ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ 10 ಸಾವಿರಕ್ಕೂ ಹೆಚ್ಚು ಐಟಿ ಉದ್ಯೋಗಿಗಳು, ಸಂಬಳಕ್ಕೆ ಕತ್ತರಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.13- ಲಾಕ್ ಡೌನ್ ಪರಿಣಾಮದಿಂದ ಸುಮಾರು 10 ಸಾವಿರಕ್ಕೂ ಹೆಚ್ಚು ಐಟಿ ಬಿಟಿ ನೌಕರರು ಉದ್ಯೋಗ ಕಳೆದುಕೊಳ್ಳುತ್ತಿದ್ದು, ಬಹಳಷ್ಟು ಕಂಪೆನಿಗಳು ವೇತನ ಕಡಿತ ಮಾಡಿವೆ.

ಈ ಬಗ್ಗೆ ಐಟಿ ಬಿಟಿ ನೌಕರರ ಸಂ‍ಘದ ಅಧ್ಯಕ್ಷ ಕುಮಾರ ಸ್ವಾಮಿ ಅವರು ಮಾತನಾಡಿದ್ದು, ಮಾರ್ಚ್ 31ಕ್ಕೆ ಕೆಲವು ಒಪ್ಪಂದಗಳು ನವೀಕರಣಗೊಳ್ಳಬೇಕಿತ್ತು. ಅಮೆರಿಕಾ, ಇಂಗ್ಲೆಂಡ್ ಹಾಗೂ ಇತರ ಪ್ರದೇಶಗಳಲ್ಲಿ ಕೊರೊನಾದಿಂದ ವ್ಯವಹಾರ, ವ್ಯಾಪಾರ ಸಂಪೂರ್ಣ ಸ್ಥಗಿತಗೊಂಡಿದೆ. ಹೀಗಾಗಿ ಬಹಳಷ್ಟು ಒಪ್ಪಂದಗಳು ಸ್ಥಗಿತಗೊಂಡಿವೆ.

ಮುಂದೆ ಅವು ಮತ್ತೆ ನವೀಕರಣಗೊಳ್ಳುವ ಸಾಧ್ಯತೆಗಳು ಇಲ್ಲದಿರಿವುದರಿಂದ ಕಂಪೆನಿಗಳು ಕೆಲಸಗಾರರನ್ನು ವಜಾಗೊಳಿಸಿವೆ ಎಂದು ಹೇಳಿದರು. ಲಾಕ್ ಡೌನ್ ಸಂದರ್ಭದಲ್ಲಿ ಯಾರನ್ನು ಕೆಲಸದಿಂದ ತೆಗೆಯಬಾರದು ಮತ್ತು ವೇತನ ಕಡಿತ ಮಾಡಬಾರದು ಎಂದು ಕೇಂದ್ರ ಸರ್ಕಾರ ಸ್ಪಷ್ಟ ಸೂಚನೆ ನೀಡಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಖಚಿತವಾಗಿ ಹೇಳಿದ್ದಾರೆ. ಆದರೆ ಇದನ್ನು ಮೀರಿ ಖಾಸಗಿ ಕಂಪೆನಿಗಳು ಸಿಬ್ಬಂದಿಯನ್ನು ಕೆಲಸದಿಂದ ತೆಗೆಯುವುದು ಮತ್ತು ವೇತನ ಕಡಿತ ಮಾಡುವುದನ್ನು ಮಾಡುತ್ತಿವೆ. ಇದರ ವಿರುದ್ಧ ಸುಮಾರು 500 ಮಂದಿ ಕಾರ್ಮಿಕ ಇಲಾಖೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಅವರು ಹೇಳಿದರು.

Facebook Comments

Sri Raghav

Admin