ಕೊರೊನಾ ಎಫೆಕ್ಟ್ ನಿಂದ ವಿಶ್ವದಲ್ಲಿ ಅರ್ಧದಷ್ಟು ಯುವ ಜನತೆಗೆ ಖನ್ನತೆ..!

ಈ ಸುದ್ದಿಯನ್ನು ಶೇರ್ ಮಾಡಿ

ವಿಶ್ವಸಂಸ್ಥೆ, ಆ.12- ಮಾರಕ ಕೊರೊನಾ ವೈರಸ್ ದಾಳಿಯಿಂದ ಇಡೀ ವಿಶ್ವ ಒಂದಲ್ಲ ಒಂದು ಸಮಸ್ಯೆ ಮತ್ತು ಸಂಕಷ್ಟಕ್ಕೆ ಒಳಗಾಗಿದೆ. ಕೋವಿಡ್-19 ಪಿಡುಗಿನಿಂದಾಗಿ ಜಗತ್ತಿನ ಅರ್ಧದಷ್ಟು ಯುವಜನತೆ ಖಿನ್ನತೆ, ಹತಾಶೆ ಮತ್ತು ಉದ್ವೇಗದಂತ ಸಮಸ್ಯೆಗೆ ಒಳಗಾಗಿದ್ದಾರೆ ಎಂದು ವಿಶ್ವಸಂಸ್ಥೆಯ ವರದಿಯೊಂದು ತಿಳಿಸಿದೆ.

ಇಬ್ಬರು ಯುವಕರಲ್ಲಿ ಒಬ್ಬರು (ವಿಶ್ವದ ಜನಸಂಖ್ಯೆಯಲ್ಲಿರುವ ಯುವಜನಾಂಗದ ಶೇ.50ರಷ್ಟು) ಖಿನ್ನತೆ ಮತ್ತು ಹತಾಶೆಯಿಂದ ಬಳಸುತ್ತಿದ್ದಾರೆ.

ಹಾಗೂ ಶೇ.38 ಯುವಜನತೆಗೆ ತಮ್ಮ ಭವಿಷ್ಯದ ಬಗ್ಗೆ ಅನಿಶ್ಚಿತತೆ ಇದೆ ಎಂದು ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್‍ಒ) ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ.

ಈ ಸಂಬಂದ ಐಎಲ್‍ಒ, ಯುವಜನತೆ ಮತ್ತು ಕೋವಿಡ್-19: ಉದ್ಯೋಗಗಳು, ಶಿಕ್ಷಣ, ಹಕ್ಕುಗಳು ಮತ್ತು ಮಾನಸಿಕ ಸೌಖ್ಯತೆ ಮೇಲೆ ಪರಿಣಾಮ ಕುರಿತು ನಡೆಸಿದ ಸಮೀಕ್ಷೆಯಲ್ಲಿ ಕೆಲವು ಆತಂಕಕಾರಿ ಸಂಗತಿಗಳು ಕಂಡುಬಂದಿವೆ.

ಈ ಬಗ್ಗೆ ತುರ್ತು ಕ್ರಮಗಳನ್ನು ಕೈಗೊಳ್ಳದಿದ್ದರೆ, ಕೊರೊನಾ ಪಿಡುಗಿನಿಂದಾಗಿ ಯುವಕ ಮತ್ತು ಯುವತಿಯರು ತೀವ್ರ ಮತ್ತು ದೀರ್ಘಾವ ದುಷ್ಪರಿಣಾಮಗಳಿಂದ ನರಳುವಂತಾಗುತ್ತದೆ ಎಂದು ತಿಳಿಸಲಾಗಿದೆ.

ವೈರಸ್ ಹಾವಳಿಯಿಂದ 18 ರಿಂದ29 ವರ್ಷಗಳ ಯುವಜನತೆಗೆ ಶಿಕ್ಷಣ, ಉದ್ಯೋಗ, ಮಾನಸಿಕ ಆರೋಗ್ಯ, ಹಕ್ಕುಗಳು ಮತ್ತು ಸಾಮಾಜಿಕ ಚಟುವಟಿಕೆಗಳ ಮೇಲೆ ದುಷ್ಪರಿಣಾಮ ಬೀರುತ್ತಿರುವ ಸಂಗತಿಯನ್ನು ಸಮೀಕ್ಷಾ ವರದಿಯಲ್ಲಿ ವಿವರಿಸಲಾಗಿದೆ.

Facebook Comments

Sri Raghav

Admin