ಅವೇಶನದಲ್ಲಿ ಭಾಗವಹಿಸುವ ಜನಪ್ರತಿನಿಗಳಿಗೆ ಕೋವಿಡ್ ಟೆಸ್ಟ್ ಕಡ್ಡಾಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.30- ಮುಂದಿನ ತಿಂಗಳು 21ರಿಂದ ಆರಂಭವಾಗಲಿರುವ ಮಳೆಗಾಲದ ಅವೇಶನದಲ್ಲಿ ಭಾಗವಹಿಸುವ ಜನಪ್ರತಿನಿಗಳಿಗೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ನಡೆಸಲು ಸರ್ಕಾರ ಮುಂದಾಗಿದೆ.

ಸಂಸತ್‍ನಲ್ಲಿ ಅವೇಶನ ಆರಂಭವಾಗುವ 72 ಗಂಟೆ ಮುಂಚಿತವಾಗಿ ಎಲ್ಲಾ ಲೋಕಸಭಾ ಸದಸ್ಯರು ಹಾಗೂ ರಾಜ್ಯಸಭಾ ಸದಸ್ಯರು ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಒಳಗಾಗಬೇಕೆಂದು ಲೋಕಸಭೆ ಸ್ಪೀಕರ್ ಓಂಪ್ರಕಾಶ್ ಬಿರ್ಲಾ ಸೂಚಿಸಿದ್ದಾರೆ.

ಇದೀಗ ಕೇಂದ್ರದ ಮಾದರಿಯನ್ನೇ ಮುಂದಿಟ್ಟುಕೊಂಡಿರುವ ಸಚಿವಾಲಯ ಅವೇಶನದಲ್ಲಿ ಪಾಲ್ಗೊಳ್ಳಲಿರುವ ಮುಖ್ಯಮಂತ್ರಿ ಸೇರಿದಂತೆ ಶಾಸಕರು, ಸಚಿವರು, ವಿಧಾನಪರಿಷತ್ ಸದಸ್ಯರು, ಆಡಳಿತ ವರ್ಗ, ಸಚಿವರ ಆಪ್ತ ಕಾರ್ಯದರ್ಶಿಗಳು, ಶಾಸಕರ ಆಪ್ತ ಸಹಾಯಕ ಮತ್ತು ಮಾಧ್ಯಮ ಪ್ರತಿನಿಗಳು ಕೂಡ ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಒಳಗಾಗಬೇಕಾಗಿದೆ ಎಂದು ತಿಳಿದು ಬಂದಿದೆ.

ಇತ್ತೀಚೆಗೆ ಶಾಸಕರಲ್ಲೂ ಕೋವಿಡ್ ಪಾಸಿಟಿವ್ ಪ್ರಕರಣ ದಿನದಿಂದನಕ್ಕೆ ಹೆಚ್ಚಾಗುತ್ತಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದ ಹಿಡಿದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಚಿವರಾದ ಡಾ.ಕೆ.ಸುಧಾಕರ್, ಬಿ.ಸಿ.ಪಾಟೀಲ್, ಶ್ರೀರಾಮುಲು, ಸಿ.ಟಿ.ರವಿ, ಶಾಸಕರಾದ ಡಾ.ರಂಗನಾಥ್, ಬೆಳ್ಳಿ ಪ್ರಕಾಶ್, ಮಾಜಿ ಸಚಿವ ಎಚ್.ಡಿ.ರೇವಣ್ಣ ಸೇರಿದಂತೆ ಅನೇಕರಿಗೆ ಸೋಂಕು ಬಂದಿತ್ತು. ನಿನ್ನೆಯಷ್ಟೇ ಕಡೂರು ವಿಧಾನಸಭಾ ಶಾಸಕ ಬೆಳ್ಳಿ ಪ್ರಕಾಶ್‍ಗೂ ಕೊರೊನಾ ಪಾಸಿಟೀವ್ ಬಂದಿದೆ.

ಪಂಜಾಬ್‍ನಲ್ಲಿ ಅವೇಶನ ಆರಂಭವಾಗುವ ಎರಡು ದಿನ ಬಾಕಿ ಇರುವಾಗಲೇ 23ಕ್ಕೂ ಹೆಚ್ಚು ಶಾಸಕರಿಗೆ ಸೋಂಕು ತಗುಲಿತ್ತು. ಕೇಂದ್ರ ಸರ್ಕಾರ ಅವೇಶನ ನಡೆಸುವ ಸಂದರ್ಭದಲ್ಲಿ 72 ಗಂಟೆ ಮುಂಚಿತವಾಗಿ ಎಲ್ಲರೂ ಕೋವಿಡ್ ಪರೀಕ್ಷೆಗೆ ಒಳಗಾಗಬೇಕೆಂದು ಸೂಚಿಸಿದೆ.

ಕೇವಲ 20 ನಿಮಿಷದಲ್ಲೇ ವೈದ್ಯಕೀಯ ವರದಿ ಬರುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಜನಪ್ರತಿನಿಗಳಿಗೆ ಕೋವಿಡ್ ಪರೀಕ್ಷೆ ಕಡ್ಡಾಯಗೊಳಿಸಿದೆ.
ವಿಧಾನಸಭೆಯ 225 ಸದಸ್ಯರು ಹಾಗೂ ಪರಿಷತ್‍ನ 70 ಮಂದಿ ಸದಸ್ಯರು ಎರಡು ಸದನಗಳಲ್ಲಿ ಸಮಾಗಮಗೊಳ್ಳಲ್ಲಿದ್ದಾರೆ.

ಅಪ್ಪಿತಪ್ಪಿ ಯಾವುದಾದರು ಒಬ್ಬ ಶಾಸಕರಿಗೆ, ಸಚಿವ ಇಲ್ಲವೇ ಅಕಾರಿ ವರ್ಗದವರಿಗೆ ಸೋಂಕು ತಗುಲಿದರೆ ಬಹುತೇಕ ಎಲ್ಲರೂ ಹೋಮ್ ಕ್ವಾರಂಟೈನ್‍ಗೆ ಒಳಗಾಗಬೇಕಾಗುತ್ತದೆ. ಇದನ್ನು ತಪ್ಪಿಸಲು ರಾಜ್ಯ ಸರ್ಕಾರ ಜನಪ್ರತಿನಿಗಳಿಗೆ ಕೋವಿಡ್ ಪರೀಕ್ಷೆ ಕಡ್ಡಾಯ ಮಾಡಿದೆ ಎಂದು ತಿಳಿದು ಬಂದಿದೆ.

ಈಗಾಗಲೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಕಾರಿಗಳ ಜತೆ ಚರ್ಚೆ ನಡೆಸಲಾಗಿದ್ದು, ಅವೇಶನ ನಡೆಯುವ ಮೂರು ದಿನ ಮುಂಚಿತವಾಗಿ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ.

ಯಾರಿಗಾದರೂ ಸೋಂಕಿನ ಲಕ್ಷಣಗಳು ಕಂಡು ಬಂದರೆ ತಕ್ಷಣವೇ ಆಸ್ಪತ್ರೆಗೆ ದಾಖಲಿಸಲು ಸೂಚನೆ ನೀಡಲಾಗುತ್ತದೆ. ಇನ್ನು ಅವೇಶನದಲ್ಲಿ ಪಾಲ್ಗೊಳ್ಳುವ ಮಾಧ್ಯಮ ಪ್ರತಿನಿಗಳೂ ಕೂಡ ಇದೇ ನಿಯಮವನ್ನು ಅನುಸರಿಸಬೇಕು.

ಅವೇಶನಕ್ಕೆ ಬರುವ ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮದವರು ಮೂರು ದಿನ ಮುಂಚಿತವಾಗಿ ಪರೀಕ್ಷೆಗೆ ಒಳಪಡಬೇಕು. ಅಲ್ಲಿ ನೆಗೆಟಿವ್ ಬಂದರೆ ಮಾತ್ರ ಅವೇಶನದಲ್ಲಿ ಭಾಗವಹಿಸಬಹುದು.

ಇನ್ನು ಅವೇಶನದಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಸೇರಿದಂತೆ ಈ ಬಾರಿ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ತೀರ್ಮಾನಿಸಿದೆ.

Facebook Comments

Sri Raghav

Admin