ಭಾರತದಲ್ಲಿ ಒಂದೇ ದಿನ 9,444 ಕೊರೋನಾ ಸೋಂಕಿತರ ಚೇತರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜೂ.22-ದೇಶದಲ್ಲಿ ಕೊರೊನಾ ವೈರಸ್ ಉಗ್ರಸ್ವರೂಪ ತಾಳಿದ್ದು ಸೋಂಕು ಮತ್ತು ಸಾವಿನ ಸಂಖ್ಯೆ ಆತಂಕಕಾರಿಯಾಗಿಯೇ ಮುಂದುವರಿದಿದೆ. ಕಂಡುಬಂದಿದೆ. ಇದೇ ವೇಳೆ ಮತ್ತೊಂದೆಡೆ ರೋಗಿಗಳ ಚೇತರಿಕೆ ಮತ್ತು ಗುಣಮುಖ ಪ್ರಮಾಣದಲ್ಲಿ ಸತತ 13ನೇ ದಿನವೂ ಗಮನಾರ್ಹ ಏರಿಕೆ ಕಂಡುಬಂದಿದ್ದು, ನಿರಾಳತೆ ಮೂಡಿಸಿದೆ.

24 ತಾಸುಗಳ ಅವಧಿಯಲ್ಲಿ ಒಟ್ಟು 9,444 ರೋಗಿಗಳು ಹೆಮ್ಮಾರಿಯ ಸಾವಿನ ದವಡೆಯಿಂದ ಪಾರಾಗಿದ್ದಾರೆ. ಈ ಬೆಳವಣಿಗೆಯು ಸಾಂಕ್ರಾಮಿಕ ರೋಗಿಗಳಲ್ಲಿ ಭರವಸೆಯ ಆಶಾಕಿರಣ ಮೂಡಿಸಿದೆ.  ಕೊರೊನಾ ವೈರಸ್ ಸೋಂಕಿನ ರೋಗಿಗಳ ಚೇತರಿಕೆ ಪ್ರಕರಣಗಳ ಸಂಖ್ಯೆ 2.37 ಲಕ್ಷ ದಾಟಿರುವುದು ಸಮಾಧಾನದ ಸಂಗತಿ.

ನಿನ್ನೆ ಮಧ್ಯರಾತ್ರಿವರೆಗೆ 2,37,195 ಮಂದಿ ಗುಣಮುಖರಾಗಿದ್ದಾರೆ. ರಿಕವರಿ ರೇಟ್‍ಗೆ ಹೋಲಿಸಿದರೆ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಕುಸಿತ ಕಂಡುಬಂದಿದ್ದು, ಈವರೆಗೆ 1,74,387 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ದೇಶದಲ್ಲಿ ವೈರಾಣು ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯಲ್ಲಿ ಶೇ.55.77ರಷ್ಟು ವೃದ್ದಿ ಕಂಡುಬಂದಿದೆ, ಚೇತರಿಕೆ ಪ್ರಕರಣ ಸಕ್ರಿಯ ಪ್ರಮಾಣಕ್ಕಿಂತ ನಿರಂತರ 13 ದಿನಗಳಿಂದ ಹೆಚ್ಚಾಗಿರುವುದು ಸಮಾಧಾನಕರ ಸಂಗತಿ.

Facebook Comments