ಭಾರತದಲ್ಲಿ ಹೆಚ್ಚುತ್ತಿರುವ ವಿದೇಶಿಯರ ಅಪರಾಧ ಪ್ರಕರಣಗಳು, ಕರ್ನಾಟಕದಲ್ಲಿ ಶೇ 11.2ರಷ್ಟು ಕೇಸ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಸೆ.30- ಭಾರತದಲ್ಲಿ ನೆಲೆಸಿರುವ ವಿದೇಶಿಗರ ವಿರುದ್ಧ ಹೆಚ್ಚೆಚ್ಚು ಅಪರಾಧ ಪ್ರಕರಣಗಳು ದಾಖಲಾಗುತ್ತಿದ್ದು, ದೆಹಲಿಯಲ್ಲಿ ಶೇ 30.1, ಮಹಾರಾಷ್ಟ್ರದಲ್ಲಿ ಶೇ 11.7 ಮತ್ತು ಕರ್ನಾಟಕದಲ್ಲಿ ಶೇ 11.2ರಷ್ಟು ಪ್ರಕರಣಗಳು ದಾಖಲಾಗಿವೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‍ಸಿಆರ್‍ಬಿ) ಅಂಕಿ ಅಂಶಗಳ ಪ್ರಕಾರ, 2019 ರಲ್ಲಿ ಅತ್ಯಾಚಾರ, ಕೊಲೆ ಮತ್ತು ಕಳ್ಳತನ ಸೇರಿದಂತೆ ಒಟ್ಟು 409 ಅಪರಾಧ ಪ್ರಕರಣಗಳು ದಾಖಲಾಗಿದ್ದು, 2018ರಲ್ಲಿ 517 ಮತ್ತು ಹಿಂದಿನ ವರ್ಷದ 492 ಪ್ರಕರಣಗಳು ದಾಖಲಾಗಿವೆ.

ದೆಹಲಿ (123 ಪ್ರಕರಣಗಳು), ಮಹಾರಾಷ್ಟ್ರ (48 ಪ್ರಕರಣಗಳು) ಮತ್ತು ಕರ್ನಾಟಕ (46 ಪ್ರಕರಣಗಳು) ಒಟ್ಟಾಗಿ ವರ್ಷದಲ್ಲಿ ಒಟ್ಟು ಪ್ರಕರಣಗಳಲ್ಲಿ ಶೇಕಡಾ 53 ರಷ್ಟಿದೆ ಎಂದು ಅಂಕಿ ಅಂಶಗಳು ತಿಳಿಸಿವೆ.

ನಂತರದ ಸ್ಥಾನಗಳಲ್ಲಿ ತಮಿಳುನಾಡು (ಶೇ 5.6), ಗೋವಾ ಮತ್ತು ಉತ್ತರ ಪ್ರದೇಶ (ಎರಡೂ ಶೇ 5.1), ಹರಿಯಾಣ (ಶೇ 4.6), ರಾಜಸ್ಥಾನ (ಶೇ 3.9), ಕೇರಳ ಮತ್ತು ಅಸ್ಸಾಂ (ಎರಡೂ ಶೇ 3.7) ಮತ್ತು ಮಧ್ಯಪ್ರದೇಶ ( 3.2 ರಷ್ಟು) ಎಂದು ವರದಿಯಗಿದೆ.

2019ರಲ್ಲಿ ದಾಖಲಾದ 409 ಪ್ರಕರಣಗಳಲ್ಲಿ ಗರಿಷ್ಠ 142 ಕಳ್ಳತನ, 54 ಇತರ ಐಪಿಸಿ (ಭಾರತೀಯ ದಂಡ ಸಂಹಿತೆ) ಅಪರಾಧಗಳು, 41 ವಂಚನೆ, 26 ಮಹಿಳೆಯರ ಮೇಲೆ ಹಲ್ಲೆ, 14 ಗಾಯಗೊಳಿಸಿರುವ ಅಪರಾಧಗಳು, 13 ಕೊಲೆ ಪ್ರಕರಣಗಳು, 12 ಅತ್ಯಾಚಾರಗಳು ಮತ್ತು ಐದು ಅಪಹರಣ ಪ್ರಕರಣಗಳು ದಾಖಲಾಗಿವೆ ಎಂದು ಎನ್‍ಸಿಆರ್‍ಬಿ ತಿಳಿಸಿದೆ. ಅಂಕಿಅಂಶಗಳ ಪ್ರಕಾರ ವರ್ಷದಲ್ಲಿ ಅನೈತಿಕ ಸಂಚಾರ (ತಡೆಗಟ್ಟುವಿಕೆ) ಕಾಯ್ದೆಯಡಿ 15 ಪ್ರಕರಣಗಳು ದಾಖಲಾಗಿವೆ.

Facebook Comments

Sri Raghav

Admin