ಬ್ರೇಕಿಂಗ್ : ರಾಜ್ಯದಲ್ಲಿ ಇಂದು 947 ಮಂದಿಗೆ ಕೊರೋನಾ ಪಾಸಿಟಿವ್, 20 ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ರಾಜ್ಯದಲ್ಲಿ ಮಂಗಳವಾರವೂ ಕೊರೋನಾ ಅರ್ಭಟ ಮುಂದುವರೆದಿದ್ದು, 997 ಹೊಸದಾಗಿ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ.ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 15242ಕ್ಕೆ ಏರಿಕೆಯಾಗಿದೆ.

ಭಾನುವಾರ ಮತ್ತು ಸೋಮವಾರಕ್ಕೆ ಹೋಲಿಸಿದರೆ, ಸಾವಿರ ಗಡಿ ದಾಟಿಲ್ಲ ಎನ್ನುವುದಷ್ಟೇ ಸಮಾಧಾನಕರ ಸಂಗತಿ. ಮತ್ತೊಂದು ಆಘಾತಕಾರಿ ಬೆಳವಣಿಗೆಯಲ್ಲಿ ಕೊರೋನಾ ಸೋಂಕಿನಿಂದಲೇ ಮಂಗಳವಾರ ರಾಜ್ಯಾದ್ಯಂತ ಒಟ್ಟು 20 ಮಂದಿ ಸಾವನ್ನಪ್ಪಿದ್ದಾರೆ.

ಇದರಿಂದ ಜನತೆಯಲ್ಲಿ ಇನ್ನಷ್ಟು ಆತಂಕ ಸೃಷ್ಟಿ ಮಾಡಿದೆ. ರಾಜ್ಯದಲ್ಲಿ ಕೋವಿಡ್ ಸಾವಿನ ಸಂಖ್ಯೆ 246ಕ್ಕೇರಿದೆ. ಇದುವರೆಗೂ ಬೆಂಗಳೂರಿನಲ್ಲಿ ಅತಿ ಹೆಚ್ಚು ಎಂಬಂತೆ 81 ಜನ ಮೃತಪಟ್ಟಿದ್ದರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಹಾವೇರಿ 49, ದಕ್ಷಿಣ ಕನ್ನಡ 44, ಉತ್ತರ ಕನ್ನಡ 40, ವಿಜಯಪುರ 39, ಶಿವಮೊಗ್ಗ 22, ಬೆಂಗಳೂರು ಗ್ರಾಮಾಂತರ 21, ಬೀದರ್‌ 17, ಧಾರವಾಡ 17 ಹಾಸನ 16, ಕಲಬುರಗಿ 15, ರಾಯಚೂರು 15, ಚಿಕ್ಕಬಳ್ಳಾಪುರ 13, ದಾವಣಗೆರೆ 12, ರಾಮನಗರ 12, ಚಿಕ್ಕಮಗಳೂರು 10, ಉಡುಪಿ 9, ಮೈಸೂರು 9, ಬಾಗಲಕೋಟೆ 4, ಕೊಡಗು 4, ಕೋಲಾರ 3, ಚಿತ್ರದುರ್ಗ 3, ಯಾದಗಿರಿ 2, ಮಂಡ್ಯ 2, ಬೆಳಗಾವಿ 2, ಗದಗ 2, ತುಮಕೂರು 1 ಪ್ರಕರಣ ದೃಢಪಟ್ಟಿದೆ. ಬಳ್ಳಾರಿಯಲ್ಲಿ 31 ವರ್ಷದ ಮಹಿಳೆ ಸೇರಿದಂತೆ 6 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

ಉಳಿದಂತೆ ಬೆಂಗಳೂರಿನಲ್ಲಿ 4, ಹಾವೇರಿ, ಧಾರವಾಡ, ವಿಜಯಪುರದಲ್ಲಿ ತಲಾ 2, ಕೋಲಾರ, ದಾವಣಗೆರೆ, ಬೆಳಗಾವಿ, ಮೈಸೂರು ಜಿಲ್ಲೆಗಳಲ್ಲಿ ತಲಾ ಒಂದು ಕೋವಿಡ್ ಸಾವಿನ ಪ್ರಕರಣ ವರದಿಯಾಗಿದೆ.

ರಾಜ್ಯದ ಕೋವಿಡ್ ಆಸ್ಪತ್ರೆಗಳ ತೀವ್ರ ನಿಗಾ ಘಟಕಗಳಲ್ಲಿ ಒಟ್ಟು 271 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಬೆಂಗಳೂರು ನಗರ ಒಂದರಲ್ಲೇ 171 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದು ಬಳ್ಳಾರಿ 92, ಕಲಬುರಗಿ 47, ವಿಜಯಪುರ 15, ಮೈಸೂರು 14, ಉಡುಪಿ 11, ಬೀದರ್‌ 11, ಬೆಂಗಳೂರು ನಗರ 10, ದಾವಣಗೆರೆ 8, ಕೊಪ್ಪಳ 6, ಹಾಸನ 6, ಧಾರವಾಡ 5, ಬೆಳಗಾವಿ 3, ಚಿತ್ರದುರ್ಗ 2, ಯಾದಗಿರಿ 2, ದಕ್ಷಿಣ ಕನ್ನಡ , ಚಿಕ್ಕಮಗಳೂರು, ಕೋಲಾರದಲ್ಲಿ ತಲಾ ಒಬ್ಬರು ಸೇರಿದಂತೆ ಒಟ್ಟು 235 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಒಟ್ಟು 271 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರು 171, ಧಾರವಾಡ 17, ಕಲಬುರಗಿ 14, ಬೀದರ್‌ 8, ದಕ್ಷಿಣ ಕನ್ನಡ 8, ಬಳ್ಳಾರಿ 7, ಹಾಸನ 6, ಮೈಸೂರು 5, ದಾವಣಗೆರೆ 4, ಗದಗ 4, ರಾಯಚೂರು 4, ಉಡುಪಿ, ವಿಜಯಪುರ, ಚಾಮರಾಜನಗರ, ತುಮಕೂರು, ಕೋಲಾರ, ಕೊಪ್ಪಳ, ಬೆಳಗಾವಿ, ಕೊಡಗು, ಉತ್ತರ ಕನ್ನಡ, ಬಾಗಲಕೋಟೆಯಲ್ಲಿ ತಲಾ ಒಬ್ಬರು ಐಸಿಯುನಲ್ಲಿದ್ದಾರೆ.  ರಾಜ್ಯದಲ್ಲಿ ಒಟ್ಟು 7,074 ಸಕ್ರಿಯ ಪ್ರಕರಣಗಳಿದ್ದು, 7,918 ಮಂದಿ ಬಿಡುಗಡೆಯಾಗಿದ್ದಾರೆ.

Facebook Comments

Sri Raghav

Admin