ಸಿಆರ್‌ಪಿಎಫ್‌ ಅಧಿಕಾರಿ ಕೊಂದು ಶಸ್ತ್ರಾಸ್ತ್ರಗಳೊಂದಿಗೆ ಉಗ್ರರು ಪರಾರಿ

ಈ ಸುದ್ದಿಯನ್ನು ಶೇರ್ ಮಾಡಿ

ಶ್ರೀನಗರ, ಸೆ.24- ಕಾಶ್ಮೀರ ಕಣಿವೆ ಯಲ್ಲಿ ಯೋಧರನ್ನು ಗುರಿಯಾಗಿರಿಸಿಕೊಂಡು ಭಯೋತ್ಪಾದಕರು ದಾಳಿ ನಡೆಸುವ ಪ್ರಕರಣಗಳು ಹೆಚ್ಚಾಗುತ್ತಿದೆ.  ಜಮ್ಮು ಮತ್ತು ಕಾಶ್ಮೀರದ ಬದ್ಗಂಜಿಲ್ಲೆಯಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಅರ್‍ಪಿಎಫ್)ಯಅಧಿಕಾರಿಯೊಬ್ಬರು ಹತರಾಗಿದ್ದಾರೆ. ಉಗ್ರ ಮೃತ ಅಧಿಕಾರಿ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನು ಅಪಹರಿಸಿ ಪರಾರಿಯಾಗಿದ್ದಾರೆ.

ಬದ್ಗಂ ಜಿಲ್ಲೆಯ ಕೈಸರ್‍ಮುಲ್ಲಾ ಪ್ರದೇಶದಲ್ಲಿ ಇಂದು ಮುಂಜಾನೆ ಆತಂಕವಾದಿಗಳು, ಸಿಆರ್‌ಪಿಎಫ್‌ನ 117ನೇ ಬೆಟಾಲಿಯನ್‍ನ ಸಹಾಯಕ ಸಬ್‍ಇನ್ಸ್‍ಪೆಕ್ಟರ್ ಎ.ಸಿ ಬದೊಲೆ ಅವರ ಮೇಲೆ ದಾಳಿ ನಡೆಸಿ ಅವರ ಬಳಿ ಇದ್ದ ಎಕೆ-47 ಸರ್ವಿಸ್‍ರೈಫಲ್ ಮತ್ತು ಬುಲೆಟ್‍ಗಳೊಂದಿಗೆ ಪರಾರಿಯಾದರು.

ತೀವ್ರಗಾಯಗೊಂಡ ಬದೊಲೆ ಶ್ರೀನಗರದ ಬದ್ಗಂ ಭಾಗ್‍ನ ಸೇನಾಪಡೆಯ 92ನೇ ಬೇಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.  ಸಿಆರ್‍ಪಿಎಫ್ ಅಧಿಕಾರಿಯನ್ನು ಹತ್ಯೆಗೈದು ಶಸ್ತ್ರಾಸ್ತ್ರದೊಂದಿಗೆ ಪರಾರಿಯಾಗಿರುವಉಗ್ರರಿಗಾಗಿ ಶೋಧ ಮುಂದುವರಿದಿದೆ.

Facebook Comments