ಭಾರತದಲ್ಲಿ 2.72 ಲಕ್ಷ ಕೊರೊನಾ ರೋಗಿಗಳು ಗುಣಮುಖ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜೂ.25-ದೇಶದಲ್ಲಿ ಕೊರೊನಾ ವೈರಸ್ ಉಗ್ರಸ್ವರೂಪದ ನಡುವೆಯೂ ರೋಗಿಗಳ ಚೇತರಿಕೆ ಮತ್ತು ಗುಣಮುಖ ಪ್ರಮಾಣದಲ್ಲಿ ಸತತ 16ನೇ ದಿನವೂ ಗಮನಾರ್ಹ ಏರಿಕೆ ಕಂಡುಬಂದಿದ್ದು, ನಿರಾಳತೆ ಮೂಡಿಸಿದೆ. 24 ತಾಸುಗಳ ಅವಧಿಯಲ್ಲಿ ಸುಮಾರು 10,000 ರೋಗಿಗಳು ಹೆಮ್ಮಾರಿಯ ಬಿಗಿಮುಷ್ಠಿಯಿಂದ ಪಾರಾಗಿದ್ದಾರೆ.

ಈ ಬೆಳವಣಿಗೆಯು ಸಾಂಕ್ರಾಮಿಕ ರೋಗಿಗಳಲ್ಲಿ ಭರವಸೆಯ ಆಶಾಕಿರಣ ಮೂಡಿಸಿದೆ.  ಕೊರೊನಾ ವೈರಸ್ ಸೋಂಕಿನ ರೋಗಿಗಳ ಚೇತರಿಕೆ ಪ್ರಕರಣಗಳ ಸಂಖ್ಯೆ 2.72 ಲಕ್ಷ ದಾಟಿರುವುದು ಸಮಾಧಾನದ ಸಂಗತಿ. ನಿನ್ನೆ ಮಧ್ಯರಾತ್ರಿವರೆಗೆ 2,71,696 ಮಂದಿ ಗುಣಮುಖರಾಗಿದ್ದಾರೆ. ರಿಕವರಿ ರೇಟ್‍ಗೆ ಹೋಲಿಸಿದರೆ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಕುಸಿತ ಕಂಡುಬಂದಿದ್ದು, ಈವರೆಗೆ 1,86,514 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ದೇಶದಲ್ಲಿ ವೈರಾಣು ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯಲ್ಲಿ ಶೇ.57.43ರಷ್ಟು ವೃದ್ದಿ ಕಂಡುಬಂದಿದೆ, ಚೇತರಿಕೆ ಪ್ರಕರಣ ಸಕ್ರಿಯ ಪ್ರಮಾಣಕ್ಕಿಂತ ನಿರಂತರ ಎರಡು ವಾರಗಳಿಂದ ಹೆಚ್ಚಾಗಿರುವುದು ಸಮಾಧಾನಕರ ಸಂಗತಿ.

Facebook Comments