ಕಳೆದ 24 ಗಂಟೆಯಲ್ಲಿ ದೇಶದಾದ್ಯಂತ 12,286 ಮಂದಿಗೆ ಕೊರೋನಾ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮಾ.2 (ಪಿಟಿಐ)- ಕೊರೊನಾ ವೈರಾಣು ನಿಯಂತ್ರಣಕ್ಕೆ ಈಗಾಗಲೇ ಎರಡನೇ ಹಂತದ ಲಸಿಕೆ ಪ್ರಯೋಗ ಅಭಿಯಾನ ಆರಂಭವಾಗಿದ್ದರೂ, ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 12,286 ಹೊಸ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಹೊಸ ಪ್ರಕರಣಗಳು ಸೇರಿದಂತೆ ಭಾರತದಲ್ಲಿ ಒಟ್ಟು ಕೋವಿಡ್-19 ಸಂಖ್ಯೆ 1,11,24,527 ಆಗಿದೆ.

ಕೊರೊನಾ ಗುಣಮುಖ ಕಂಡ ಕೇಸ್‍ಗಳ ಸಂಖ್ಯೆಯೂ 1,08,98,921ಕ್ಕೇರಿದೆ. ಸಾವಿನ ಸಂಖ್ಯೆ ಕಳೆದ 24 ಗಂಟೆಯಲ್ಲಿ 91 ಮಾತ್ರ ಆಗಿವೆ ಎಂದು ಆರೋಗ್ಯ ಸಚಿವಾಲಯ ಇಂದು ತಿಳಿಸಿದೆ. ದೇಶಾದ್ಯಂತ ಇದುವರೆಗಿನ ಕೊರೊನಾ ಸಾಂಕ್ರಾಮಿಕದಿಂದ ಬಲಿಯಾದವರ ಸಂಖ್ಯೆ 1,57,248 ಎಂದು ಇಂದು ಬೆಳಗ್ಗೆ 8 ಗಂಟೆಯ ವರದಿ ತಿಳಿಸುತ್ತದೆ.

ಅದೇ ರೀತಿ ಕಾಯಿಲೆಯಿಂದ ಗುಣಮುಖರಾದವರ ಸಂಖ್ಯೆಯೂ ಗಣನೀಯವಾಗಿ ಹೆಚ್ಚಳವಾಗಿ ಪ್ರತಿಶತ 97.07 ರಷ್ಟಾಗಿದೆ. ಸಾವಿನ ಸಂಖ್ಯೆ ಶೇಕಡಾವಾರು 1.41 ರಷ್ಟು ಎಂದು ಇಲಾಖೆ ಅಂಕಿ ಅಂಶ ಹೇಳಿವೆ.
ಇನ್ನೂ ಸಕ್ರಿಯ ಪ್ರಕರಣಗಳು 1,68,358. ಐಸಿಎಂಆರ್ ಮಾ.1ರ ವರದಿ ಪ್ರಕಾರ 21,76,18,057 ಸ್ಯಾಂಪಲ್‍ಗಳನ್ನು ಪಡೆದು, ಅದರಲ್ಲಿ 7,59,283 ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ತಿಳಿದುಬಂದಿದೆ.

Facebook Comments

Sri Raghav

Admin