2 ತಲೆ ಇರುವ ವಿಚಿತ್ರ ಕರು ಜನನ…!

ಈ ಸುದ್ದಿಯನ್ನು ಶೇರ್ ಮಾಡಿ

ಚೇಳೂರು, ಏ.22- ಪ್ರಪಂಚದಲ್ಲಿ ಪ್ರತಿ ದಿನ ಒಂದಲ್ಲ ಒಂದು ವಿಸ್ಮಯಗಳು, ಕುತೂಹಲಗಳು ನಡೆಯುತ್ತಲೇ ಇರುತ್ತವೆ.  ಇದಕ್ಕೆ ತಕ್ಕಂತೆ ಗುಬ್ಬಿ ತಾಲ್ಲೂಕಿನ ಚೇಳೂರು ಹೋಬಳಿಯ ತೋಳಚನಹಳ್ಳಿ ಗ್ರಾಮದ ನಿಂಗಪ್ಪ ಎಂಬುವರಿಗೆ ಸೇರಿದ ಸೀಮೆ ಹಸು ಎರಡು ತಲೆಯ ಕರುವಿಗೆ ಜನ್ಮ ನೀಡಿದೆ.

ಕರುವಿಗೆ ಎರಡು ಬಾಯಿ ಹಾಗೂ ನಾಲ್ಕು ಕಣ್ಣುಗಳಿವೆ. ಈ ಕರು ಆರೋಗ್ಯ ವಾಗಿದೆ. ಇದರಿಂದ ಗಾಬರಿಗೊಂಡ ಹಸುವಿನ ಮಾಲೀಕ ಈ ವಿಷಯವಾಗಿ ಜ್ಯೋತಿಷ್ಯ ಕೇಳಿದಾಗ ಇದು ದೈವ ಸ್ವರೂಪ.

ಈ ಕರುವನ್ನು ಯಾವುದೇ ಕಾರಣಕ್ಕೂ ಮಾರುವುದು ಬೇಡ. ಮನೆಯಲ್ಲೇ ಚೆನ್ನಾಗಿ ಸಾಕಿ ಒಳ್ಳೆಯದಾಗುತ್ತದೆ ಎಂದು ಶಾಸ್ತ್ರಿಗಳು ಹೇಳಿದ್ದಾರೆ. ಈ ಕರು ಹಾಲು ಮಾತ್ರ ಕುಡಿಯುತ್ತದೆ. ಮೇವನ್ನು ತಿನ್ನಲು ಸಾಧ್ಯವಿಲ್ಲ ಎಂದು ನಿಂಗಪ್ಪ ತಿಳಿಸಿದ್ದಾರೆ.

ವಿಚಿತ್ರವಾಗಿ ಜನಿಸಿರುವ ಕರುವನ್ನು ವೀಕ್ಷಿಸಲು ಗ್ರಾಮಸ್ಥರು ತಂಡೋಪತಂಡವಾಗಿ ಬರುತ್ತಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin