ಮೂವರು ಪತ್ನಿಯರ ಮುದ್ದಿನ ‘ಪೋಲಿ’ಸಪ್ಪ..!

ಈ ಸುದ್ದಿಯನ್ನು ಶೇರ್ ಮಾಡಿ

Police-Marriag-e-01

ಬೆಳಗಾವಿ.ಜ.24 : ಮಾಜಿ ಸಿಆರಪಿಎಫ್ ಪೊಲೀಸಪ್ಪನ ಮೋಸದಾಟ ಬಯಲಿಗೆ ಬಂದಿದೆ. ಪ್ರೀತಿಸಿ ಮದುವೆಯಾದ ಮೊದಲ ಪತ್ನಿಗೆ ಕೈಕೊಟ್ಟು ಮತ್ತಿಬ್ಬರನ್ನ ಪ್ರೀತಿಸಿ ಮದುವೆಯಾಗಿದ್ದು ಇಗ ಬಯಲಿಗೆ ಬಂದಿದೆ.

ಅಜೀತ ಮಾದರ ಎಂಬಾತನಿಂದಲೇ ಮಹಿಳೆಯರ ಬಾಳಲ್ಲಿ ಚಲ್ಲಾಟ್ ಆಡಿದ್ದಾನೆ..  2011ರಲ್ಲಿ ದ್ರಾಕ್ಷಾಯಿಣಿಗೆ ಪ್ರೀತಿಸಿ ಮದುವೆಯಾಗಿದ್ದ ಅಜೀತ ಮಾದರ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ…ಆದ್ರೂ ವಿವಾಹಿತ ಮಹಿಳೆಯಾದ ಸೀಮಾ ಚೌವಾಣ ನನ್ನ ಪ್ರೀತಿ ಕೈಕೊಟ್ಟಿದ್ದಾನೆ.

ಈಗ ಮತ್ತೆ 2ನೇ ಮುದುವೆ ಆಗಿದ್ದಾನೆ ಜೆಡಿಎಸ್ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಯಶ್ರೀ ಸೂರ್ಯವಂಶಿ ಎಂಬಾಕೆಯ ಜೊತೆ ರಿಜಿಸ್ಟರ್ ಮದುವೆ ಆಗಿದ್ದಾನೆ. ಇವರಿಬ್ಬರನ್ನು ಪ್ರೀತಿಸಿ ಮದುವೆ ಆಗಿದ್ದಾನೆ.

ದುರಂತವೆಂದ್ರೆ ಜೆಡಿಎಸ್ ನಾಯಕಿಗೆ ಅಜೀತ ಮಾದರನ ಮೋಸದಾಟ ಬಗ್ಗೆ ಮೊದಲೇ ಗೊತ್ತಿತ್ತು…ಆದ್ರು 2018ರ ಇಬ್ಬರು ರಿಜಿಸ್ಟರ್ ಮದುವೆಯಾಗಿದ್ದು.ಪತಿ ಅಜೀತ ಮೇಲೆ ಎಪಿಎಂಸಿ ಮತ್ತು ಕಾಕತಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದವು.

ಆ ಪ್ರಕರಣ ಮುಚ್ಚಿ ಹಾಕು ಎಪಿಎಂಸಿ ಇನ್ಸ್ಪೆಕ್ಟರ್ ಕಾಲಿಮಿರ್ಚಿ 40 ಸಾವಿರ ಹಣವನ್ನು ಕೇಳಿದ್ದಾರೆ…ಅಲ್ಲದೇ ಕಾಕತಿ ಇನ್ಸ್ಪೆಕ್ಟರ್ 30 ಸಾವಿರ ಹಣ ಹೇಳಿದ್ದಾರೆ ಎಂದು ಹೇಳಿ ನನ್ನ ಬಳಿಯಿಂದ ಹಣವನ್ನು ತಗೊಂಡು ಹೋಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿದ್ದಾಳೆ.

ಅಲ್ಲದೇ ಪತಿ ಅಜೀತ ಮತ್ತು ಜಯಶ್ರೀ ವಿರುದ್ಧ ಮಹಿಳಾ ಠಾಣೆಯಲ್ಲಿ ಕೇಸ್ ದಾಖಲಿಸಿದ್ರು ಈವರೆಗೂ ನ್ಯಾಯ ಸಿಕ್ಕಿಲ್ಲ ಎಂದು ಮತ್ತೆ ಪೊಲೀಸ್ ಕಮೀಷನರಗೆ ದೂರು ಕೊಟ್ಟಿದ್ದಾಳೆ ದ್ರಾಕ್ಷಾಯಿಣಿ.ಈಗ ಸದ್ಯಕ್ಕೆ ಅಜೀತ ಮಾದರ ಪರಾರಿಯಾಗಿದ್ದಾನೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin