ಗೋ ಮೂತ್ರದಿಂದ ನನ್ನ ಸ್ತನ ಕ್ಯಾನ್ಸರ್ ವಾಸಿಯಾಯ್ತು : ಸ್ವಾಧ್ವಿ ಪ್ರಜ್ಞಾಸಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

ಭೋಪಾಲ್,ಏ.23- ಗೋಮೂತ್ರದಿಂದ ನನ್ನ ಸ್ತನ ಕ್ಯಾನ್ಸರ್ ಗುಣಮುಖವಾಯಿತು ಎಂದು ಬಿಜೆಪಿ ಅಭ್ಯರ್ಥಿ ಸ್ವಾದ್ವಿ ಪ್ರಜ್ಞಾಸಿಂಗ್ ಹೇಳಿದ್ದಾರೆ.  ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಅವರು, ಹಸುವಿನ ಇತರೇ ಉತ್ಪನ್ನಗಳ ಜೊತೆಯಲ್ಲಿ ಗೋಮೂತ್ರವನ್ನು ಮಿಶ್ರಣ ಮಾಡಿ ಕುಡಿದಿದ್ದರಿಂದ ಸ್ತನ ಕ್ಯಾನ್ಸರ್‍ನಿಂದ ಗುಣಮುಖಳಾದೆ ಎಂದು ತಿಳಿಸಿದ್ದಾರೆ.

ದೇಶದಲ್ಲಿ ಚರ್ಚೆಯಾಗುತ್ತಿರುವ ಗೋವಿನ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ ಈ ವೇಳೆ ಗೋದಾನ ಪಡೆಯುವುದು ಅಮೃತದಷ್ಟೇ ಉತ್ತಮವಾದದು ಎಂದಿದ್ದಾರೆ.  ಅಲ್ಲದೇ ಹಸುವನ್ನು ಅದರ ಕುತ್ತಿಗೆ ಭಾಗದಿಂದ ಹಿಂಬದಿವರೆಗೂ ಮೈಸವರುತ್ತಿದ್ದರೇ ರಕ್ತದೊತ್ತಡ ಕೂಡ ತಗ್ಗುತ್ತದೆ. ತಾವು ಕೂಡ ಹೀಗೆ ಬಿಪಿಯನ್ನು ನಾರ್ಮಲ್ ಸ್ಟೇಜ್‍ಗೆ ತಂದುಕೊಂಡೆ ಎಂದು ತಿಳಿಸಿದ್ದಾರೆ.

ಭೋಪಾಲ್​ನಲ್ಲಿ ನಾಮಪತ್ರ ಸಲ್ಲಿಸುವ ಸಂಬಂಧ ಕ್ಷೇತ್ರದಲ್ಲಿ ತಯಾರಿ ನಡೆಸ್ತಿರುವ ಅವರು ದೇಶದಲ್ಲಿ ಚರ್ಚೆಯಾಗ್ತಿರುವ ಗೋವಿನ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ರು. ಈ ವೇಳೆ ಗೋದಾನ ಪಡೆಯುವುದು ಅಮೃತಕ್ಕಿಂತ ಸಿಹಿಯಾದದ್ದು ಎಂದಿದ್ದಾರೆ. ಅಲ್ಲದೇ ಹಸುವಿನ ಗೋಮೂತ್ರ ಪಂಚಗವ್ಯ ಸೇರಿದಂತೆ ಆಯುರ್ವೇದದ ಕೆಲ ಮಿಶ್ರಣಗಳನ್ನು ನಿರಂತರವಾಗಿ ಸೇವಿಸುತ್ತಾ ಬಂದಂತೆ ನಾನು ಸ್ತನ ಕ್ಯಾನ್ಸರ್​ ಕಾಯಿಲೆಯಿಂದ ಗುಣಮುಖಳಾದೆ ಎಂದಿದ್ದಾರೆ.

ಅಲ್ಲದೇ, ಹಸುವನ್ನು ಅದರ ಕುತ್ತಿಗೆ ಭಾಗದಿಂದ ಹಿಂಬದಿವರೆಗೂ ಮೈಸವರುತ್ತಿದ್ದರೇ ಬ್ಲಡ್​ ಪ್ರೆಶರ್​ ಕೂಡ ಕಮ್ಮಿಯಾಗುತ್ತದೆ ಎಂದಿದ್ದಾರೆ. ಈ ಸಂಬಂಧ ತಾವು ಕೂಡ ಹೀಗೆ ಬಿಪಿಯನ್ನ ನಾರ್ಮಲ್​ ಸ್ಟೇಜ್​ಗೆ ತಂದುಕೊಂಡೆ ಅಂತಾ ತಮ್ಮನ್ನು ಸಂದರ್ಶನ ಮಾಡಿದ ಪತ್ರಕರ್ತರಿಗೆ ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಎಟಿಎಸ್ ಅಧಿಕಾರಿ ಹೇಮಂತ್ ಕರ್ಕರೆಗೆ ಅವರು, ತಾನು ಶಾಪ ಕೊಟ್ಟ ನಂತರ ಅವರು ಸತ್ತಿದ್ದರು ಎಂದು ಹೇಳಿಕೆ ನೀಡಿದ್ದ ಸಾಧ್ವಿ ಪ್ರಗ್ಯಾ ನಂತರ ಕ್ಷಮಾಪಣೆ ಕೇಳಿ ಸುದ್ದಿಯಾಗಿದ್ದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin