ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಿಂದ ಕೊರೊನಾ ಸೋಂಕಿತ ಎಸ್ಕೇಪ್..!

ಈ ಸುದ್ದಿಯನ್ನು ಶೇರ್ ಮಾಡಿ

ಹುಬ್ಬಳ್ಳಿ, ಜು, 3- ಕೊರೊನಾ ಸೋಂಕು ದೃಢಪಟ್ಟಿದ ರೋಗಿಯೊಬ್ಬ  ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಿಂದ ಪರಾರಿಯಾಗಿರುವ ಘಟನೆ ನಡೆದಿದೆ. ಕಳ್ಳತನ ಆರೋಪದಲ್ಲಿ ಉಪನಗರ ಠಾಣೆಯ ಪೊಲೀಸರು ಬಂಧಿಸಿದ್ದರು.

ಪಿ. 14537 ರೋಗಿಯಾಗಿ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಳ್ಳತನ ಕೇಸ್ ನ ಆರೋಪಿ ಕಿಮ್ಸ್ ನಿಂದ ಪರಾರಿಯಾಗಿದ್ದಾನೆ‌.‌ಇಂದು ಬೆಳಿಗ್ಗೆ 5:30 ಕ್ಕೆ ಕಿಮ್ಸ್ ಕೊವಿಡ್ ವಾರ್ಡ್ ನಿಂದ  ಪರಾರಿಯಾಗಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು  ಲಭ್ಯವಾಗಿವೆ.

ಇಬ್ಬರ ಪೊಲೀಸ್ ಸಿಬ್ಬಂದಿ ಕಾವಲಿಗಿದ್ದರೂ ಅವರ ಕಣ್ಣು ತಪ್ಪಿಸಿ ಪರಾರಿಯಾಗಿದ್ದು ಸಿಬ್ಬಂದಿ,ಜನರಲ್ಲಿ ಮತ್ತಷ್ಟು ಆತಂಕ ಶುರುವಾಯಿಗಿದೆ.

ಈತನ ಸಂಪರ್ಕದಿಂದ ಉಪನಗರ ಠಾಣೆಯ ಓರ್ವ ಕಾನ್ಸ್ ಟೇಬಲ್ ಗೆ ಕೊರೊನಾ ದೃಢಪಟ್ಟಿದ್ದು, ಈಗ ಮತ್ತೆ ಪರಾರಿಯಾಗಿದ್ದು ಪೊಲೀಸರ ನಿದ್ದೆಗೆಡಿಸಿದ್ದಾನೆ. ಈ ಸಂಬಂಧ ವಿದ್ಯಾನಗರ ಠಾಣೆಯಲ್ಲಿ‌ ‌ಪ್ರಕರಣ ದಾಖಲಾಗಿದೆ.

Facebook Comments

Sri Raghav

Admin