಿದೆ.

ಇಂದು ಬೆಳಗ್ಗೆಯೂ ಕೆಲವು ರಾಜ್ಯಗಳಲ್ಲಿ ಸಾವು ಪ್ರಕರಣಗಳು ವರದಿಯಾಗಿದೆ. ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ರಾಜಸ್ತಾನ,ಉತ್ತರ ಪ್ರದೇಶ, ಪಶ್ಚಿಮ ಬಂಗಾಳ,ದೆಹಲಿ, ಕರ್ನಾಟಕ, ತಮಿಳುನಾಡು, ತೆಲಂಗಾಣ,ಆಂಧ್ರಪ್ರದೇಶ, ಪಂಜಾಬ್,ಓಡಿಶಾಮತ್ತಿತರ ರಾಜ್ಯಗಳಲ್ಲಿ ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿವೆ.

ಕೊರೊನಾ ವೈರಸ್ ಸೋಂಕು ಮತ್ತು ಸಾವಿನ ಪ್ರಕರಣದಲ್ಲಿ ಚೀನಾವನ್ನು ಹಿಂದಿಕ್ಕಿರುವ ಭಾರತ ಈಗ ಏಷ್ಯಾದ ಅತಿ ಹೆಚ್ಚು ಬಾಧಿತದೇಶವಾಗಿದೆ. ಅಲ್ಲದೇ ವಿಶ್ವದಲ್ಲೇ ಅತಿ ಹೆಚ್ಚು ಕೋವಿಡ್-19 ಪ್ರಕರಣಗಳಲ್ಲಿ ಭಾರತ ಏಳನೇ ಸ್ಥಾನಕ್ಕೇರಿದೆ. ಒಂಭತ್ತನೇ ಸ್ಥಾನದಲ್ಲಿದ್ದ ಭಾರತ ಜರ್ಮನಿಯನ್ನು ಹಿಂದಿಕ್ಕೆ ಏಳನೇ ಸ್ಥಾನದಲ್ಲಿದೆ.

ಸಾಂಕ್ರಾಮಿಕರೋಗ ಮತ್ತು ಸಾವು ಪ್ರಕರಣಗಳ ಪ್ರಮಾಣಆಘಾತಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿರುವಾಗಲೇ ಸಮುದಾಯ ಸೋಂಕು ಸಾಧ್ಯತೆಯ ಭೀತಿಯೂ ಭಾರತೀಯರನ್ನು ಮತ್ತಷ್ಟು ಭಯಭೀತಗೊಳಿಸಿದೆ. ನಾಲ್ಕನೆ ಹಂತದ ಲಾಕ್‍ಡೌನ್ ನಿನ್ನೆ ಕೊನೆಗೊಂಡಿದ್ದು,ಇಂದಿನಿಂದಜೂನ್ ತಿಂಗಳಾಂತ್ಯದವರೆಗೆ ಮೂರು ಸ್ತರಗಳಲ್ಲಿ ಅನ್‍ಲಾಕ್‍ಜÁರಿಗೆ ಬರಲಿದೆ.

Facebook Comments