ಕೊರೊನಾಗೆ ರಾಮಬಾಣ ಈ ‘ಕಾಕ್‍ಟೈಲ್’ ಔಷಧಿ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಮೇ.24-ಕೊರೊನಾ ಸೋಂಕಿನಿಂದ ಸಾವಿನ ದವಡೆಗೆ ಸಿಲುಕಿರುವ ರೋಗಿಗಳ ರಕ್ಷಣೆಗೆ ಬಂದಿದೆ ರೋಚೆಸ್ ಆಂಟಿಬಾಡಿ ಕಾಕ್‍ಟೈಲ್ ದಿವ್ಯ ಔಷಧ. ರೋಚೆ ಇಂಡಿಯಾ ಹಾಗೂ ಸಿಪ್ಲಾ ಸಂಸ್ಥೆ ಹೊರತಂದಿರುವ ಈ ಕಾಕ್‍ಟೈಲ್ ಪ್ರತಿ ಡೋಸ್‍ನ ಬೆಲೆ 59700 ರೂ.ಗಳಾಗಿರಲಿದೆ. ಈ ಕಾಕ್‍ಟೈಲ್‍ನ ಮೊದಲ ಬ್ಯಾಚ್ ಭಾರತದಲ್ಲಿ ಲಭ್ಯವಿದ್ದು, ಸೋಂಕಿನ ತೀವ್ರತೆಗೆ ಸಿಲುಕಿಕೊಂಡಿರುವ ಸೋಂಕಿತರು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

ಎರಡನೆ ಬ್ಯಾಚ್‍ನಲ್ಲಿ ಮತ್ತಷ್ಟು ಕಾಕ್‍ಟೈಲ್ ಔಷಧಿ ಲಭ್ಯವಾಗಲಿದೆ. ಒಟ್ಟಾರೆ ಒಂದು ಲಕ್ಷ ಔಷಧಿ ಪ್ಯಾಕೇಟ್‍ಗಳಿಂದ ಎರಡು ಲಕ್ಷ ಮಂದಿಗೆ ಚಿಕಿತ್ಸೆ ಕೊಡಬಹುದಾಗಿದೆ. ಭಾರತದಲ್ಲಿ ಇಬ್ಬರು ಸೋಂಕಿತರಿಗೆ ಚಿಕಿತ್ಸೆ ನೀಡಲಾಗಿದೆ ಎಂದು ರೋಚೆ ಹಾಗೂ ಸಿಪ್ಲಾ ಸಂಸ್ಥೆಗಳು ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.

ಕೊರೊನಾ ಸೋಂಕಿಗೆ ರಾಮಬಾಣವಾಗಿರುವ ಕಾಕ್‍ಟೈಲ್ ಔಷಧವನ್ನು ದೇಶದ ಎಲ್ಲಾ ಭಾಗಗಳಿಗೂ ತಲುಪಿಸುವ ಹೊಣೆಯನ್ನು ಸಿಪ್ಲಾ ಸಂಸ್ಥೆ ವಹಿಸಿಕೊಂಡಿದೆ. ಈಗಾಗಲೇ ವಿದೇಶಗಳಲ್ಲಿ ಯಶಸ್ವಿಯಾಗಿರುವ ಕಾಕ್‍ಟೈಲ್ ಔಷಧಿಯನ್ನು ದೇಶದಲ್ಲಿ ಬಳಕೆ ಮಾಡಲು ಡ್ರಗ್ ಕಂಟ್ರೋಲ್ ಸಂಸ್ಥೆ ಗ್ರೀನ್ ಸಿಗ್ನಲ್ ನೀಡಿದೆ. ಹೀಗಾಗಿ ದೇಶದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ರೋಚೆಸ್ ಆಂಟಿಬಾಡಿ ಕಾಕ್‍ಟೈಲ್ ಔಷಧಿ ಲಭ್ಯವಿದೆ ಎನ್ನಲಾಗಿದೆ.

Facebook Comments

Sri Raghav

Admin