ಉನ್ನತಾಧಿಕಾರಿಯನ್ನು ಕೊಂದು ಆತ್ಮಹತ್ಯೆಗೆ ಶರಣಾದ ಸಿಆರ್‌ಪಿಎಫ್ ಎಸ್‍ಐ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜು.25-ಭದ್ರತಾಪಡೆಗಳಲ್ಲಿ ಸಹೋದ್ಯೋಗಿಗಳನ್ನು ಕೊಂದು ಯೋಧರು ಸಾವಿಗೆ ಶರಣಾಗುತ್ತಿರುವ ಪ್ರಕರಣಗಳು ಮರುಕಳಿಸುತ್ತಲೇ ಇವೆ.

ಕೇಂದ್ರೀಯ ಮೀಸಲು ಪೊಲೀಸ್ ಪಡೆಯ(ಸಿಆರ್‍ಪಿಎಫ್) ಸಬ್ ಇನ್ಸ್‍ಪೆಕ್ಟರ್ ಒಬ್ಬರು ತನ್ನ ಹಿರಿಯ ಅಧಿಕಾರಿಯನ್ನು ಗುಂಡಿಟ್ಟು ಕೊಂದು ನಂತರ ತಾನೂ ಅತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಧಾನಿ ದೆಹಲಿಯ ಲೋಧಿ ಎಸ್ಟೇಟ್ ಪ್ರದೇಶದಲ್ಲಿ ನಿನ್ನೆ ತಡರಾತ್ರಿ ನಡೆದಿದೆ.

ಸಬ್ ಇನ್ಸ್‍ಪೆಕ್ಟರ್ ಕರ್ನೈಲ್ ಸಿಂಗ್ (55) ಅವರು ತನ್ನ ಮೇಲಧಿಕಾರಿ ಇನ್ಸ್‍ಪೆಕ್ಟರ್ ದಶರಥ್ ಸಿಂಗ್ (56) ಅವರನ್ನು ತಮ್ಮ ಸರ್ವಿಸ್ ರಿವಾಲ್ವಾರ್‍ನಿಂದ ಗುಂಡು ಹಾರಿಸಿ ಕೊಂದು, ನಂತರ ತಾವೂ ಸಾವಿಗೆ ಶರಣಾಗಿದ್ದಾರೆ.

ಸಬ್ ಇನ್ಸ್‍ಪೆಕ್ಟರ್ ಜಮ್ಮು ಮತ್ತು ಕಾಶ್ಮೀರದ ಉದಾಂಪುರದವರಾಗಿದ್ದು, ಇನ್ಸ್‍ಪೆಕ್ಟರ್ ಹರಿಯಾಣದ ರೋಹ್ಟಕ್‍ನವರು. ಗೃಹ ಸಚಿವಾಲಯಕ್ಕೆ ಮಂಜೂರು ಮಾಡಲಾಗಿದ್ದ ಲೋಧಿ ಎಸ್ಟೇಟ್‍ನ ನಂ.61 ಬಂಗಲೆಯಲ್ಲಿ ನಿನ್ನೆ ರಾತ್ರಿ 10.40ರಲ್ಲಿ ಈ ಘಟನೆ ನಡೆದಿದೆ.

ಎಸ್‍ಐ ಮತ್ತು ಇನ್ಸ್‍ಪೆಕ್ಟರ್ ನಡುವೆ ಏರಿದ ಧ್ವನಿಯಲ್ಲಿ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ವಿಕೋಫಕ್ಕೆ ಹೋಗಿ ಕರ್ನೈಲ್ ಸಿಂಗ್ ತನ್ನ ಬಳಿ ಇದ್ದ ರಿವಾಲ್ವಾರ್‍ನಿಂದ ದಶರಥ್ ಸಿಂಗ್ ಅವರ ಮೇಲೆ ಗುಂಡು ಹಾರಿಸಿ ಕೊಂದರು.

ನಂತರ ಅದೇ ರಿವಾಲ್ವಾರ್‍ನಿಂದ ತಾವೂ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾದರು. ಈ ಕೃತ್ಯಗೆ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಉನ್ನತಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹತ್ಯೆ ಮತ್ತು ಆತ್ಮಹತ್ಯೆ ಪ್ರಕರಣದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

Facebook Comments

Sri Raghav

Admin