ಮುಂದುವರಿದ ಕೋವಿಡ್-19 ಅಟ್ಟಹಾಸ, ಮೃತರ ಸಂಖ್ಯೆ 2,100ಕ್ಕೇರಿಕೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೀಜಿಂಗ್, ಫೆ.19- ಮಾರಕ ಕೊರೋನಾ ವೈರಾಣು(ಕೋವಿಡ್-19) ಸೋಂಕಿನಿಂದಾಗಿ ಚೀನಾದ ವಿವಿಧ ಪ್ರಾಂತ್ಯಗಳಲ್ಲಿ ಸಾವಿನ ಸರಣಿ ಮುಂದುವರಿದಿದ್ದು, ಮೃತರ ಸಂಖ್ಯೆ 2,100ಕ್ಕೇ ಏರಿದ್ದು 75,000ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಸಾವಿನ ಮನೆಯಂತಾಗಿರುವ ವುಹಾನ್ ಸೇರಿದಂತೆ ಹೆಬೀ ಪ್ರಾಂತ್ಯದ ವಿವಿಧೆಡೆ ಹೊಸ ಹೊಸ ಸೋಂಕು ಪ್ರಕರಣಗಳು ಪತ್ತೆಯಾಗುತ್ತಲೇ ಇದ್ದು, ಮರಣ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.

ಈ ಪ್ರಾಂತ್ಯದಲ್ಲಿ ನಿನ್ನೆ ಒಂದೇ ದಿನ 1,750ಕ್ಕೂ ಹೆಚ್ಚು ರೋಗ ಪ್ರಕರಣಗಳು ದೃಢಪಟ್ಟಿದ್ದು, ಇವರಲ್ಲಿ 100ಕ್ಕೂ ಅಧಿಕ ಜನರು ಸಾವಿಗೀಡಾಗಿದ್ದಾರೆ. ರೋಗ ಪೀಡಿತರ ಒಟ್ಟು ಸಂಖ್ಯೆ 75,000 ದಾಟಿರುವುದು ಪರಿಸ್ಥಿತಿಯ ಭೀಕರತೆಗೆ ಸಾಕ್ಷಿಯಾಗಿದೆ.

ಹೆಬೀ ಪ್ರಾಂತ್ಯದ ವುಹಾನ್‍ನ ಆಸ್ಪತ್ರೆಗಳು ಕೊರೋನಾ ವೈರಸ್ ರೋಗಿಗಳಿಂದ ತುಂಬಿ ತುಳುಕುತ್ತಿದೆ. ಸೋಂಕು ಪೀಡಿತರ ಸಂಖ್ಯೆ ದಿನೇ ದಿನೇ ಏರುತ್ತಿರುವುದು ವೈದ್ಯಕೀಯ ಸಿಬ್ಬಂದಿಗೆ ಶೂಶ್ರುಷೆ ಮಾಡಲು ದೊಡ್ಡ ಸವಾಲಾಗಿ ಪರಿಣಮಿಸಿದೆ.

Facebook Comments

Sri Raghav

Admin