ಭಾರತೀಯ ಮೂಲದ ವಿಜ್ಞಾನಿಯಿಂದ ಕೊರೊನದ ಅಡ್ಡ ಪರಿಣಾಮಗಳಿಗೆ ಔಷಧಿ..!

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ನ.21- ಕೊರೊನಾ ಸೋಂಕಿತರಿಗೆ ಎದುರಾಗುವ ಶ್ವಾಸಕೋಶ ಹಾಗೂ ಅಂಗಾಂಗ ವೈಫಲ್ಯವನ್ನು ತಡೆಗಟ್ಟುವಂತಹ ಔಷಧಿಯನ್ನು ಭಾರತೀಯ ಮೂಲದ ಅಮೆರಿಕ ವಿಜ್ಞಾನಿಯೊಬ್ಬರು ಸಂಶೋಸಿದ್ದಾರೆ. ಅಮೆರಿಕದಲ್ಲಿರುವ ಸೆಂಟ್ ಜೂಡ್ ಮಕ್ಕಳ ಸಂಶೋಧನಾ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಾ.ತಿರುಮಲಾ ದೇವಿ ಕನ್ನೆಗಂಟಿ ಅವರು ಸಂಶೋಧನೆ ಮಾಡಿದ್ದಾರೆ.

ಕೊರೊನಾ ಸೋಂಕಿಗೆ ಗುರಿಯಾದ ವ್ಯಕ್ತಿಯ ದೇಹದಲ್ಲಿರುವ ಜೀವ ಕಣಗಳು ಯಾವ ರೀತಿ ಸಾವನ್ನಪ್ಪುತ್ತವೆ ಎಂಬುದರ ಬಗ್ಗೆ ಸಂಶೋಧನೆ ನಡೆಸಿರುವ ಕನ್ನೆಗಂಟಿ ಅವರು ಸೋಂಕಿತರಿಗೆ ಎದುರಾಗುವ ಅಂಗಾಂಗ ವೈಫಲ್ಯ, ಶ್ವಾಸಕೋಶ ಊನ ತಡೆಗಟ್ಟುವಂತಹ ಔಷಧಿಯನ್ನು ಕಂಡು ಹಿಡಿದಿದ್ದಾರೆ.

ಮೂಲತಃ ತೆಲಂಗಾಣದವರಾದ ಕನ್ನೆಗಂಟಿ ಅವರು ಉಸ್ಮಾನಿಯಾ ವಿಶ್ವವಿದ್ಯಾನಿಲಯದಲ್ಲಿ ಎಂಎಸ್ಸಿ ಪದವಿ ನಂತರ ಪಿಎಚ್‍ಡಿ ಪಡೆದು ಕಳೆದ 2007ರಿಂದ ಅಮೆರಿಕದಲ್ಲಿರುವ ಸೆಂಟ್ ಜೂಡ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಕೋವಿಡ್ ಅಲ್ಲದೆ ಇತರ ಕೆಲವು ಮಾರಣಾಂತಿಕ ಕಾಯಿಲೆಗಳಿಂದ ಮಾನವನ ದೇಹದ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ತಪ್ಪಿಸುವಲ್ಲಿ ನಾವು ಸಂಶೋಸಿರುವ ಔಷಧಿ ಯಶಸ್ವಿಯಾಗಲಿದೆ ಎಂದು ಕನ್ನೆಗಂಟಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Facebook Comments