ಭಾರತದ ಕೊರೊನಾ ಪರೀಕ್ಷೆ ಕ್ರಿಯೆಯಲ್ಲಿ ದೋಷ : ಆಸ್ಟ್ರೇಲಿಯಾ

ಈ ಸುದ್ದಿಯನ್ನು ಶೇರ್ ಮಾಡಿ

ಮೆಲ್ಬೋರ್ನ್,ಏ.27-ಭಾರತದಲ್ಲಿ ಪ್ರಯಾಣಿಕರಿಗೆ ಸೂಕ್ತ ರೀತಿಯ ಕೊರೊನಾ ತಪಾಸಣೆ ನಡೆಸಲು ಸಾಧ್ಯವಾಗದಿರುವುದೆ ಆ ರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ಉಲ್ಬಣಗೊಳ್ಳಲು ಕಾರಣವಾಗಿದೆ ಎಂದು ಆಸ್ಟ್ರೇಲಿಯಾ ಎಚ್ಚರಿಕೆ ನೀಡಿದೆ.

ಭಾರತದಿಂದ ಹಿಂದಿರುಗಿ ಪರ್ತ್‍ನ ಹೋಟೆಲ್ ಒಂದರಲ್ಲಿ ಕ್ವಾರಂಟೈನ್ ಆಗಿರುವ ನಾಲ್ವರನ್ನು ಮರು ತಪಾಸಣೆ ನಡೆಸಿದಾಗ ಅವರಿಗೆ ಕೊರೊನಾ ಪಾಸಿಟಿವ್ ಇರುವುದು ಕಂಡು ಬಂದಿದೆ ಎಂದು ಅಸ್ಟ್ರೇಲಿಯಾ ಸಚಿವ ಮಾರ್ಕ್ ಮ್ಯಾಕ್‍ಗೋವನ್ ತಿಳಿಸಿದ್ದಾರೆ.

ಹೀಗಾಗಿ ಭಾರತದಿಂದ ಹಿಂತಿರುಗಿರುವ ಹಲವಾರು ಪ್ರಯಾಣಿಕರನ್ನು ತಪಾಸಣೆ ನಡೆಸಿದಾಗ ಅವರಲ್ಲಿ ಬಹುತೇಕ ಮಂದಿಗೆ ಪಾಸಿಟಿವ್ ಆಗಿದೆ. ಇದನ್ನು ಗಮನಿಸಿದರೆ ಭಾರತದಲ್ಲಿ ಪ್ರಯಾಣಿಕರಿಗೆ ನಡೆಸಲಾಗುತ್ತಿರುವ ತಪಾಸಣೆಯಲ್ಲಿ ಲೋಪವಿದೆ ಎಂದು ಅನಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಕೊರೊನಾ ತಪಾಸಣೆಯಲ್ಲಿನ ಲೋಪದೋಷದಿಂದಲೇ ಭಾರತ ಈ ಹಂತ ತಲುಪಿರುವ ಸಾಧ್ಯತೆ ಇದೆ. ಹೀಗಾಗಿ ತುರ್ತು ಪರಿಸ್ಥಿತಿ ಹೊರತುಪಡಿಸಿ ಭಾರತ ಪ್ರವಾಸ ಕೈಗೊಳ್ಳಬಾರದು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

Facebook Comments

Sri Raghav

Admin