ಹಸಿ ಮೇವು ತಿಂದು: ಹಸು ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಮಧುಗಿರಿ, ಮೇ15- ಮೇವು ಬ್ಯಾಂಕ್ ವತಿಯಿಂದ ವಿತರಿಸಿದ್ದ ಹಸಿ ಮೇವುನ್ನು ತಿಂದು ಹಸವೊಂದು ಮೃತಪಟ್ಟಿದೆ ಎಂದು ರೈತ ದಂಪತಿಗಳು ಆರೋಪಿಸಿದ್ದಾರೆ.
ತಾಲ್ಲೂಕಿನ ಕಸಬ ಹೋಬಳಿಯ ವೀರಣ್ಣನಹಳ್ಳಿಯ ತಾಂಡದ ಸಮೀಪವಿರುವ ಜಮೀನೊಂದರಲ್ಲಿ ಹನುಮಂತರಾಯಪ್ಪ ಮತ್ತು ಲಕ್ಷಮ್ಮ ದಂಪತಿಗಳು ಕಳೆದ ತಿಂಗಳು ಗುಡಿಬಂಡೆಯ ಸಂತೆಯಿಂದ ಖರೀದಿಸಿ ತಂದಿದ್ದ ಸುಮಾರು 35 ಸಾವಿರ ಬೆಲೆ ಬಾಳುವ ಹಸುಮೃತಪಟ್ಟಿದೆ.

ಪಶು ಇಲಾಖೆಯ ಆಶ್ರಯದಲ್ಲಿ ನಡೆಸಲಾಗುತ್ತಿರುವ ಮೇವು ಬ್ಯಾಂಕಿನಿಂದ ಇದೂವರೆವಿಗೂ ಮೇವು ತಂದಿರಲಿಲ್ಲ ಆದರೆ ಮೂರು ದಿನಗಳ ಹಿಂದೆಯಷ್ಟೆ 450 ರೂ ಹಣ ನೀಡಿ ಖರೀದಿಸಿದ್ದ ಹಸಿ ಸೊಕ್ಕು ಜೋಳವನ್ನು ತಿಂದು ಹಸು ಮೃತಪಟ್ಟಿದೆ ಎಂದು ರೈತ ದಂಪತಿಗಳು ಆರೋಪಿಸಿದ್ದಾರೆ. ನಮಗೆ ಆಗಿರುವ ಅನ್ಯಾಯ ಮುಂದೆ ಯಾರಿಗೂ ಆಗಬಾರದು ಸಂಬಂಧಪಟ್ಟವರು ಸರ್ಕಾರದ ವತಿಯಿಂದ ಪರಿಹಾರ ದೊರಕಿಸಿ ಕೊಡುವಂತೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ್ದ ಪಶು ವೈದ್ಯ ದಿವಾಕರ್ ಮಾತನಾಡಿ ಬೇಸಿಗೆ ಕಾಲದ ಬಿಸಿಲು ತೀವ್ರವಾಗಿದೆ ಮೇವನ್ನು ತಿಂದ ಹಸು ಹೆಚ್ಚಾಗಿ ನೀರು ಕುಡಿದಿರುವುದರಿಂದ ಆಹಾರ ಅಜೀರ್ಣವಾಗಿ ಹೊಟ್ಟೆ ಉಬ್ಬರವಾಗಿ ಮೃತಪಟ್ಟಿದೆ. ಹಸುವಿನ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಸರಕಾರದ ವತಿಯಿಂದ ರೈತ ಕುಟುಂಬಕ್ಕೆ ಪರಿಹಾರ ಒದಗಿಸಲಾಗುವುದು ಎಂದು ಭರವಸೆಯನ್ನು ನೀಡಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ