ಯಡೂರುನಲ್ಲಿ ಜ.25, 26ರಂದು ಕ್ರಿಕೆಟ್ ಹಬ್ಬ

ಈ ಸುದ್ದಿಯನ್ನು ಶೇರ್ ಮಾಡಿ

ಶಿವಮೊಗ್ಗ, ಜ.23- ಯಡೂರು ಕ್ರಿಕೆಟ್ ಲೀಗ್-2020ರ ಸೀಸನ್-2ಅನ್ನು ಈ ಬಾರಿ ಮಲೆನಾಡು ಧಣಿ ದಿ.ಸಿದ್ಧಾರ್ಥ ಹೆಗಡೆ ಅವರ ಗೌರವಾರ್ಥವಾಗಿ ನಡೆಸಲಾಗುತ್ತಿದ್ದು, ಹೊಸನಗರದ ವಿಟಿ ಗ್ರೌಂಡ್‍ನಲ್ಲಿ ಇದೇ ಶನಿವಾರ ಮತ್ತು ಭಾನುವಾರ ಆಯೋಜಿಸಲಾಗಿದೆ.

ಜ.25 ಮತ್ತು 26ರಂದು ನಡೆಯಲಿರುವ ಪಂದ್ಯಾವಳಿಯನ್ನು ಶನಿವಾರ ಬೆಳಗ್ಗೆ 7 ಗಂಟೆಗೆ ನಗರಠಾಣೆ ಸಬ್‍ಇನ್ಸ್‍ಪೆಕ್ಟರ್ ಸಿ.ಆರ್.ಕೊಪ್ಪದ್, ಹೊಸನಗರದ ಬಿಎಸ್‍ಎನ್‍ಎಲ್ ಜೆಇ ಎಸ್.ಪಿ.ಲೋಹಿತ್, ಅರೇಕಾ ಟೀ ಸಂಶೋಧಕ ನಿವೇದನ್ ನೆಂಪೆ, ಐಸಿಐಸಿಐ ಲೊಂಬರ್ಡ್‍ನ ರೀಜನಲ್ ಮ್ಯಾನೇಜರ್ ರವಿರಾಜ್ ನಾರಾಯಣ್, ವರದಿಗಾರರಾದ ಸುಕೇಶ್, ವಿಕಾಸ್‍ಗೌಡ, ರಾಘವೇಂದ್ರ ಮತ್ತು ನಿರೂಪಕ ಮಾಲ್ತೇಶ್ ಜನಗಲ್ ಉದ್ಘಾಟಿಸಲಿದ್ದಾರೆ.

26ರಂದು ಸಂಜೆ 6 ಗಂಟೆಗೆ ನಡೆಯಲಿರುವ ಸಮಾರಂಭದಲ್ಲಿ ಚಿಕ್ಕಬಳ್ಳಾಪುರ ಸರ್ಕಲ್ ಇನ್ಸ್‍ಪೆಕ್ಟರ್ ಸುದರ್ಶನ್ ಎಚ್.ವಿ., ಹೊಸನಗರ ಸರ್ಕಲ್ ಇನ್ಸ್‍ಪೆಕ್ಟರ್ ಗುರಣ್ಣ ಎಸ್.ಹೆಬ್ಬಾಳ್, ತೀರ್ಥಹಳ್ಳಿಯ ಹಿರಿಯ ಕ್ರಿಕೆಟ್ ಆಟಗಾರ ಅಬ್ದುಲ್ ಕಲಾಂ ಸೇರಿದಂತೆ ಹಲವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ಸಾಹಿತಿ ಹಾಗೂ ಚಲನಚಿತ್ರ ನಿರ್ದೇಶಕ ಕವಿರಾಜ್, ನಟ ಪ್ರವೀಣ್ ತೇಜ್, ನಿರ್ದೇಶಕ ಮಂಜು, ನಟಿ ಕುಮಾರಿ ಕಲ್ಪನಾ ಮತ್ತಿತರರು ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು. ಸಮಾರಂಭದಲ್ಲಿ ಕಸ್ತೂರ ಬಾ ಮಹಿಳಾ ಮಂಡಳಿ ಅಧ್ಯಕ್ಷೆ ಕೆ.ಜಯಮ್ಮ, ಕಾಫಿ ಡೇಯ ಹೆಬ್ಬಾಳ ಬೈಲಿನ ಹಿರಿಯ ವ್ಯವಸ್ಥಾಪಕ ಸಂದೀಪ್ ಹೆಗ್ಗಡೆ, ಕ್ರಿಕೆಟ್ ಪಟು ಟೊಪ್ಪಿ ರಾಘವೇಂದ್ರ, ರವಿ ಅವರನ್ನು ಸನ್ಮಾನಿಸಲಾಗುವುದು.

ಇದೇ ವೇಳೆ ಪಂದ್ಯಾವಳಿಯಲ್ಲಿ ವಿಜೇತರಾದ ತಂಡಗಳಿಗೆ ಪಂದ್ಯಾವಳಿಯ ಸಮಗ್ರ ಟ್ರೋಫಿ, ಸರಣಿ ಪುರುಷೋತ್ತಮ ಟ್ರೋಫಿಯನ್ನು ನೀಡಲಾಗುವುದು.  ಸಂಜೆ ಸಾಂಸ್ಕøತಿಕ ರಸಸಂಜೆ ಕಾರ್ಯಕ್ರಮವನ್ನು ಕುಂದಾಪುರದ ತಾಂಡವಂ ಗ್ರೂಪ್ಸ್ ನಡೆಸಿಕೊಡಲಿದೆ. ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ವರಾಹಿ ಟೈಗರ್ಸ್, ಹೆಗ್ಗಡೆ ಬುಲ್ಸ್, ಕೆಯುಜಿ ಕ್ರಿಕೆಟರ್ಸ್, ರೈನಿ ಪ್ಯಾರಡೈಸ್, ಯಡೂರು ಲಯನ್ಸ್, ಹನಿ ಸ್ಟ್ರೈಕರ್ಸ್, ಮಲ್ನಾಡ್ ಫಾರ್ಮರ್ಸ್, ಬಿಯರ್ಡ್ ಬಾಯ್ಸ್ , ಕ್ರೇಜಿ-11, ಆರ್ಮಿ ಇಲೆವನ್ ಸ್ಟಾರ್ ತಂಡಗಳು ಪಾಲ್ಗೊಳ್ಳಲಿವೆ. ಪಂದ್ಯಾವಳಿಯ ನೇರ ಪ್ರಸಾರ ಎಂ ಸ್ಪೋಟ್ರ್ಸ್‍ನ ಯು ಟ್ಯೂಬ್ ಚಾನಲ್‍ನಲ್ಲಿ ಲಭ್ಯವಾಗಲಿದೆ.

Facebook Comments