30 ನಿಮಿಷಗಳಲ್ಲೇ ಮೊಬೈಲ್‍ನಲ್ಲೇ ಸಿಗಲಿದೆ ಕೋವಿಡ್ ವರದಿ..!

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ಸೆ.1- ಸ್ಮಾರ್ಟ್ ಫೋನ್ ಮೂಲಕ ಕೇವಲ 30 ನಿಮಿಷಗಳಲ್ಲೇ ಕೋವಿಡ್ ಪರೀಕ್ಷೆ ವರದಿ ಪಡೆಯುವ ಸೂಕ್ಷ್ಮ ತಂತ್ರಾಂಶವನ್ನು ಭಾರತೀಯ ಮೂಲದ ವ್ಯಕ್ತಿಯೊಬ್ಬರು ಸೇರಿದಂತೆ ಅಮೆರಿಕದ ಮೂವರು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ ಪೋರ್ಟಬಲ್ ಮಾದರಿಯ ತಂತ್ರಾಂಶವನ್ನು ಸ್ಮಾರ್ಟ್ ಫೋನ್ಗಳಿಗೆ ಅಳವಡಿಸಿಕೊಂಡರೆ ಗಂಟಲು ದ್ರವವನ್ನು ಪ್ರಯೋಗಾಲಯಕ್ಕೆ ರವಾನಿಸದೆ ಕೇವಲ 30 ನಿಮಿಷಗಳಲ್ಲಿ ವರದಿ ಪಡೆಯಬಹುದಾಗಿದೆ.

ಪ್ರಪಂಚದಾದ್ಯಂತ ಸಾವಿರಾರು ಮಂದಿಗೆ ಕೊರೊನಾ ಸೋಂಕು ತಗುಲಿರುವುದರಿಂದ ಎಲ್ಲರ ಗಂಟಲು ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿ ವರದಿ ಪಡೆಯಲು ವಾರಗಟ್ಟಲೆ ಕಾಯಬೇಕಾದ ಪರಿಸ್ಥಿತಿಯನ್ನು ಹೋಗಲಾಡಿಸಲು ಈ ತಂತ್ರಾಂಶ ಸಹಕಾರಿಯಾಗಲಿದೆ.

ಸಾರ್ವಜನಿಕ ಸಭೆ-ಸಮಾರಂಭಗಳಲ್ಲಿ ಹಾಗೂ ಮನೆಗಳಲ್ಲೇ ಕೋವಿಡ್ ಪರೀಕ್ಷೆ ನಡಸಿಕೊಳ್ಳಲು ಈ ತಂತ್ರಾಂಶ ಸಹಕಾರಿಯಾಗಲಿದೆ ಎಂದು ಅಮೆರಿಕದ ಇಲಿನಾಯ್ಸ್ ಯೂನಿವರ್ಸಿಟಿಯಲ್ಲಿ ಬಯೋ ಎಂಜಿನಿಯರಿಂಗ್ ಪ್ರೊಫೆಸರ್ ಆಗಿರುವ ರಶೀದ್ ಬಸೀರ್ ತಿಳಿಸಿದ್ದಾರೆ.

ಸದ್ಯ ಕೋವಿಡ್ ಪರೀಕ್ಷಿಸಲು ಅನುಸರಿಸುತ್ತಿರುವ ಮಾದರಿಗಿಂತ ಹೊಸ ತಂತ್ರಾಂಶ ಸರಳೀಕರಣದಿಂದ ಕೂಡಿದ್ದು, ಕೇವಲ 65 ಡಿಗ್ರಿ ಸೆಂಟಿಗ್ರೇಡ್ ಉಷ್ಣಾಂಶದಲ್ಲೇ ಕೊರೊನಾ ಸೋಂಕು ತಗುಲಿರುವುದನ್ನು ಪತ್ತೆಹಚ್ಚಬಹುದಾಗಿದೆ ಎಂದು ವಿಜ್ಞಾನಿಗಳಲ್ಲಿ ಒಬ್ಬರಾಗಿರುವ ಭಾರತೀಯ ಮೂಲದ ಅನುರೂಪ್ ಗಂಗೂಲಿ ತಿಳಿಸಿದ್ದಾರೆ.

Facebook Comments