24 ಗಂಟೆಯಲ್ಲಿ 1,34,154 ಮಂದಿಗೆ ಕೊರೋನಾ, 2887 ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜೂ.3-ಪ್ರತಿದಿನದ ಕೊರೊನಾ ಪಾಸಿಟಿವಿಟಿ ರೇಟ್ ಶೇ.6.21ಕ್ಕೆ ಕುಸಿದಿದೆ. ಕಳೆದ 24 ಗಂಟೆಗಳಲ್ಲಿ ಕೇವಲ 1,34,154 ಸೋಂಕು ಪ್ರಕರಣಗಳು ಮಾತ್ರ ದಾಖಲಾಗಿರುವುದರಿಂದ ದೇಶದ ಒಟ್ಟು ಸೋಂಕಿತರ ಸಂಖ್ಯೆ 2,84 ಕೋಟಿ ಗಡಿ ದಾಟಿದೆ.ಇದರ  ಜತೆಗೆ ನಿನ್ನೆಯಿಂದ ಮಹಾಮಾರಿಗೆ 2887 ಮಂದಿ ಬಲಿಯಾಗುವ ಮೂಲಕ ಕೊರೊನಾ ಸೋಂಕಿಗೆ ಸಾವನ್ನಪ್ಪಿದವರ ಸಂಖ್ಯೆ 3,37,989ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ದಿನೇ ದಿನೇ ಸೋಂಕು ಪ್ರಮಾಣ ಇಳಿಕೆಯಾಗುವುದರ ಜೊತೆಗೆ ಚೇತರಿಕೆ ಪ್ರಮಾಣ ಏರಿಕೆಯಾಗುತ್ತಿರುವುದರಿಂದ ಸಕ್ರಿಯ ಸೋಂಕು ಪ್ರಕರಣಗಳು ನಿರಂತರವಾಗಿ 20 ಲಕ್ಷದೊಳಗೆ ದಾಖಲಾಗುತ್ತಿದೆ. ಕಳೆದ ಮೂರು ದಿನಗಳಿಂದ ಸಕ್ರಿಯ ಸೋಂಕು ಪ್ರಕರಣಗಳ ಸಂಖ್ಯೆ 20 ಲಕ್ಷದೊಳಗೆ ದಾಖಲಾಗುತ್ತಿದೆ. ನಿನ್ನೆಯಿಂದ ಇಂದು ಮುಂಜಾನೆವರೆಗೆ ಕೇವಲ 17,13,413 ಸಕ್ರಿಯ ಪ್ರಕರಣಗಳು ದಾಖಲಾಗಿದೆ.

ಕೊರೊನಾ ಸೋಂಕಿಗೆ ಕಡಿವಾಣ ಹಾಕುವ ಉದ್ದೇಶದಿಂದ ಪ್ರತಿನಿತ್ಯ 20 ಲಕ್ಷಕ್ಕೂ ಹೆಚ್ಚು ಮಂದಿಯ ತಪಾಸಣೆ ನಡೆಸಲಾಗುತ್ತಿದೆ.ನಿನ್ನೆ ಒಂದೇ ದಿನ 21 ಲಕ್ಷಕ್ಕೂ ಹೆಚ್ಚು ಮಂದಿಯ ಪರೀಕ್ಷೆ ನಡೆಸಲಾಗಿದೆ. ಇದುವರೆಗೂ ದೇಶದ 35 ಕೋಟಿಗೂ ಹೆಚ್ಚು ಮಂದಿಯ ತಪಾಸಣೆ ನಡೆಸಿದಂತಾಗಿದೆ.

ರಾಷ್ಟ್ರೀಯ ಕೊರೊನಾ ಚೇತರಿಕೆ ಪ್ರಮಾಣ ಶೇ.92.79ಕ್ಕೆ ಏರಿಕೆಯಾಗಿದೆ. ನಿನ್ನೆಯಿಂದ ಇಂದು ಮುಂಜಾನೆವರೆಗೂ ಸೋಂಕಿತರ ಸಂಖ್ಯೆಯಲ್ಲಿ ಬರೊಬ್ಬರಿ 80 ಸಾವಿರಕ್ಕೂ ಹೆಚ್ಚು ಕಡಿಮೆಯಾಗಿದೆ.

ದಿನೇ ದಿನೇ ಸೋಂಕಿತರ ಸಂಖ್ಯೆಗಿಂತ ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆ ಅಧಿಕವಾಗುತ್ತಿದೆ. ದೇಶದ 2,84 ಕೋಟಿ ಸೋಂಕಿತರ ಪೈಕಿ ಈಗಾಗಲೇ 2,63 ಕೋಟಿಗೂ ಹೆಚ್ಚು ಮಂದಿ ಚೇತರಿಸಿಕೊಂಡಿರುವ ಬಗ್ಗೆ ವರದಿಯಾಗಿದೆ.

Facebook Comments

Sri Raghav

Admin