ಕ್ರಿಕೆಟ್ ಬೆಟ್ಟಿಂಗ್ : 10.36ಲಕ್ಷ ರೂ. ವಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.20-ಕ್ರಿಕೆಟ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿದ್ದ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿ 10.36 ಲಕ್ಷ ರೂ. ನಗದು ಹಾಗೂ 3ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ವಿಕಾಸ್‍ಜೈನ್, ಹರೀಶ್‍ಕುಮಾರ್ ಮತ್ತು ಪ್ರವೀಣ್ ಬಂಧಿತರಾಗಿದ್ದು, ಇವರು ಜೆ.ಪಿ.ನಗರ ವ್ಯಾಪ್ತಿಯ ಸಾಯಿ ಮೆಡ್‍ಲೈಫ್ ಮೆಡಿಕಲ್ ಸ್ಟೋರ್ ಸಮೀಪ ನಿನ್ನೆ ಸಂಜೆ ಕರ್ನಾಟಕ ಪ್ರೀಮಿಯಮ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ಸಂಬಂಧಪಟ್ಟಂತೆ ಹುಬ್ಬಳ್ಳಿ ಟೈಗರ್ಸ್‍ಮತ್ತು ಬಳ್ಳಾರಿ ಟಕ್ಕರ್ಸ್ ತಂಡಗಳ ನಡುವೆ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯಕ್ಕೆ ಸಂಬಂಧಪಟ್ಟಂತೆ ವೆಬ್‍ಸೈಟ್‍ಮೂಲಕ ತಂಡಗಳ ಗೆಲುವು-ಸೋಲಿನ ಬಗ್ಗೆ ಮೊಬೈಲ್ ಮುಖಾಂತರ ಹಣ ಕಟ್ಟಿಸಿಕೊಂಡು ಜೂಜಾಡುತ್ತಿದ್ದರು.

ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ಮಾಡಿ ಈ ಮೂವರನ್ನು ಬಂಧಿಸಿ ಪಣಕ್ಕಿಟ್ಟಿದ್ದ ಹಣ ಹಾಗೂ 3 ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

Facebook Comments