ಹೃದಯಾಘಾತದಿಂದ ಹಾಸನದ ಸಿಆರ್‌ಪಿಎಫ್ ಯೋಧ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ಜೂ.13- ಕರ್ತವ್ಯದಲ್ಲಿದ್ದ ಸಿಆರ್‌ಪಿಎಫ್ ಯೋಧ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಹಾಸನ ತಾಲ್ಲೂಕಿನ ಈಚನಹಳ್ಳಿ ಗ್ರಾಮದ ಹೇಮಂತಕುಮಾರ್ (42) ಮೃತಪಟ್ಟ ಯೋಧ.

ಛತ್ತೀಸ್‍ಗಢದ ಸುಕ್ಮಾದಲ್ಲಿ ಸಿಆರ್‌ಪಿಎಫ್ 150ನೆ ಬೆಟಾಲಿಯನ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕರ್ತವ್ಯದ ವೇಳೆ ಹಠಾತ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಇನ್ನೆರಡು ತಿಂಗಳು ಸೇವೆ ಸಲ್ಲಿಸಿ ನಿವೃತ್ತಿ ಪಡೆದು ಬರುವುದಾಗಿ ಹೇಮಂತ್ ಪೋಷಕರಿಗೆ ತಿಳಿಸಿದರು.ಆದರೆ ಹೃದಯಾಘಾತದಿಂದ ಹಠಾತ್ತನೆ ಮೃತಪಟ್ಟಿರುವುದು ಪೋಷಕರಿಗೆ ಬರ ಸಿಡಿಲು ಬಡಿದಂತಾಗಿದೆ.

ಆಕ್ರಂದನ: ಮಗನನ್ನು ಕಳೆದುಕೊಂಡ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು. ಇಡೀ ಗ್ರಾಮವೇ ಹೇಮಂತನ ಸಾವಿನ ಸುದ್ದಿ ಕೇಳಿ ದುಃಖದ ಮಡುವಿನಲ್ಲಿ ಮುಳುಗಿದೆ. ನಮ್ಮೂರಿನ ಹೆಮ್ಮೆಯ ಯೋಧನನ್ನು ಇಂದು ಕಳೆದುಕೊಂಡಿರುವುದು ನಿಜಕ್ಕೂ ಸಹ ನಮಗೆ ಆಘಾತ ತಂದಿದೆ ಎಂದು ಗ್ರಾಮಸ್ಥರು ಶೋಕ ವ್ಯಕ್ತಪಡಿಸಿದ್ದಾರೆ.

Facebook Comments