ಡಿಸೆಂಬರ್‌ನಲ್ಲಿ ಅಮೇರಿಕಾದ ಪ್ರಜೆಗಳಿಗೆ ಕರೋನ ಲಸಿಕೆ ಲಭ್ಯ..!?

ಈ ಸುದ್ದಿಯನ್ನು ಶೇರ್ ಮಾಡಿ

ಕ್ಯಾಲಿಫೋರ್ನಿಯಾ,ನ.23- ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಮಹಾಮಾರಿ ಕೋವಿಡ್-19ಕ್ಕೆ ಈ ವರ್ಷದ ಅಂತ್ಯದೊಳಗೆ ಲಸಿಕೆ ಸಿಗುವ ಲಕ್ಷಣಗಳು ಘೋಚರಿಸಿವೆ.  ಡಿಸೆಂಬರ್ ತಿಂಗಳ ಆರಂಭದಲ್ಲಿಯೇ ಅಮೆರಿಕಾದಲ್ಲಿ ಕೊವಿಡ್ ಸೋಂಕಿಗೆ ಲಸಿಕೆ ಸಿಗಲಿದೆ ಎಂದು ತಜ್ಞರ ಸಮಿತಿ ತಿಳಿಸಿದೆ.
ಡಿಸೆಂಬರ್ 11 ಅಥವಾ 12ರ ವೇಳೆಗೆ ಪಿ-ಫಿಜರ್ ಔಷಧಿ ತಯಾರಿಕಾ ಸಂಸ್ಥೆಯು ಕೊವಿಡ್-19 ಲಸಿಕೆ ಸಂಶೋಧನಾ ಕಾರ್ಯದಲ್ಲಿ ಮಹತ್ವದ ತಿರುವು ಪಡೆದುಕೊಳ್ಳಲಿದೆ ಎಂದು ಅಮೆರಿಕಾ ಸರ್ಕಾರದ ಔಷಧಿ ತಯಾರಿಕಾ ಸಮಿತಿಯ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.

ಲಸಿಕೆಗೆ ಅನುಮತಿ ನೀಡುವ ಬಗ್ಗೆ ನಿರ್ಧರಿಸಲು ಅಮೆರಿಕದ ಆಹಾರ ಮತ್ತು ಔಷಧ ಆಡಳಿತವು ಡಿಸೆಂಬರ್ 10ರಂದು ಸಭೆ ಸೇರಲಿದೆ. ಇನ್ನೊಂದೆಡೆ ಕೋವಿಡ್-19 ಲಸಿಕೆ ಬಳಕೆಗೆ ಬ್ರಿಟನ್ ಇದೇ ವಾರದಲ್ಲಿ ಅನುಮತಿ ನೀಡುವ ಸಾಧ್ಯತೆ ಇದೆ. ಅಮೆರಿಕದ ಔಷಧಕ್ಕೆ ಅನುಮೋದನೆ ಸಿಗುವ ಮುಂಚೆಯೇ ಬ್ರಿಟನ್‍ನ ಔಷಧಿಗೆ ಅನುಮತಿ ಸಿಗಬಹುದಾಗಿದೆ ಎಂದು ಟೆಲಿಗ್ರಾಫ್ ಸುದ್ದಿ ಜಾಲತಾಣ ವರದಿ ಮಾಡಿದೆ.

ಬ್ರಿಟಿಷ್ ಔಷಧ ನಿಯಂತ್ರಕರು ಫೈಝರ್ ಮತ್ತು ಬಯೋಟೆಕ್ ಅಭಿವೃದ್ಧಿ ಪಡಿಸಿರುವ ಕೋವಿಡ್-19 ಲಸಿಕೆಯ ಅಕೃತ ಮೌಲ್ಯಮಾಪನ ಆರಂಭಿಸಲಿದ್ದಾರೆ. ಡಿಸೆಂಬರ್ 1ರಿಂದ ಲಸಿಕೆ ನಿರ್ವಹಣೆಗೆ ಸಂಬಂಸಿದಂತೆ ಸಜ್ಜಾಗಿರುವಂತೆ ರಾಷ್ಟ್ರೀಯ ಆರೋಗ್ಯ ಸೇವೆಗೆ ತಿಳಿಯಪಡಿಸಲಾಗಿದೆ.
ಬ್ರಿಟನ್ ಔಷಧ ನಿಯಂತ್ರಣ ಸಂಸ್ಥೆ ಎಂಎಚ್‍ಆರ್‍ಎ ಲಸಿಕೆಗೆ ಅನುಮೋದನೆ ನೀಡಿದರೆ, ವರ್ಷಾಂತ್ಯಕ್ಕೆ 1 ಕೋಟಿ ಡೋಸ್‍ಗಳಷ್ಟು ಲಸಿಕೆಯನ್ನು ಬ್ರಿಟನ್ ಪಡೆದುಕೊಳ್ಳುವ ನಿರೀಕ್ಷೆ ಇದೆ. ಬ್ರಿಟನ್ 4 ಕೋಟಿ ಡೋಸ್ ಲಸಿಕೆಗಾಗಿ ಬೇಡಿಕೆ ಇಟ್ಟಿದೆ.

ಅಂದುಕೊಂಡಂತೆ ನಡೆದರೆ ಇತ್ತ ಪುಣೆ ಮೂಲದ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾಗೆ ಆಕ್ಸ್ ಫರ್ಡ್ ಮತ್ತು ಆಸ್ಟ್ರಾಜೆನಿಕಾ ಲಸಿಕೆ ತುರ್ತು ಬಳಕೆಗೆ ಅನುಮೋದನೆ ಸಿಗಲಿದೆ ಎಂದು ನೀತಿ ಆಯೋಗದ ಸದಸ್ಯ ವಿನೋದ್ ಪೌಲ್ ತಿಳಿಸಿದ್ದಾರೆ. ಭಾರತದಲ್ಲಿ ಆಕ್ಸ್ ಫರ್ಡ್ ಲಸಿಕೆ ಅಭಿವೃದ್ಧಿ ಕಾರ್ಯವನ್ನು ತಕ್ಕಂತೆ ಮೂರನೇ ಮತ್ತು ಅಂತಿಮ ಹಂತದ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. 2021ರ ಜನವರಿ ಅಥವಾ ಫೆಬ್ರವರಿ ತಿಂಗಳಿನಲ್ಲಿ ಲಸಿಕೆ ವಿತರಣೆ ಮಾಡುವುದಕ್ಕೆ ಸಾಧ್ಯವಾಗುತ್ತದೆ ಎಂದು ನೀತಿ ಆಯೋಗವು ಹೇಳುತ್ತಿದೆ.

ಸರ್ಕಾರದಿಂದ ಅನುಮೋದನೆ ಸಿಕ್ಕ 24 ಗಂಟೆಗಳಲ್ಲಿಯೇ ರೋಗ ನಿರೋಧಕಶಕ್ತಿ ವೃದ್ಧಿಯ ತಾಣಗಳಿಗೆ ಲಸಿಕೆಯನ್ನು ರವಾನಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಡಿಸೆಂಬರ್.11 ಮತ್ತು ಡಿಸೆಂಬರ್.12ರ ಆಸುಪಾಸಿನಲ್ಲಿ ಲಸಿಕೆಯು ಬಳಕೆಗೆ ಸಿಗಬಹುದು ಎಂದು ಯುನೆಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಆಹಾರ ಮತ್ತು ಔಷ ತಯಾರಿಕಾ ಮಂಡಳಿಯ ಅಕಾರಿ ಮೊನ್ಸೆಫ್ ಸ್ಲಾಯೂ ಸಹ ಮಾಹಿತಿ ನೀಡಿದ್ದಾರೆ.

ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ಪಿ-ಫಿಜರ್ ಸಂಸ್ಥೆಯು ನಡೆಸಿರುವ ಕೊವಿಡ್-19 ಔಷ ಈಗಾಗಲೇ ಪರಿಣಾಮಕಾರಿ ಎಂದು ಹೇಳಲಾಗುತ್ತಿದೆ. 3ನೇ ಹಂತದ ವೈದ್ಯಕೀಯ ಪ್ರಯೋಗದಲ್ಲಿ ಲಸಿಕೆ ಶೇ.95ರಷ್ಟು ಸುರಕ್ಷಿತ ಹಾಗೂ ಪರಿಣಾಮಕಾರಿ ಎಂಬುದು ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಅನುಮೋದನೆ ಎದುರು ನೋಡಲಾಗುತ್ತಿದೆ.

ಸರ್ಕಾರವು ಅನುಮೋದನೆ ನೀಡುತ್ತಿದ್ದಂತೆ ಅಮೆರಿಕಾದ 2 ಕೋಟಿ ಜನರಿಗೆ ಕೊವಿಡ್-19 ಲಸಿಕೆಯನ್ನು ನೀಡಲಾಗುತ್ತದೆ. ಅದರ ಮುಂದಿನ ತಿಂಗಳಿನಿಂದ ಪ್ರತಿ ತಿಂಗಳು 3 ಕೋಟಿ ಜನರಿಗೆ ಕೊರೊನಾವೈರಸ್ ನಿರೋಧಕ ಲಸಿಕೆ ನೀಡಲಾಗುತ್ತದೆ ಎಂದು ಸರ್ಕಾರದ ಮೂಲಗಳಿಂದ ತಿಳಿದು ಬಂದಿದೆ.

ಅಮೆರಿಕಾದಲ್ಲಿ ಯಾವುದೇ ಲಸಿಕೆಯನ್ನು ಅನುಮತಿಸುವ ಮುನ್ನ ಆಹಾರ ಮತ್ತು ಔಷಧ ಆಡಳಿತದಿಂದ ಪರಾಮರ್ಶೆಗೊಳ್ಳಬೇಕಾಗುತ್ತದೆ. ಇದಕ್ಕೆ ಸಹಸ್ರಾರು ಜನರ ಅಧ್ಯಯನ ಅಗತ್ಯವಿರುತ್ತದೆ. ಸಾಮಾನ್ಯವಾಗಿ ನೂತನ ಲಸಿಕೆ ಅನುಮೋದನೆ ಪ್ರಕ್ರಿಯೆಗೆ ವರ್ಷಗಟ್ಟಲೇ ಬೇಕಾಗುತ್ತದೆ. ಆದರೆ, ಫೆಡರಲ್ ಸರ್ಕಾರ ವಿವಿಧ ವಿಧಾನಗಳ ಮೂಲಕ ಪ್ರಾಯೋಗಿಕವಾಗಿ ಕೋವಿಡ್-19 ವೇಗದ ಪ್ರಕ್ರಿಯೆ ನಡೆಸುತ್ತಿದೆ.

ಆರೋಗ್ಯ ಬಿಕ್ಕಟ್ಟು ಸಂದರ್ಭದಲ್ಲಿ ಪ್ರಾಯೋಗಿಕ ಔಷಧಗಳು, ಸಾಧನಗಳು, ಲಸಿಕೆಗಳು ಮತ್ತು ಇತರ ವೈದ್ಯಕೀಯ ಉತ್ಪನ್ನಗಳ ತುರ್ತು ಬಳಕೆಯನ್ನು ಅನುಮತಿಸಲು ಎಫ್ ಡಿಎ ತನ್ನ ಸಾಮಾನ್ಯ ವೈಜ್ಞಾನಿಕ ಮಾನದಂಡಗಳನ್ನು ಸಡಿಲಗೊಳಿಸಬಹುದು. ಸಾಂಕ್ರಾಮಿಕದ ಸಂದರ್ಭದಲ್ಲಿ ನೂರಾರು ಕೊರೋನಾವೈರಸ್ ಪರೀಕ್ಷೆಗಳನ್ನು ಮತ್ತು ಬೆರಳೆಣಿಕೆಯ ಚಿಕಿತ್ಸೆಯನ್ನು ಅಕೃತಗೊಳಿಸಲು ಇದು ಈಗಾಗಲೇ ತನ್ನ ತುರ್ತು ಅಕಾರವನ್ನು ಬಳಸಿದೆ. ಆದರೆ, ಲಸಿಕೆಗಳಿಗೆ ತುರ್ತು ಬಳಕೆಯನ್ನು ನೀಡುವ ಅಕಾರ ಏಜೆನ್ಸಿಗೆ ಇಲ್ಲ ಮತ್ತು ಮುಂಬರುವ ಕೋವಿಡ್ -19 ಹೊಡೆತಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಇದು ಹೆಚ್ಚುವರಿ ಮಾನದಂಡಗಳನ್ನು ರೂಪಿಸಿದೆ.

ತುರ್ತು ದೃಢೀಕರಣ ಪಡೆಯುವ ಮುನ್ನ ನೋಂದಾಯಿತರಾದ ಅರ್ಧದಷ್ಟು ಜನರಿಂದ ಎರಡು ತಿಂಗಳ ಸುರಕ್ಷತೆಯ ಅನುಸರಣೆಯನ್ನು ಹೊಂದಿರಬೇಕು ಎಂದು ಅಕ್ಟೋಬರ್ ನಲ್ಲಿ ಎಫ್ ಡಿಎ ಅಕಾರಿಗಳು ಔಷಧ ತಯಾರಿಕಾ ಕಂಪನಿಗಳಿಗೆ ಹೇಳಿದ್ದರು. ಲಸಿಕೆಯ ಸಂಪೂರ್ಣ ಅನುಮೋದನೆಗೆ ಆರು ತಿಂಗಳ ಸುರಕ್ಷತೆಯ ಅನುಸರಣೆಯ ಜೊತೆಗೆ ಕಂಪನಿಯ ಉತ್ಪಾದನಾ ತಾಣಗಳ ವ್ಯಾಪಕ ಪರಿಶೀಲನೆಯ ಅಗತ್ಯವಿರುತ್ತದೆ. ಪ್ರಮುಖ ಲಸಿಕೆ ತಯಾರಕರು ಮುಂದಿನ ಬೇಸಿಗೆಯವರೆಗೆ ಆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ನಿರೀಕ್ಷೆಯಿಲ್ಲ. ತದನಂತರ ಎಫ್ಡಿಎ ಸಂಪೂರ್ಣ ಅನುಮೋದನೆ ನೀಡುವ ನಿರೀಕ್ಷೆಯಿದೆ. ಆಗ ಸಾಮಾನ್ಯ ಜನರಿಗೆ ಲಸಿಕೆಯನ್ನು ನೀಡಲಾಗುತ್ತದೆ.

ಭಾರತದಲ್ಲಿ ಕೊರೊನಾಗೆ ಮೊದಲು ಸಿಗುವ ಲಸಿಕೆ ಯಾವುದು? ಇಂಗ್ಲೆಂಡ್ ನಲ್ಲಿ ತುರ್ತು ಸಂದರ್ಭಗಳಲ್ಲಿ ಕೊರೊನಾವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕೆ ಆಕ್ಸ್ ಫರ್ಡ್ ಮತ್ತು ಆಸ್ಟ್ರಾಜೆನಿಕಾ ಲಸಿಕೆಯನ್ನು ಬಳಸಿಕೊಳ್ಳಲಾಗುತ್ತಿದೆ. ಒಂದು ವೇಳೆ ಅನುಮತಿ ನೀಡಿದರೆ ಭಾರತದಲ್ಲೂ ಈ ಲಸಿಕೆಯನ್ನು ಬಳಸಲಾಗುತ್ತದೆ ಎಂದು ವಿನೋದ್ ಪೌಲ್ ಹೇಳಿದ್ದಾರೆ.

Facebook Comments