ಲಾಕ್‍ಡೌನ್ ನಡುವೆಯೇ ಬೆಂಗಳೂರಲ್ಲಿ ಗಾಂಜಾ ಗಲಾಟೆ, ಸ್ನೇಹಿತನಿಗೆ ಇರಿತ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.15- ಗಾಂಜಾ ವಿಚಾರದಲ್ಲಿ ಸ್ನೇಹಿತರ ನಡುವೆ ಜಗಳ ನಡೆದು ಯುವಕನೊಬ್ಬನಿಗೆ ಚಾಕುವಿನಿಂದ ಇರಿದಿರುವ ಘಟನೆ ವಿವೇಕನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಸ್ನೇಹಿತರಿಂದ ಇರಿತಕ್ಕೊಳಗಾಗಿರುವ ಯುವಕನನ್ನು ವಿಜಯ್ (21) ಎಂದು ಗುರುತಿಸಲಾಗಿದೆ.

ನಿನ್ನೆ ಸಂಜೆ 6 ಗಂಟೆಯಲ್ಲಿ ಆಸ್ಟಿನ್‍ಟೌನ್ ಸಮೀಪ ಸ್ನೇಹಿತರ ನಡುವೆ ಜಗಳ ನಡೆದು ಈ ದುರ್ಘಟನೆ ಸಂಭವಿಸಿದೆ. ಗಾಂಜಾ ವಿಚಾರವಾಗಿ ಸ್ನೇಹಿತರು ಗಲಾಟೆ ಮಾಡಿಕೊಂಡಿರುವ ಸಾಧ್ಯತೆ ಇದ್ದು, ಕೆಲವರು ವಿಜಯ್‍ನ ಕುತ್ತಿಗೆಗೆ ಇರಿದಿದ್ದಾರೆ ಎಂದು ಪೂಲೀಸರು ತಿಳಿಸಿದ್ದಾರೆ.

ಇರಿತದಿಂದ ಸಾವು-ನೋವಿನ ನಡುವೆ ಸೆಣಸಾಡುತ್ತಿದ್ದ ವಿಜಯ್‍ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿರುವ ಪೂಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Facebook Comments

Sri Raghav

Admin