‘ಕೋವಿಡ್ ಕೇರ್ ಸೆಂಟರ್‌ಗಳಲ್ಲೂ ಐಸಿಯು, ವೆಂಟಿಲೇಟರ್ ವ್ಯವಸ್ಥೆ’

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.15- ಕೋವಿಡ್ ಕೇರ್ ಸೆಂಟರ್‌ಗಳಲ್ಲೂ ಐಸಿಯು, ವೆಂಟಿಲೇಟರ್, ಬೆಡ್‍ಗಳ ಸಿದ್ಧತೆ ಮಾಡಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೇ.6ರಷ್ಟು ಬೆಡ್ ಗಳ  ಸಂಖ್ಯೆ ಹೆಚ್ಚಳ ಆಗಲಿದೆ. ಒಂದು ಸಾವಿರ ಐಸಿಯು, ವೆಂಟಿಲೇಟರ್ ಬೆಡ್‍ಗಳು ಬರಲಿವೆ. ನಾಲ್ಕು ಕೋವಿಡ್ ಶವಾಗಾರ ಮೀಸಲಿಡಲಾಗಿದೆ ಎಂದರು.

ಕಾರಣಾಂತರಗಳಿಂದ ಸ್ಮಶಾನ ಸಮಸ್ಯೆ ಎದುರಾಗಿದ್ದು, ಕೂಡಲೇ ಬಗೆಹರಿಸಲಾಗುತ್ತದೆ. ಸಿಬ್ಬಂದಿಗಳ ಸಂಬಳ, ಸುರಕ್ಷತೆ ಎಲ್ಲವೂ ಚರ್ಚೆ ಆಗಿದೆ. ಜನರು ಭಯ ಪಟ್ಟು ಆಸ್ಪತ್ರೆಗೆ ಬರುತ್ತಿದ್ದಾರೆ. ಯಾರೂ ಆತಂಕಕ್ಕೊಳಗಾಗಬಾರದು. ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯ ಎಂದು ಹೇಳಿದರು.

ಬೆಡ್ ಅಗತ್ಯ ಇದ್ದರೆ ಮಾತ್ರ ಬಳಸಿ. ಪಾಸಿಟಿವ್ ಬಂದಾಗ ಓಡಿ ಬರಬೇಡಿ. ಹೀಗೆ ಬಂದರೆ ಬೆಡ್‍ಗಳ ಶಾರ್ಟೆಜ್ ಆಗುತ್ತದೆ. ಅರ್ಹರಿಗೆ ಮಾತ್ರ ಬೆಡ್ ಕಾಯ್ದಿರಿಸಲಾಗುತ್ತದೆ ಎಂದರು. ನಗರದ ಎಂಟು ವಲಯಗಳಿಗೆ ತಲಾ ಒಂದರಂತೆ ಆಂಬುಲೆನ್ಸ್ ಸಿದ್ಧವಿರಿಸಲಾಗುತ್ತದೆ ಎಂದು ಹೇಳಿದ ಅವರು, ನಗರದ ಸ್ಮಶಾನಗಳಲ್ಲಿ ಕ್ಯೂ ನಿಲ್ಲುತ್ತಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ ಯಾವುದೇ ಸಮಸ್ಯೆ ಇದ್ದರೂ ಪರಿಹರಿಸಲಾಗುವುದು ಎಂದು ಹೇಳಿದರು.

ಕಳೆದ ಬಾರಿ 6 ರಿಂದ 10 ಸಾವಿರ ಬೆಡ್‍ಗಳ ವ್ಯವಸ್ಥೆ ಮಾಡಲಾಗಿತ್ತು. 50 ರಿಂದ 100 ಬೆಡ್ ಇರುವ ವಲಯಗಳ ಜÁಗದಲ್ಲಿ ಕೋವಿಡ್ ಕೇರ್ ಸೆಂಟರ್ ಓಪನ್ ಮಾಡಲಾಗುತ್ತದೆ. ಎಂಟು ವಲಯಗಳ ನಂಬರ್ ಸಹ ಎಲ್ಲರಿಗೂ ಪ್ರಚಾರ ಮಾಡಲಾಗುತ್ತದೆ. ಮುಂದಿನ ಮೂರು ದಿನಗಳಲ್ಲಿ 10 ಕೋವಿಡ್ ಕೇರ್ ಸೆಂಟರ್ ಪ್ರಾರಂಭವಾಗಲಿದೆ. 1500 ಬೆಡ್‍ಗಳ ವ್ಯವಸ್ಥೆ ಮಾಡಲಾಗುತ್ತದೆ ಎಂದರು.

ಒಂದು ವೇಳೆ ಲಾಕ್‍ಡೌನ್ ಮಾಡಿದ್ದೇ ಆದರೆ ಜನರಿಗೆ ತೊಂದರೆಯಾಗುತ್ತದೆ. ಬಿಬಿಎಂಪಿಗೆ ತೊಂದರೆಯಾಗುವುದಿಲ್ಲ. ಪಾಲಿಕೆ ಎಲ್ಲ ಪರಿಸ್ಥಿತಿಗೂ ಸಿದ್ಧವಾಗಿದೆ. ಸರ್ಕಾರದ ನಿರ್ದೇಶನಕ್ಕೆ ನಾವು ಬದ್ಧರಾಗಿದ್ದೇವೆ ಎಂದರು.

Facebook Comments