ಸಾಲ ಸಂಪರ್ಕ ಕಾರ್ಯಕ್ರಮ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.26- ಕೇಂದ್ರ ಸರ್ಕಾರದ ಆದೇಶದ ಮೇರೆಗೆ ರಾಜ್ಯ ಮಟ್ಟದ ಬ್ಯಾಂಕರ್‍ಗಳ ಸಮಿತಿಯಿಂದ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯ ಮಾರ್ಗದರ್ಶಿ ಬ್ಯಾಂಕುಗಳ ಮುಂದಾಳತ್ವದಲ್ಲಿ ಎಲ್ಲಾ ಬ್ಯಾಂಕುಗಳ ಸಹಯೋಗದೊಂದಿಗೆ ಗ್ರಾಹಕರಿಗೆ ಸಾಲ ಸಂಪರ್ಕ (ಕ್ರೆಡಿಟ್ ಔಟ್ ರೀಚ್) ಕಾರ್ಯಕ್ರಮ ಇಂದು ನಗರದ ಸೆಂಟ್ರಲ್ ಕಾಲೇಜಿನ ಆವರಣದಲ್ಲಿರುವ ಜ್ಞಾನಜ್ಯೋತಿ ಸಭಾಂಗಣದಲ್ಲಿ ಇಂದು ಯಶಸ್ವಿಯಾಗಿ ನಡೆಯಿತು.

ಕೇಂದ್ರದ ಮಹತ್ವಾಕಾಂಕ್ಷಿ ಆತ್ಮ ನಿರ್ಭರ ಯೋಜನೆಗಳಡಿ ಬರುವ ಜಿ.ಇ.ಸಿ.ಎಲ್.,ಕೃ ಷಿ ಮೂಲಸೌಕರ್ಯ ನಿ ಯೋಜನೆ(ಎಐಎಪ್), ಪಶು ಸಂಗೋಪನಾ ಮೂಲ ಸೌಕರ್ಯ ನಿ ಯೋಜನೆ(ಎಎಚ್‍ಐಡಿಎಫ್) ಮತ್ತು ಪಿಎಂಎಂವೈ(ಮುದ್ರಾ) ಸ್ಟ್ಯಾಂಡ್ ಅಪ್ ಇಂಡಿಯಾ, ಪಿಎಂಇಜಿಪಿ, ಕೃಷಿ ಮತ್ತು ಕೃಷಿಯೇತರ, ಎಎಸ್‍ಎಂಇ, ರಿಟೈಲ್, ಶಿಕ್ಷಣ ಮತ್ತು ವಸತಿ ಸಾಲಗಳಲ್ಲದೆ ಸಾಮಾಜಿಕ ಭದ್ರತಾ ಯೋಜನೆಗಳಾದ ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆ, ಪ್ರಧಾನಮಂತ್ರಿ ಜೀವನ ಜ್ಯೋತಿ ಮತ್ತು ಅಟಲ್ ಪಿಂಚಣಿ ಯೋಜನೆ ಬಗ್ಗೆ ಈ ಜನ ಜಾಗೃತಿ ಮೂಡಿಸಿ ಫಲಾನುಭವಿಗಳು ಸಾಲ ಹಂಚಿಕೆ ಪತ್ರ ನೀಡಲಾಯಿತು.

ಅಡಿಷನಲ್ ಚೀಪ್ ಸೆಕ್ರೆಟರಿ ರಾಕೇಶ್ ಸಿಂಗ್, ನಬಾರ್ಡ್‍ನ ಎಜಿಎಂ ಜಿಕ್ಸಿ ರಫದ್, ಕೆನರಾ ಬ್ಯಾಂಕ್‍ನ ಸಿಜಿಎಂ ದೀಪೇಂದ್ರ, ದಾಮೋದರನ್, ಸುಬ್ಬಾ ನಾಯಕ್, ಪಾಶ್ರ್ವನಾಥ್, ಯೂನಿಯನ್ ಬ್ಯಾಂಕ್‍ನ ಚಂದ್ರಮೋಹನ ರೆಡ್ಡಿ, ಎಸ್‍ಬಿಐನ ಶಿವದಾಸ್, ಕರ್ನಾಟಕ ಬ್ಯಾಂಕ್‍ನ ನಾಗರಾಜ್, ಕೆ.ಸಿ.ಮಧುಸೂಧನ್ ಮತ್ತಿತರ ಅಕಾರಿಗಳು ಭಾಗವಹಿಸಿದ್ದರು.

Facebook Comments