ಕಳೆದ 24 ಗಂಟೆಯಲ್ಲಿ ದೇಶದಾದ್ಯಂತ 72,049 ಮಂದಿಗೆ ಕೊರೋನಾ, 986 ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಮುಂಬೈ, ಅ.7- ಡೆಡ್ಲಿ ಕೊರೊನಾ ವೈರಸ್ ಅಬ್ಬರದ ಏರಿಳಿತ ಮುಂದುವರಿದಿದೆ. ಸತತ ಐದು ದಿನಗಳ ಇಳಿಮುಖದ ನಂತರ ಮತ್ತೆ ಹೊಸ ಪಾಸಿಟಿವ್ ಪ್ರಕರಣಗಳಲ್ಲಿ ಅಲ್ಪ ಏರಿಕೆ ಕಂಡುಬಂದಿದೆ. ಬಹು ದಿನಗಳ ಬಳಿಕ ಮೊನ್ನೆ ಮೊದಲ ಬಾರಿಗೆ 61,000+ಗೆ ಇಳಿದು ಕಿಲ್ಲರ್ ಪಿಡುಗು ನಿಯಂತ್ರಣದ ಮುನ್ಸೂಚನೆಯ ಆಶಾಭಾವದ ನಡುವೆ ನಿನ್ನೆ ಮತ್ತೆ ಹೊಸ ಕೇಸ್‍ಗಳಲ್ಲಿ ಏರಿಕೆಯಾಗಿದೆ.

ಸತತ 17 ದಿನಗಳಿಂದ ಸಕ್ರಿಯ ಪ್ರಕರಣಗಳೂ ಸಹ ಕ್ಷೀಣಿಸುತ್ತಿರುವುದು ಇನ್ನೊಂದೆಡೆ ಆಶಾದಾಯಕ ಬೆಳವಣಿಗೆಯಾಗಿದೆ. ಇವುಗಳ ನಡುವೆಯೂ ದೇಶದಲ್ಲಿ ಸೋಂಕಿತರ ಪ್ರಮಾಣ 68 ಲಕ್ಷ ಸನಿಹ ಮತ್ತು ಮೃತರ ಸಂಖ್ಯೆ 1.04 ಲಕ್ಷ ದಾಟಿದ್ದು, ಜನರು ಕೊರೊನಾ ಮಹಾಮಾರಿಯನ್ನು ದಿನನಿತ್ಯ ಶಪಿಸುವಂತಾಗಿದೆ.

ಆರು ದಿನಗಳ ಹಿಂದೆ ವೈರಸ್ ಸೋಂಕು ಪ್ರಕರಣಗಳಲ್ಲಿ ಏರಿಕೆ ಕಂಡುಬಂದ ಬೆನ್ನಲ್ಲೇ ಗುರುವಾರದಿಂದ ಸೋಮವಾರದವರೆಗೆ ಪಾಸಿಟಿವ್ ಕೇಸ್‍ನಲ್ಲಿ ಇಳಿಮುಖ ಮುಂದುವರಿದಿತ್ತು. ನಿನ್ನೆ ಮತ್ತೆ ಏರಿಕೆ ವರದಿಯಾಗಿದೆ.

ನಿನ್ನೆ 72,069 ಪ್ರಕರಣಗಳು ವರದಿಯಾಗಿವೆ. ಸೋಮವಾರ ಮತ್ತು ಭಾನುವಾರ ಅನುಕ್ರಮವಾಗಿ 61,267 ಮತ್ತು 74,442ರಷ್ಟಿತ್ತು. ಇದರೊಂದಿಗೆ ಸತತ ಐದು ದಿನಗಳ ಇಳಿಕೆ ನಂತರ ಹೊಸ ಸೋಂಕು ಪ್ರಕರಣಗಳ ಏರಿಕೆ ಗೋಚರಿಸಿದೆ. ಈವರೆಗೆ ಗುಣಮುಖರಾದ ಸೋಂಕಿತರ ಸಂಖ್ಯೆ 58 ಲಕ್ಷ ಸನಿಹದಲ್ಲಿದೆ.  ದೇಶದಲ್ಲಿ ಸೋಂಕಿತರ ಸಂಖ್ಯೆ 67.57 ಲಕ್ಷ ಮೀರಿದ್ದು, ಈವರೆಗೆ 57.44 ಲಕ್ಷಕ್ಕೂ ಹೆಚ್ಚು ಮಂದಿ ಗುಣಮುಖರಾಗಿದ್ದಾರೆ.

ನಿನ್ನೆ ಒಂದೇ ದಿನ 61,267ಕ್ಕೂ ಹೆಚ್ಚು ಮಂದಿಗೆ ಸೋಂಕು ತಗಲಿದ್ದು, ಮೊನ್ನೆಗೆ ಹೋಲಿಸಿದರೆ 10,782 ಪ್ರಕರಣಗಳು ಏರಿಕೆಯಾಗಿವೆ. ಒಟ್ಟು ರೋಗಿಗಳ ಸಂಖ್ಯೆ 68 ಲಕ್ಷ ಸನಿಹದಲ್ಲಿದೆ. ಇದೇ ವೇಳೆ ಸಾವಿನ ಪ್ರಮಾಣದಲ್ಲಿಯೂ ಏರಿಕೆ ಕಂಡುಬಂದಿದೆ. ಒಂದೇ ದಿನ 986 (ಮೊನ್ನೆ 884) ರೋಗಿಗಳನ್ನು ಕೊರೊನಾ ಮಹಾಮಾರಿ ಬಲಿ ತೆಗೆದುಕೊಂಡಿದೆ. ಇದರೊಂದಿಗೆ ದೇಶದಲ್ಲಿ ಮೃತರ ಸಂಖ್ಯೆ 1,04,555 ದಾಟಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಭಾರತದಲ್ಲಿ ಒಟ್ಟು ರೋಗಿಗಳ ಸಂಖ್ಯೆ 66,57,741ಕ್ಕೇರಿದ್ದು, ನಾಳೆ ವೇಳೆಗೆ 68 ಲಕ್ಷ ದಾಟಲಿದೆ. ಆಗಸ್ಟ್ 7ರಂದು 20 ಲಕ್ಷ ಇದ್ದ ಪಾಸಿಟಿವ್ ಪ್ರಕರಣಗಳು ಆ.23ಕ್ಕೆ 30 ಲಕ್ಷಕ್ಕೇರಿತ್ತು. ನಂತರ ಸೆಪ್ಟೆಂಬರ್ 5ರಂದು 40 ಲಕ್ಷ ದಾಟಿತ್ತು. ಕೇವಲ 11 ದಿನಗಳಲ್ಲಿ ಅಂದರೆ ಸೆ.16ರಂದು 50 ಲಕ್ಷ ದಾಟಿದೆ. ಸೆ.28ರಂದು 60 ಲಕ್ಷ ಮೀರಿದೆ.

ಚೇತರಿಕೆ ಪ್ರಮಾಣ ಶೇ.85.02ರಷ್ಟು ವೃದ್ಧಿ ಕಂಡುಬಂದಿದೆ. ಕಳೆದ ಎರಡು ವಾರಗಳಿಗೂ ಹೆಚ್ಚು ಕಾಲದಿಂದ ಹೊಸ ಸಕ್ರಿಯ ಪ್ರಕರಣಗಳಲ್ಲಿ ನಿರಂತರ ಇಳಿಕೆ ಕಂಡುಬಂದಿದ್ದು, 10 ಲಕ್ಷ ಪ್ರಮಾಣಕ್ಕಿಂತಲೂ ಕಡಿಮೆ ವರದಿಯಾಗಿದ್ದು, ದಿನೇ ದಿನೇ ಇದು ಕ್ಷೀಣಿಸುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

ಈವರೆಗೆ ದೇಶದಲ್ಲಿ 8.22 ಕೋಟಿಗೂ ಅಕ ಜನರ ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಇನ್ನೂ 9.07 ಲಕ್ಷ ಸಕ್ರಿಯ ಕೇಸ್‍ಗಳೊಂದಿಗೆ ಪಾಸಿಟಿವ್ ಪ್ರಕರಣಗಳೊಂದಿಗೆ ಇಳಿಮುಖ ಮುಂದುವರಿದಿದೆ. ಏತನ್ಮಧ್ಯೆ, 57.44 ಲಕ್ಷ ಮಂದಿ ಹೆಮ್ಮಾರಿಯ ಬಿಗಿಹಿಡಿತದಿಂದ ಪಾರಾಗಿದ್ದಾರೆ.

ದೇಶದಲ್ಲಿ ಈಗ 9,07,883 ಆಕ್ಟಿವ್ ಕೇಸ್‍ಗಳಿವೆ 57,44,693 ಮಂದಿ ಚೇತರಿಸಿಕೊಂಡಿದ್ದು, ಗುಣಮುಖ ಪ್ರಕರಣ ಶೇ.85.02ಕ್ಕೇರಿದ್ದು, ಮರಣ ಪ್ರಮಾಣ ಶೇ.1.54ಕ್ಕೆ ಇಳಿದಿದೆ. ಸಕ್ರಿಯ ಪ್ರಕರಣಗಳಿಗೆ ಹೋಲಿಸಿದಲ್ಲಿ, ರಿಕವರಿ ರೇಟ್‍ನಲ್ಲಿ ನಾಲ್ಕು ಪಟ್ಟುಗಳಿಗಿಂತಲೂ ಅಕ ಹೆಚ್ಚಳ ಕಂಡುಬಂದಿರುವುದು ಸಮಾಧಾನಕರ ಸಂಗತಿ.

ಇಂದು ಬೆಳಗ್ಗೆಯಿಂದಲೂ ದೇಶದ ಬಹುತೇಕ ರಾಜ್ಯಗಳಲ್ಲಿ ಹೊಸ ಸೋಂಕು ಮತ್ತು ಸಾವಿನ ಪ್ರಕರಣಗಳು ವರದಿಯಾಗುತ್ತಲೇ ಇವೆ. ಮಹಾರಾಷ್ಟ್ರ ರಾಜ್ಯವು ಸೋಂಕು ಮತ್ತು ಸಾವಿನ ಸಂಖ್ಯೆಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿದಿದೆ.

ದೇಶದಾದ್ಯಂತ ನಿನ್ನೆ ಒಂದೇ ದಿನ ಸುಮಾರು 12 ಲಕ್ಷ ಜನರ ಸ್ಯಾಂಪಲ್‍ಗಳನ್ನು ಪರೀಕ್ಷಿಸಲಾಗಿದ್ದು, ಈವರೆಗೆ 8.22 ಕೋಟಿಗೂ ಅಕ ಮಂದಿಯ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ತಿಳಿಸಿದೆ.

Facebook Comments

Sri Raghav

Admin