ಕ್ರಷರ್ ಸ್ಥಳ ಪರಿಶೀಲಿಸಿದ್ದ ಪೊಲೀಸರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.23-ಶಿವಮೊಗ್ಗದ ಹುಣಸೋಡುವಿನಲ್ಲಿ ಸಂಭವಿಸಿದ ಜಿಲೆಟಿನ್ ಸ್ಫೋಟ ಘಟನೆ ಬಳಿಕ ಪೊಲೀಸರು ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲ್ಲೂಕಿನ ಹಿರೇನಾಗವಲ್ಲಿ ಬಳಿ ಇರುವ ಕ್ರಷರ್‍ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆ ವೇಳೆ ಕ್ರಷರ್ ಸ್ಥಗಿತಗೊಂಡಿತ್ತು. ಪೊಲೀಸರು ಬಂದು ಪರಿಶೀಲಿಸಿದ ವಿಷಯವನ್ನು ಕ್ರಷರ್‍ನ ಮಾಲೀಕರು ಎಂಜಿನಿಯರ್‍ಗೆ ಫೋನ್ ಮಾಡಿ ತಿಳಿಸಿದ್ದು, ಪೊಲೀಸರಿಗೆ ವಿಷಯ ತಿಳಿದರೆ ನಮ್ಮನ್ನು ಬಿಡುವುದಿಲ್ಲ. ನಾವು ಬಚ್ಚಿಟ್ಟಿರುವ ಜಿಲೆಟಿನ್‍ಗಳನ್ನು ಕಾಡಿನಲ್ಲಿ ನಾಶಗೊಳಿಸಲು ಸೂಚಿಸಿದ್ದರು.

ಅದರಂತೆ ರಾತ್ರಿ 12 ಗಂಟೆ ಸುಮಾರಿನಲ್ಲಿ ಎಂಜಿನಿಯರ್ ತಮ್ಮ ಸಿಬ್ಬಂದಿಯೊಂದಿಗೆ ಕ್ರಷರ್ ಸ್ಥಳಕ್ಕೆ ಬಂದಾಗ ವಾಚ್‍ಮೆನ್ ಇದ್ದರು. ಎಂಜಿನಿಯರ್ ತಮ್ಮ ಸಿಬ್ಬಂದಿಯೊಂದಿಗೆ ಅಲ್ಲಿದ್ದ ಜಿಲೆಟಿನ್‍ಗಳನ್ನು ಎರಡು ಗೋಣಿ ಚೀಲಗಳಿಗೆ ತುಂಬಿ ಟಾಟಾಏಸ್ ವಾಹನಕ್ಕೆ ಲೋಡ್ ಮಾಡಿದ್ದಾರೆ. ನಂತರ ಅವುಗಳನ್ನು ನಾಶಗೊಳಿಸಲು ಈ ವಾಹನದಲ್ಲಿ ಐದು ಮಂದಿ ಮತ್ತು ಬೈಕ್‍ನಲ್ಲಿ ಇನ್ನಿಬ್ಬರು ಕಾಡಿಗೆ ಹೋಗುತ್ತಿದ್ದಾಗ ಕ್ರಷರ್‍ನಿಂದ 2 ಕಿ.ಮೀ ದೂರದ ಗೋಮಾಳದಲ್ಲಿ ಆಕಸ್ಮಿಕವಾಗಿ ಮಾರ್ಗಮಧ್ಯೆ ಜಿಲೆಟಿನ್ ಸ್ಫೋಟಗೊಂಡ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಈ ಸಂಜೆಗೆ ತಿಳಿಸಿದ್ದಾರೆ.

Facebook Comments