ಅಮೆರಿಕಾದಲ್ಲಿ ಏ.19ರಿಂದ ಯುವಕರಿಗೆ ಕೊರೊನಾ ಲಸಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್,ಏ.7- ಕೊರೊನಾ ಸೋಂಕು ಉಲ್ಬಣಗೊಳ್ಳುತ್ತಿರುವ ಹಿನ್ನಲೆಯಲ್ಲಿ ಏ.19 ರಿಂದ ಅಮೆರಿಕಾದ ಯುವಕರಿಗೆ ಲಸಿಕೆ ಹಾಕುವ ಕಾರ್ಯ ಆರಂಭಿಸಲಾಗುವುದು ಎಂದು ಅಧ್ಯಕ್ಷ ಜೋ ಬೈಡೆನ್ ಘೋಷಿಸಿದ್ದಾರೆ. ಸೋಂಕು ಕಾಣಿಸಿಕೊಂಡ ನಂತರ ಕೊರೊನಾ ವಿರುದ್ಧದ ಹೋರಾಟ ತೀವ್ರಗೊಳಿಸಲಾಗಿದೆ. ಆದರೂ ಸೋಂಕು ನಿವಾರಣೆಯಾಗುತ್ತಿಲ್ಲ ಹೀಗಾಗಿ ಪ್ರತಿಯೊಬ್ಬರು ಎಚ್ಚರಿಕೆ ವಹಿಸಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

ಸೋಂಕಿನ ನಡುವೆ ಎಲ್ಲರೂ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.ನಮ್ಮ ಸರ್ಕಾರ ಕೊರೊನಾ ಹೋಗಲಾಡಿಸುವ ಕಾರ್ಯದಲ್ಲಿ ಮಗ್ನವಾಗಿದೆ ಎಂದು ಅವರು ತಿಳಿಸಿದ್ದಾರೆ. ರೂಪಾಂತರ ವೈರಾಣು ಅತಿ ವೇಗವಾಗಿ ಹರಡುತ್ತಿರುವುದರಿಂದ ಸೋಂಕು ಅಪಾಯಕಾರಿಯಾಗುತ್ತಿದೆ. ಹೀಗಾಗಿ ಪ್ರತಿಯೊಬ್ಬರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವತ್ತ ಗಮನ ಹರಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಮೊದಲ ಹಂತದಲ್ಲಿ 100 ದಿನಗಳಲ್ಲಿ 200 ಮಿಲಿಯನ್ ನಾಗರೀಕರಿಗೆ ಲಸಿಕೆ ಹಾಕಿರುವುದರಿಂದ ಸೋಂಕು ಹೆಚ್ಚಳಗೊಂಡಿಲ್ಲ. ಈಗಾಗಲೇ 45 ವರ್ಷ ತುಂಬಿದವರಿಗೆಲ್ಲಾ ಲಸಿಕೆ ಹಾಕಲಾಗಿದೆ. ಲಸಿಕೆ ತಯಾರಿಕೆಯಲ್ಲಿ ನಾವು ಮುಂಚೂಣಿಯಲ್ಲಿದ್ದು ಏ.19 ರಿಂದ ಅಮೆರಿಕಾದ ಎಲ್ಲಾ ಯುವಕರಿಗೂ ಲಸಿಕೆ ಹಾಕಲಾಗುವುದು ಎಂದು ಬೈಡೆನ್ ಹೇಳಿದರು.

Facebook Comments