ಕ್ರಿಕೆಟ್ ಬೆಟ್ಟಿಂಗ್ : ವ್ಯಕ್ತಿ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.12- ಆ್ಯಪ್ ಮತ್ತು ವೆಬ್‍ಸೈಟ್‍ನಲ್ಲಿ ಬೆಟ್ಟಿಂಗ್ ರೇಶ್ಯೂ ನೋಡಿಕೊಂಡು ಮೊಬೈಲ್ ಫೋನ್ ಮೂಲಕ ಹಣ ಕಟ್ಟಿಸಿಕೊಂಡು ಕ್ರಿಕೆಟ್ ಬೆಟ್ಟಿಂಗ್‍ನಲ್ಲಿ ತೊಡಗಿದ್ದ ವ್ಯಕ್ತಿಯೊಬ್ಬನನ್ನು ಸಿಸಿಬಿ ಪೊಲೀಸರು ಬಂಸಿ 5 ಲಕ್ಷ ರೂ. ನಗದು ಹಾಗೂ ಮೊಬೈಲ್ ವಶಪಡಿಸಿಕೊಂಡಿದ್ದಾರೆ.

ರಾಮಮೂರ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹೊರಮಾವು ರಸ್ತೆ ಕೆ.ಚನ್ನಸಂದ್ರ ಸರ್ಕಾರಿ ಶಾಲೆ ಹತ್ತಿರದ ಮನೆಯೊಂದರಲ್ಲಿ ಒಬ್ಬಾತ ಡೆಲ್ಲಿ ಕ್ಯಾಪಿಟಲ್ಸ್-ಚೆನ್ನೈ ಸೂಪರ್‍ಕಿಂಗ್ಸ್ ಕ್ರಿಕೆಟ್ ಪಂದ್ಯಗಳಿಗೆ ಸಂಬಂಸಿದಂತೆ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು-ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ಮಧ್ಯೆ ಟಿ-20 ಕ್ರಿಕೆಟ್ ಪಂದ್ಯಗಳಿಗೆ ಸಂಬಂಸಿದಂತೆ ಬೆಟ್ಟಿಂಗ್ ನಡೆಸುತ್ತಿದ್ದನು.

ಅಲೆಕ್ಸ್‍ಬೆಟ್ ಡಾಟ್‍ಕಾಮ್ ಎಂಬ ಆ್ಯಪ್-ವೆಬ್‍ಸೈಟ್ ಮೂಲಕ ಬೆಟ್ಟಿಂಗ್ ರೇಶ್ಯೂ ನೋಡಿಕೊಂಡು ಮೊಬೈಲ್‍ನಲ್ಲಿ ಹಣವನ್ನು ಪಣವಾಗಿ ಕಟ್ಟಿಸಿಕೊಂಡು ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದನು.

ಬೆಟ್ಟಿಂಗ್ ಹಣವನ್ನು ಪಂಟರ್‍ಗಳಿಂದ ಸಂಗ್ರಹಿಸುತ್ತಿದ್ದ ಬಗ್ಗೆ ಸಿಸಿಬಿ ಪೊಲೀಸರಿಗೆ ಲಭಿಸಿದೆ. ತಕ್ಷಣ ಕಾರ್ಯಪ್ರವೃತ್ತರಾದ ಸಿಸಿಬಿ ಪೊಲೀಸರು ಸ್ಥಳಕ್ಕೆ ತೆರಳಿ ಆರೋಪಿಯನ್ನು ಬಂಸಿ ಬೆಟ್ಟಿಂಗ್ ಜೂಜಾಟಕ್ಕೆ ಸಂಬಂಸಿದ 5 ಲಕ್ಷ ಹಣ ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಆರೋಪಿ ವಿರುದ್ಧ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಉಪ ಪೊಲೀಸ್ ಆಯುಕ್ತ ರವಿಕುಮಾರ್ ಅವರ ಮಾರ್ಗದರ್ಶನದಲ್ಲಿ ಸಹಾಯಕ ಪೊಲೀಸ್ ಆಯುಕ್ತ ಹನುಮಂತರಾಯ ನೇತೃತ್ವದಲ್ಲಿ ಇನ್ಸ್‍ಪೆಕ್ಟರ್ ರಹೀಂ ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆ ಕೈಗೊಂಡಿದ್ದರು.

Facebook Comments