2 ಡೋಸ್ ಕೋವಿಶೀಲ್ಡ್ ಲಸಿಕೆ ನಡುವಿನ ಅಂತರ ಹೆಚ್ಚಳಕ್ಕೆ ಶಿಫಾರಸು

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಮೇ.13-ಎರಡು ಲಸಿಕೆ ನಡುವಿನ ಅಂತರವನ್ನು 12 ರಿಂದ 16 ವಾರಗಳಿಗೆ ವಿಸ್ತರಿಸುವಂತೆ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಕೋವಿಶೀಲ್ಡ್ ಮೊದಲ ಲಸಿಕೆ ನೀಡಿದ 16 ವಾರಗಳ ನಂತರ ಎರಡನೆ ಲಸಿಕೆ ನೀಡುವುದು ಸೂಕ್ತ ಎಂದು ಸಮಿತಿ ಶಿಫಾರಸು ಮಾಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಗರ್ಭಿಣಿ ಮಹಿಳೆಯರು ಹೆರಿಗೆಯಾದ ನಂತರ ತಮಗೆ ಬೇಕಾದ ಲಸಿಕೆ ಹಾಕಿಸಿಕೊಳ್ಳಬಹುದು ಎಂದು ಸಮಿತಿ ಅಭಿಪ್ರಾಯಪಟ್ಟಿದೆ ಎನ್ನಲಾಗಿದೆ. ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್‍ಗಳ ನಡುವಿನ ಅಂತರ ಸಧ್ಯ ನಾಲ್ಕರಿಂದ ಎಂಟು ವಾರಗಳಷ್ಟಿದೆ.

ಇದರ ಅಂತರವನ್ನು 12-16 ವಾರಗಳಿಗೆ ಹೆಚ್ಚಿಸಬಹುದಾಗಿದೆ. ಆದರೆ,ಕೋವ್ಯಾಕ್ಸಿನ್ ಲಸಿಕೆ ನೀಡುವ ಅಂತರದಲ್ಲಿ ಯಾವುದೆ ಮಾರ್ಪಾಡಿಲ್ಲ ಎಂದು ಸಮಿತಿ ಸ್ಪಷ್ಟಪಡಿಸಿದೆ.

Facebook Comments

Sri Raghav

Admin