ಭಾರತದಲ್ಲಿ 8.46 ಲಕ್ಷಕ್ಕೆ ತಗ್ಗಿದ ಕೊರೋನಾ ಸಕ್ರಿಯ ಪ್ರಕರಣಗಳ ಸಂಖ್ಯೆ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಮುಂಬೈ, ಅ.9- ಡೆಡ್ಲಿ ಕೊರೊನಾ ವೈರಸ್ ಅಬ್ಬರದ ಏರಿಳಿತ ಮುಂದುವರಿದಿದೆ. ಸತತ ಐದು ದಿನಗಳ ಇಳಿಮುಖದ ನಂತರ ಮತ್ತೆ ಎರಡನೇ ದಿನ ಹೊಸ ಪಾಸಿಟಿವ್ ಪ್ರಕರಣಗಳಲ್ಲಿ ಏರಿಕೆ ಕಂಡುಬಂದ ಬೆನ್ನಲ್ಲೇ ಮತ್ತೆ ಗಮನಾರ್ಹ ಇಳಿಕೆ ವರದಿಯಾಗಿದೆ.

ಇದೇ ವೇಳೆ ಸಕ್ರಿಯ ಪ್ರಕರಣದಲ್ಲಿ ಭಾರೀ ಇಳಿಕೆಯಾಗಿದ್ದು, ಆಕ್ಟಿವ್ ಕೇಸ್ 8.46 ಲಕ್ಷಕ್ಕೆ ಇಳಿದಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಮೂರು ದಿನಗಳ ಹಿಂದೆ ಮತ್ತೆ ಏರುಗತಿಯತ್ತ ಸಾಗಿದ್ದ ವೈರಸ್ ಆರ್ಭಟ ಕಡಿಮೆಯಾಗಿದೆ.ನಿನ್ನೆ ಹೊಸ ಕೇಸ್‍ಗಳಲ್ಲಿ ಇಳಿಕೆಯಾಗಿದ್ದು, 70,500 ಹೊಸ ಪ್ರಕರಣಗಳು ವರದಿಯಾಗಿದೆ. ಮೊನ್ನೆಗೆ ಹೋಲಿಸಿದಲ್ಲಿ ಇದು 8,000ರಷ್ಟು ಕಡಿಮೆಯಾಗಿದೆ.

ಇದೇ ವೇಳೆ ಸತತ 19 ದಿನಗಳಿಂದ ಸಕ್ರಿಯ ಪ್ರಕರಣಗಳೂ ಸಹ ಕ್ಷೀಣಿಸುತ್ತಿರುವುದು ಹಾಗೂ ಇದು ನಿನ್ನೆ 9 ಲಕ್ಷಕ್ಕಿಂತ ಕಡಿಮೆ ವರದಿಯಾಗಿರುವುದು ಇನ್ನೊಂದೆಡೆ ನಿರಾಳತೆ ಮೂಡಿಸಿದೆ. ಇವುಗಳ ನಡುವೆಯೂ ದೇಶದಲ್ಲಿ ಸೋಂಕಿತರ ಪ್ರಮಾಣ 70 ಲಕ್ಷ ಸನಿಹ ಮತ್ತು ಮೃತರ ಸಂಖ್ಯೆ 1.06 ಲಕ್ಷ ದಾಟಿದ್ದು, ಜನರಲ್ಲಿ ಆತಂಕವೂ ಮನೆಮಾಡಿದೆ.

ಏಳು ದಿನಗಳ ಹಿಂದೆ ವೈರಸ್ ಸೋಂಕು ಪ್ರಕರಣಗಳಲ್ಲಿ ಏರಿಕೆ ಕಂಡುಬಂದ ಬೆನ್ನಲ್ಲೇ ಗುರುವಾರದಿಂದ ಸೋಮವಾರದವರೆಗೆ ಪಾಸಿಟಿವ್ ಕೇಸ್‍ನಲ್ಲಿ ಇಳಿಮುಖ ಮುಂದುವರಿದಿತ್ತು. ಮಂಗಳವಾರ ಮತ್ತು ಬುಧವಾರ ಮತ್ತೆ ಏರಿಕೆಯಾಗಿತ್ತು. ನಿನ್ನೆ ಮತ್ತೆ ಹೊಸ ಕೇಸ್‍ಗಳು ಗಮನಾರ್ಹವಾಗಿ ತಗ್ಗಿದೆ.

ನಿನ್ನೆ 70,496 78,524 ಪ್ರಕರಣಗಳು ವರದಿಯಾಗಿದೆ ಮಂಗಳವಾರ ಮತ್ತು ಸೋಮವಾರ ಅನುಕ್ರಮವಾಗಿ 78,624 ಮತ್ತು 72,069ರಷ್ಟಿತ್ತು. ಈವರೆಗೆ ಗುಣಮುಖರಾದ ಸೋಂಕಿತರ ಸಂಖ್ಯೆ 60 ಲಕ್ಷ ಸನಿಹದಲ್ಲಿದೆ. ದೇಶದಲ್ಲಿ ಸೋಂಕಿತರ ಸಂಖ್ಯೆ 69.06 ಲಕ್ಷ ಮೀರಿದ್ದು, ಈವರೆಗೆ 59.06 ಲಕ್ಷಕ್ಕೂ ಹೆಚ್ಚು ಮಂದಿ ಗುಣಮುಖರಾಗಿದ್ದಾರೆ.

ನಿನ್ನೆ ಒಂದೇ ದಿನ 70,496ಕ್ಕೂ ಹೆಚ್ಚು ಮಂದಿಗೆ ಸೋಂಕು ತಗಲಿದ್ದು, ಮೊನ್ನೆಗೆ ಹೋಲಿಸಿದರೆ ಸುಮಾರು 8,000 ಪ್ರಕರಣಗಳು ಇಳಿಕೆಯಾಗಿವೆ. ಒಟ್ಟು ರೋಗಿಗಳ ಸಂಖ್ಯೆ 70 ಲಕ್ಷ ಸನಿಹದಲ್ಲಿದೆ.

ಇದೇ ವೇಳೆ ಸಾವಿನ ಪ್ರಮಾಣದಲ್ಲಿ ಅಲ್ಪ ಏರಿಕೆ ಕಂಡುಬಂದಿದೆ. ಒಂದೇ ದಿನ 964 (ಮೊನ್ನೆ 971) ರೋಗಿಗಳನ್ನು ಕೊರೊನಾ ಮಹಾಮಾರಿ ಬಲಿ ತೆಗೆದುಕೊಂಡಿದೆ. ಇದರೊಂದಿಗೆ ದೇಶದಲ್ಲಿ ಮೃತರ ಸಂಖ್ಯೆ 1,06,490 ದಾಟಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಭಾರತದಲ್ಲಿ ಒಟ್ಟು ರೋಗಿಗಳ ಸಂಖ್ಯೆ 69,06,151ಕ್ಕೇರಿದ್ದು, ನಾಳೆ ವೇಳೆಗೆ 70 ಲಕ್ಷ ದಾಟಲಿದೆ. ಆಗಸ್ಟ್ 7ರಂದು 20 ಲಕ್ಷ ಇದ್ದ ಪಾಸಿಟಿವ್ ಪ್ರಕರಣಗಳು ಆ.23ಕ್ಕೆ 30 ಲಕ್ಷಕ್ಕೇರಿತ್ತು. ನಂತರ ಸೆಪ್ಟೆಂಬರ್ 5ರಂದು 40 ಲಕ್ಷ ದಾಟಿತ್ತು. ಕೇವಲ 11 ದಿನಗಳಲ್ಲಿ ಅಂದರೆ ಸೆ.16ರಂದು 50 ಲಕ್ಷ ದಾಟಿದೆ. ಸೆ.28ರಂದು 60 ಲಕ್ಷ ಮೀರಿದೆ. ಅ.10ರಂದ 70 ಲಕ್ಷ ತಲುಪಲಿದೆ.

ರೋಗಿಗಳ ಚೇತರಿಕೆ ಪ್ರಮಾಣ ಶೇ.85.52ರಷ್ಟು ವೃದ್ದಿ ಕಂಡುಬಂದಿದೆ. ಕಳೆದ 19 ದಿನಗಳಿಂದಲೂ ಹೊಸ ಸಕ್ರಿಯ ಪ್ರಕರಣಗಳಲ್ಲಿ ನಿರಂತರ ಇಳಿಕೆ ಕಂಡುಬಂದಿದ್ದು, ನಿನ್ನೆ 9 ಲಕ್ಷ ಪ್ರಮಾಣಕ್ಕಿಂತಲೂ ಕಡಿಮೆ ವರದಿಯಾಗಿದ್ದು, ದಿನೇ ದಿನೇ ಇದು ಕ್ಷೀಣಿಸುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ನಿನ್ನೆ 8,93,592ರಷ್ಟು ಇಳಿಮುಖವಾಗಿದೆ.

ಈವರೆಗೆ ದೇಶದಲ್ಲಿ 8.46 ಕೋಟಿಗೂ ಅಕ ಜನರ ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಏತನ್ಮಧ್ಯೆ, 59.06 ಲಕ್ಷ ಮಂದಿ ಹೆಮ್ಮಾರಿಯ ಬಿಗಿಹಿಡಿತದಿಂದ ಪಾರಾಗಿದ್ದಾರೆ. ದೇಶದಲ್ಲಿ ಈಗ 8,93,592 ಆಕ್ಟಿವ್ ಕೇಸ್‍ಗಳಿವೆ 59,06,069 ಮಂದಿ ಚೇತರಿಸಿಕೊಂಡಿದ್ದು, ಗುಣಮುಖ ಪ್ರಕರಣ ಶೇ.85.52ಕ್ಕೇರಿದ್ದು, ಮರಣ ಪ್ರಮಾಣ ಶೇ.1.54ಕ್ಕೆ ಇಳಿದಿದೆ.

ಸಕ್ರಿಯ ಪ್ರಕರಣಗಳಿಗೆ ಹೋಲಿಸಿದಲ್ಲಿ, ರಿಕವರಿ ರೇಟ್‍ನಲ್ಲಿ ಸುಮಾರು ಐದು ಪಟ್ಟುಗಳಷ್ಟು ಹೆಚ್ಚಳ ಕಂಡುಬಂದಿರುವುದು ಸಮಾಧಾನಕರ ಸಂಗತಿ. ಇಂದು ಬೆಳಗ್ಗೆಯಿಂದಲೂ ದೇಶದ ಬಹುತೇಕ ರಾಜ್ಯಗಳಲ್ಲಿ ಹೊಸ ಸೋಂಕು ಮತ್ತು ಸಾವಿನ ಪ್ರಕರಣಗಳು ವರದಿಯಾಗುತ್ತಲೇ ಇವೆ. ಮಹಾರಾಷ್ಟ್ರ ರಾಜ್ಯವು ಸೋಂಕು ಮತ್ತು ಸಾವಿನ ಸಂಖ್ಯೆಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿದಿದೆ.

ದೇಶದಾದ್ಯಂತ ನಿನ್ನೆ ಒಂದೇ ದಿನ ಸುಮಾರು 11.68 ಲಕ್ಷ ಜನರ ಸ್ಯಾಂಪಲ್‍ಗಳನ್ನು ಪರೀಕ್ಷಿಸಲಾಗಿದ್ದು, ಈವರೆಗೆ 8.46
ಕೋಟಿಗೂ ಅಕ ಮಂದಿಯ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ತಿಳಿಸಿದೆ.

Facebook Comments

Sri Raghav

Admin