500ಕ್ಕೂ ಹೆಚ್ಚು ಯೋಧರು, 250 ಪೊಲೀಸರಿಗೆ ಕೊರೋನಾ ಪಾಸಿಟಿವ್..!
ನವದೆಹಲಿ/ಮುಂಬೈ,ಮೇ 8- ಕೋವಿಡ್-19 ವಿರುದ್ಧದ ಹೋರಾಟದ ಕರ್ತವ್ಯಕ್ಕೆ ನಿಯೋಜಿತರಾಗಿರುವ ಅರೆಭದ್ರತಾ ಪಡೆಗಳ 500ಕ್ಕೂ ಹೆಚ್ಚು ಯೋಧರಿಗೆ ಮತ್ತು 250ಕ್ಕೂ ಅಧಿಕ ಪೊಲೀಸರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ನವದೆಹಲಿ ಮತ್ತು ಮಹಾರಾಷ್ಟ್ರದಲ್ಲಿ ಭದ್ರತಾ ಪಡೆಗಳಿಗೆ ಸೋಂಕು ತಗುಲಿರುವುದು ಆತಂಕಕಾರಿಯಾಗಿದೆ. ದೆಹಲಿ ಕೇಂದ್ರ, ಆಗ್ನೇಯ ಮತ್ತು ಉತ್ತರ ಜಿಲ್ಲೆಗಳಲ್ಲಿ ನಿಯೋಜನೆಗೊಂಡವರಲ್ಲಿ ಹೆಚ್ಚಿನವರಿಗೆ ಸೋಂಕು ತಗುಲಿದೆ. ಕೇಂದ್ರೀಯ ಮೀಸಲು ಪೊಲೀಸ್ ಪಡೆಯ 159 ಮಂದಿಗೆ ಸಾಂಕ್ರಾಮಿಕ ರೋಗ ಕಾಣಿಸಿಕೊಂಡಿದೆ.
900ಕ್ಕೂ ಹೆಚ್ಚು ಮಂದಿ ಕ್ವಾರಂಟೈನ್ನಲ್ಲಿದ್ದಾರೆ. ಗೃಹ ಸಚಿವಾಲಯದಲ್ಲಿ ನಿಯೋಜಿತರಾಗಿರುವ ಇಬ್ಬರು ಸಿಆರ್ಪಿಎಫ್ ಯೋಧರಿಗೂ ಸೋಂಕು ದೃಢಪಟ್ಟಿದೆ.
ಇಂಡೋ ಟಿಬೇಟಿಯನ್ ಗಡಿ ಪೊಲೀಸ್ ಪಡೆಯಲ್ಲಿ 82 ಸೋಂಕು ಪ್ರಕರಣಗಳು ವರದಿಯಾಗಿದ್ದು, ದೆಹಲಿ ಪೊಲೀಸ್ ಪಡೆಯ 80 ಪೊಲೀಸರಿಗೂ ಸೋಂಕು ತಗುಲಿದೆ.
ದೆಹಲಿಯ ವಿವಿಧ ಸರ್ಕಾರಿ ಕಟ್ಟಡಗಳಲ್ಲಿ ಕರ್ತವ್ಯಗಳಲ್ಲಿರುವ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ 50ಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.
# 250 ಪೊಲೀಸರಿಗೆ ಕೊರೊನಾ:
ಅತ್ತ ಮಹಾರಾಷ್ಟ್ರದಲ್ಲಿ ಪೊಲೀಸ್ ಇನ್ಸ್ಪೆಕ್ಟರ್, ಎಸ್ಐ ಸೇರಿದಂತೆರ ರಾಜ್ಯದ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿದ್ದ 250ಕ್ಕೂ ಅಧಿಕಪೊಲೀಸ್ ಸಿಬ್ಬಂದಿಗೆ ಸೋಂಕು ತಗುಲಿದ್ದು, ಭದ್ರತಾ ಪಡೆಯನ್ನು ಚಿಂತೆಗೀಡು ಮಾಡಿದೆ.