ಜಮೀನಿಗೆ ನುಗ್ಗಿದ ಮೊಸಳೆ, ರೈತರಲ್ಲಿ ಆತಂಕ

ಈ ಸುದ್ದಿಯನ್ನು ಶೇರ್ ಮಾಡಿ

ರಾಯಚೂರು,ಆ.2- ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಜಲಾಶಯಗಳಿಂದ ಹೆಚ್ಚುವರಿ ನೀರು ಹರಿಬಿಡುತ್ತಿರುವ ಹಿನ್ನೆಲೆ ನದಿಗಳಲ್ಲಿ ನೀರು ಹೆಚ್ಚಿ ಮೊಸಳೆಗಳು ನದಿ ಪಾತ್ರದ ಹೊಲಗಳಿಗೆ ಲಗ್ಗೆಯಿಡುತ್ತಿರುವುದು ಸ್ಥಳೀಯ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.

ರಾಯಚೂರಿನ ಲಿಂಗಸುಗೂರಿನ ಬೋಗಾಪುರದ ಕೆರೆಯು ಮಳೆಗೆ ತುಂಬಿರುವ ಕಾರಣಕ್ಕೆ ಅದರಲ್ಲಿದ್ದ ಮೊಸಳೆಯೊಂದು ಜಮೀನೊಂದಕ್ಕೆ ನುಗ್ಗಿದ್ದು ರೈತರಿಗೆ ತಲೆನೋವಾಗಿ ಪರಿಣಮಿಸಿದೆ.

ಈ ಹಿಂದೆ ಕೂಡ ಆಹಾರ ಅರಸಿ ಹಲವಾರು ಬಾರಿ ಮೊಸಳೆಗಳು ಜಮೀನುಗಳಿಗೆ ನುಗ್ಗಿದ್ದವು. ಆಗ ಗ್ರಾಮಸ್ಥರು ಅವುಗಳನ್ನು ಧೈರ್ಯದಿಂದ ಹಿಡಿದು ಅರಣ್ಯ ಇಲಾಖೆಗಳಿಗೆ ಒಪ್ಪಿಸಿರುವ ಪ್ರಕರಣಗಳು ಕೂಡ ಇವೆ. ಸದ್ಯ ಜಮೀನಿನಲ್ಲಿ ಕಾಣಿಸಿಕೊಂಡಿದ್ದ ಮೊಸಳೆ ರೈತರಲ್ಲಿ ಆತಂಕ ಸೃಷ್ಟಿಸಿದೆ.

Facebook Comments