ಕೋವಿಡ್‍ನಿಂದ ಮೃತಪಟ್ಟ ಪೊಲೀಸ್ ಸಿಬ್ಬಂದಿಗೂ 30 ಲಕ್ಷ ರೂ. ಪರಿಹಾರ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.2- ಕೋವಿಡ್‍ನಿಂದ ಮೃತಪಟ್ಟ ಪೊಲೀಸ್ ಇಲಾಖೆಯ ಸಿಬ್ಬಂದಿಗೂ ಕೊರೊನಾ ವಾರಿಯರ್ಸ್‍ಗೆ ನೀಡುವ 30 ಲಕ್ಷ ರೂ. ಪರಿಹಾರವನ್ನು ನೀಡಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ವಿಧಾನಸಭೆಗೆ ತಿಳಿಸಿದರು.  ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪೊಲೀಸ್ ಇಲಾಖೆಯಿಂದ ನೀಡುವ ಪರಿಹಾರ, ವಿಮಾ ಪರಿಹಾರ ಹೊರತು ಪಡಿಸಿ ಹೆಚ್ಚುವರಿಯಾಗಿ ಕೋವಿಡ್ ಪರಿಹಾರವನ್ನೂ ನೀಡಲಾಗುವುದು ಎಂದರು.

2019-20 ಮತ್ತು 2020-21ನೇ ಸಾಲಿನಲ್ಲಿ ಕರ್ತವ್ಯದಲ್ಲಿದ್ದಾಗ ಆಕಸ್ಮಿಕವಾಗಿ ಅಥವಾ ಅಪಘಾತದಲ್ಲಿ 41 ಮಂದಿ ಕಾನ್‍ಸ್ಟೆಬಲ್ ಮತ್ತು ಹೆಡ್‍ಕಾನ್‍ಸ್ಟೆಬಲ್‍ಗಳು ಮೃತಪಟ್ಟಿದ್ದಾರೆ. ಈ ಪೈಕಿ 22 ಮಂದಿ ಮೃತಪಟ್ಟವರ ಕುಟುಂಬದವರಿಗೆ ವಿಮಾ ಕಂಪೆನಿಯ ಮೂಲಕ 20 ಲಕ್ಷ ರೂ.ನಂತೆ 4.40 ಕೋಟಿ ರೂ.ಗಳನ್ನು ನೀಡಲಾಗಿದೆ. ಬಾಕಿ ಉಳಿದಿರುವ 19 ಮಂದಿ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ನೀಡುವ ಪ್ರಕ್ರಿಯೆ ವಿಮಾ ಕಂಪೆನಿಯಲ್ಲಿ ಚಾಲ್ತಿಯಲ್ಲಿದೆ ಎಂದು ಹೇಳಿದರು.

ಪೆÇಲೀಸ್ ಇಲಾಖೆಯಲ್ಲಿ 2002ರಿಂದ ಆರೋಗ್ಯ ಭಾಗ್ಯ ಯೋಜನೆ ಜಾರಿಯಲ್ಲಿದ್ದು, ಮಾನ್ಯತೆ ಪಡೆದಿರುವ 179 ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ಆ ಆಸ್ಪತ್ರೆಗಳಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ಕುಟುಂಬದವರಿಗೆ ನಗದು ರಹಿತ ಚಿಕಿತ್ಸಾ ಸೌಲಭ್ಯವನ್ನು ನೀಡಲಾಗುತ್ತಿದೆ. ಸಿಬಿಎಚ್‍ಎಸ್‍ನಲ್ಲಿ ನಿಗದಿಯಾಗದ ಪ್ರಕ್ರಿಯೆಗಳಿಗೆ ಆರೋಗ್ಯ ಭಾಗ್ಯ ಯೋಜನೆ ಟ್ರಸ್ಟ್‍ವತಿಯಿಂದ ಮಂಜೂರಾತಿ ನೀಡಲಾಗುತ್ತಿದೆ ಎಂದರು.

Facebook Comments