ದೇಶದಲ್ಲಿ ಸೋಂಕಿತರ ಸಂಖ್ಯೆ ಕುಸಿದರೂ ಹೆಚ್ಚುತ್ತಲೇ ಇದೆ ಸಾವಿನ ಸಂಖ್ಯೆ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಮೇ.210-ಕಳೆದ 24 ಗಂಟೆಗಳಲ್ಲಿ 2,59 ಲಕ್ಷ ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು ಸತತ ಐದನೆ ಭಾರಿಗೆ ಸೋಂಕಿನ ಪ್ರಮಾಣ 3 ಲಕ್ಷದೊಳಗೆ ಕುಸಿದಿರುವುದು ಉತ್ತಮ ಬೆಳವಣಿಗೆಯಾಗಿದೆ.

ಆದರೆ, ಸಾವಿನ ಪ್ರಮಾಣದಲ್ಲಿ ಸ್ವಲ್ಪ ಏರಿಕೆಯಾಗಿದ್ದು, ನಿನ್ನೆಯಿಂದ 4209 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಒಟ್ಟು ಸಾವಿನ ಪ್ರಮಾಣ 2,91,331ಕ್ಕೆ ಹೆಚ್ಚಳವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳಲ್ಲಿ ಉಲ್ಲೇಖಿಸಲಾಗಿದೆ.

2,59 ಲಕ್ಷ ಹೊಸ ಸೋಂಕಿನಿಂದಾಗಿ ದೇಶದ ಒಟ್ಟು ಸೋಂಕಿತರ ಸಂಖ್ಯೆ 2,60,31,991 ಕೋಟಿಗೆ ಏರಿಕೆಯಾಗಿದೆ.ರಾಷ್ಟ್ರೀಯ ಚೇತರಿಕೆ ಪ್ರಮಾಣ ಶೇ.87.25ಕ್ಕೆ ಏರಿಕೆಯಾಗಿರುವುದರಿಂದ ಸಕ್ರಿಯ ಸೋಂಕು ಪ್ರಮಾಣ ಕುಸಿತಕಂಡಿದ್ದು, ಪ್ರಸ್ತುತ 30,27,925ಕ್ಕೆ ಸೀಮಿತಗೊಂಡಿದೆ.

2,60 ಕೋಟಿ ಸೋಂಕಿತರ ಪೈಕಿ ಈಗಾಗಲೆ 2,27ಕೋಟಿಗೂ ಹೆಚ್ಚು ಮಂದಿ ಚೇತರಿಸಿಕೊಂಡಿದ್ದಾರೆ. ದಿನೇ ದಿನೇ ಲಸಿಕೆ ಹಾಕುವ ಸಾಮಥ್ರ್ಯ ಹೆಚ್ಚುತ್ತಿರುವುದರಿಂದ ಸೋಂಕು ಪ್ರಮಾಣದಲ್ಲಿ ಇಳಿಕೆಯಾಗುತ್ತಿದ್ದರೂ ಸಾವಿನ ಪ್ರಮಾಣ ಶೇ.1.12ಕ್ಕೆ ಹೆಚ್ಚಳಗೊಂಡಿರುವುದು ಆತಂಕ ತಂದಿದೆ.

Facebook Comments

Sri Raghav

Admin