ಕುರಿಯನ್ನು ನುಂಗಿ ಜೀರ್ಣಿಸಿಕೊಳ್ಳಲಾಗದೆ ಮೊಸಳೆ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಕೊಪ್ಪಳ, ಜೂ.8-ನದಿದಂಡೆಯಲ್ಲಿ ಮೇಯುತ್ತಿದ್ದ ಕುರಿಯನ್ನು ನುಂಗಿದ್ದ ಮೊಸಳೆ ಜೀರ್ಣಿಸಿಕೊಳ್ಳಲಾಗದೆ ಸಾವನ್ನಪ್ಪಿರುವ ಘಟನೆ ಗಂಗಾವತಿ ತಾಲೂಕಿನ ಆನೆಗುಂದಿ ತುಂಗಾಭದ್ರ ನದಿ ಬಳಿ ನಡೆದಿದೆ.

ಮೀನುಗಾರರು ನಿನ್ನೆ ಸಂಜೆ ಬಲೆ ಬೀಸಿದಾಗ ಅದಕ್ಕೆ ಭಾರೀ ಗಾತ್ರದ ಮೊಸಳೆ ಸಿಕ್ಕಿಕೊಂಡಿದೆ. ಆತಂಕಗೊಂಡ ಅವರು, ದಡಕ್ಕೆ ಬಂದು ಬಲೆಯನ್ನು ಎಳೆದಿದ್ದಾರೆ. ವಿಚಿತ್ರ ಎಂಬಂತೆ ಮೊಸಳೆ ಕೂಡ ಮೇಲೆ ಬಂದಿದೆ. ತಕ್ಷಣ ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

ಮುನ್ನಚ್ಚರಿಕೆ ಕ್ರಮ ಕೈಗೊಂಡು ಮೊಸಳೆಯನ್ನು ಮತ್ತೆ ನೀರಿಗೆ ಬಿಡಲು ಮುಂದಾದ ಸಿಬ್ಬಂದಿಗೆ ಅದು ಸಾವನ್ನಪ್ಪಿರುವುದು ತಿಳಿದುಬಂದಿದೆ. ಕಳೆದ ಎರಡು ದಿನಗಳ ಹಿಂದೆ ನದಿ ದಂಡೆಯಲ್ಲಿ ಮೇಯುತ್ತಿದ್ದ ಕುರಿಯೊಂದನ್ನು ಈ ಮೊಸಳೆ ತಿಂದಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.

ಸುಮಾರು 7 ಅಡಿ ಉದ್ದ, 300 ಕೆಜಿ ತೂಕದ ಈ ಭಾರೀ ಗಾತ್ರದ ಮೊಸಳೆಯನ್ನು ನದಿಯಂಚಿನಿಂದ ಕ್ರೇನ್ ಸಹಾಯದಿಂದ ಮೇಲೆತ್ತಿ ಅದರ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ಈ ವೇಳೆ ಅದು ಕುರಿ ನುಂಗಿರುವುದು ಪತ್ತೆಯಾಗಿದೆ. ವಯಸ್ಸಾಗಿರುವ ಹಿನ್ನೆಲೆಯಲ್ಲಿ ಜೀರ್ಣಿಸಿಕೊಳ್ಳಲಾಗದೆ ಮೃತಪಟ್ಟಿರುವುದಾಗಿ ಅರಣ್ಯಾಧಿಕಾರಿ ಗೋವಿಂದರಾಜು ತಿಳಿಸಿದ್ದಾರೆ.

Facebook Comments

Sri Raghav

Admin