ವರ್ಷಾಂತ್ಯಕ್ಕೆ ಭಾರತೀಯರಿಗೆ ಆಕ್ಸ್‌ಫರ್ಡ್ ಕೊರೊನಾ ಲಸಿಕೆ ಲಭ್ಯ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಆ.19-ಕಿಲ್ಲರ್ ಕೊರೊನಾ ವೈರಸ್ ಸೋಂಕಿಗೆ ಅತ್ಯಂತ ಪರಿಣಾಮಕಾರಿಯಾದ ಆಕ್ಸ್‍ಫರ್ಡ್ ಲಸಿಕೆ ಭಾರತೀಯರಿಗೆ ಈ ವರ್ಷಾಂತ್ಯದಲ್ಲಿ ಲಭ್ಯವಾಗಲಿದೆ.

ಆಕ್ಸ್‍ಫಡ್-ಆಸ್ಟ್ರಾ ಝೆನಾಕಾ ಲಸಿಕೆಯ ಮೊದಲ ಬ್ಯಾಚ್‍ನ ಔಷಗಳು 2020ರ ಅಂತ್ಯದ ವೇಳೆಗೆ ಭಾರತದಲ್ಲಿ ಲಭ್ಯವಾಗಲಿದ್ದು, ಕೋವಿಡ್-19 ಹೆಮ್ಮಾರಿ ನಿಯಂತ್ರಣದಲ್ಲಿ ಮಹತ್ವದ ಪಾತ್ರ ವಹಿಸಲಿದೆ.

ಇದೇ ವೇಳೆ ಭಾರತದಲ್ಲಿ ಅಭಿವೃದ್ಧಿಯಾಗುತ್ತಿರುವ ಸ್ಥಳೀಯ ಕೊರೊನಾ ಲಸಿಕೆ ಮತ್ತು ಔಷಗಳೂ ಕೂಡ ಇದೇ ಅವಯಲ್ಲಿ ಭಾರತೀಯರಿಗೆ ಲಭಿಸಲಿದೆ.

ಭಾರತದಲ್ಲಿ ಆಕ್ಸ್‍ಫರ್ಡ್ ಲಸಿಕೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ ಮಾಡಲು ಉದ್ದೇಶಿಸಿರುವ ಬ್ರಿಟನ್‍ನ ಆಸ್ಟ್ರಾ ಝೆನಾಕಾ ಸಂಸ್ಥೆಯ ಪುಣೆ ಮೂಲದ ಔಷ ತಯಾರಿಕಾ ಸಂಸ್ಥೆಯೊಂದನ್ನು ತನ್ನ ಪಾಲುದಾರವನ್ನಾಗಿಸಿದೆ.

ಆಕ್ಸ್‍ಫರ್ಡ್‍ನ ಲಸಿಕೆ ಪ್ರಯೋಗ ಈಗ ಮೂರನೇ ಹಂತವನ್ನು ಯಶಸ್ವಿಯಾಗಿ ಪೂರೈಸಿದ್ದು, ಅಂತಿಮ ಹಂತದ ಕ್ಲಿನಿಕಲ್ ಟ್ರಯಲ್‍ನಲ್ಲಿದೆ.

ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಈ ವರ್ಷಾಂತ್ಯದಲ್ಲಿ ಈ ವ್ಯಾಕ್ಸಿನ್ ಭಾರತೀಯರಿಗೆ ಲಭ್ಯವಾಗಲಿದೆ ಎಂದು ಸಂಸ್ಥೆಯ ಹಿರಿಯಅಕಾರಿಯೊಬ್ಬರು ತಿಳಿಸಿದ್ದಾರೆ.

Facebook Comments

Sri Raghav

Admin