24 ಗಂಟೆಯಲ್ಲಿ 15,981 ಮಂದಿಗೆ ಕೊರೊನಾ, 166 ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಅ.15-ದೇಶದಲ್ಲಿ ಮತ್ತೆ 15,981 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಮಹಾಮಾರಿಗೆ ನಿನ್ನೆಯಿಂದ 166 ಮಂದಿ ಬಲಿಯಾಗಿದ್ದಾರೆ.

15 ಸಾವಿರ ಹೊಸ ಸೋಂಕಿನಿಂದ ದೇಶದ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 3,40 ಕೋಟಿ ಗಡಿ ದಾಟಿದೆ. 166 ಮಂದಿ ಸಾವಿನಿಂದ ಮಹಾಮಾರಿಗೆ ಬಲಿಯಾದವರ ಒಟ್ಟು ಸಂಖ್ಯೆ 4,51 ಲಕ್ಷವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ರಾಷ್ಟ್ರೀಯ ಕೊರೊನಾ ಚೇತರಿಕೆ ಪ್ರಮಾಣ ಶೇ.98.07ಕ್ಕೆ ಏರಿಕೆಯಾಗಿರುವುದರಿಂದ ಸಕ್ರೀಯ ಸೋಂಕು ಪ್ರಕರಣಗಳ ಸಂಖ್ಯೆ ಕೇವಲ ಎರಡು ಲಕ್ಷಕ್ಕೆ ಕುಸಿದಿರುವುದು ಕಂಡು ಬಂದಿದೆ. ಇದು ಕಳೆದ 218 ದಿನಗಳ ನಂತರ ದಾಖಲಾದ ಕಡಿಮೆ ಸಕ್ರೀಯ ಸೋಂಕಿನ ಪ್ರಮಾಣ ಎನ್ನಲಾಗಿದೆ.

3,40 ಕೋಟಿ ಸೋಂಕಿತರ ಪೈಕಿ ಈಗಾಗಲೇ 3.30 ಕೋಟಿಗೂ ಹೆಚ್ಚು ಸೋಂಕಿತರು ಗುಣಮುಖರಾಗಿ ಮನೆಗಳಿಗೆ ತೆರಳಿದ್ದಾರೆ.ದಿನೇ ದಿನೇ ಕೊರೊನಾ ತಪಾಸಣಾ ಸಾಮಥ್ರ್ಯ ಹೆಚ್ಚಿಸಲಾಗಿದ್ದು, ದೇಶದಲ್ಲಿ ಇದುವರೆಗೂ 97 ಕೋಟಿಗೂ ಹೆಚ್ಚು ಮಂದಿಗೆ ಲಸಿಕೆ ನೀಡಲಾಗಿದೆ.

ಇನ್ನು ಕೆಲವೇ ದಿನಗಳಲ್ಲಿ 100 ಕೋಟಿ ಲಸಿಕೆ ನೀಡಿದ ದೇಶ ಎಂಬ ಹೆಗ್ಗಳಿಕೆಗೂ ಭಾರತ ಭಾಜನವಾಗಲಿದೆ

Facebook Comments

Sri Raghav

Admin