ಕೊರೋನಾ ಪಾಸಿಟಿವ್ ಎಂದು ಆರೋಗ್ಯವಂತ ವ್ಯಕ್ತಿಯ ಫೋಟೋ ಹರಿಬಿಟ್ಟವರು ಅಂದರ್

ಈ ಸುದ್ದಿಯನ್ನು ಶೇರ್ ಮಾಡಿ

ಹುಬ್ಬಳ್ಳಿ,ಮಾ,26- ಇಲ್ಲಿನ ಹೊಸಯಲ್ಲಾಪುರ ಪ್ರದೇಶದ ಓರ್ವ ವ್ಯಕ್ತಿಗೆ ಕೋವಿಡ್ 19 ಪಾಸಿಟಿವ್ ವರದಿ ಬಂದಿರುವ ಸಂದರ್ಭದಲ್ಲಿ ಕೆಲವು ವ್ಯಕ್ತಿಗಳು ಕಾಲ್ಪನಿಕ ಹೆಸರಿನೊಂದಿಗೆ ಬೇರೊಬ್ಬ ಆರೋಗ್ಯವಂತ ವ್ಯಕ್ತಿಯ ಫೋಟೋವೊಂದನ್ನು ವಾಟ್ಸಪ್ ನಲ್ಲಿ ಹರಿಬಿಟ್ಟು ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರು.

ಈ‌ ಪ್ರಕರಣವನ್ನು ಗಂಭೀರವಾಗಿ ತಗೆದುಕೊಂಡಿದ್ದ ಜಿಲ್ಲಾಧಿಕಾರಿ ದೀಪಾ ಚೋಳನ್ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಹು- ಧಾ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಸುಳ್ಳು ಸುದ್ದಿಗಳನ್ನು ಸೃಷ್ಟಿಸಿದ ಮತ್ತು ಫಾರ್ವರ್ಡ್ ಮಾಡಿದ ಇಬ್ಬರು ಕಿಡಿಗೇಡಿಗಳ‌ನ್ನು ಬಂಧಿಸಿದ್ದಾರೆ.

ಬಂಧಿತರಿಬ್ಬರು ಧಾರವಾಡ ನಿವಾಸಿಗಳು ಎನ್ನಲಾಗಿದೆ. ಒಬ್ಬ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು ಈತನನ್ನು ಧಾರವಾಡದ ಶಹರ ಪೊಲೀಸರು ಬಂಧಿಸಿದ್ರೆ, ಇನ್ನೊಬ್ಬ ಬಿಕಾಂ ವಿದ್ಯಾರ್ಥಿ ಯಾಗಿದ್ದು ಈತನನ್ನು ಧಾರವಾಡದ ವಿದ್ಯಾಗಿರಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.‌

Facebook Comments

Sri Raghav

Admin