ಕ್ರಷರ್ ಮಾಲೀಕನ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಬಳ್ಳಾಪುರ, ಫೆ.25- ಜಿಲ್ಲಾಯಲ್ಲಿ ಸಂಭವಿಸಿದ ಸ್ಫೋಟಕ ದುರಂತದಲ್ಲಿ ಮೃತರಾದ ಆರು ಮಂದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಷರ್ ಮಾಲೀಕ ಗುಡಿ ಬಂಡೆ ನಾಗರಾಜ್ ಹಾಗೂ ತಮಿಳುನಾಡು ಮೂಲದ ಗಣೇಶ್ ಎಂಬುರನ್ನು ಇಂದು ಬಂಧಿಸಲಾಗಿದೆ. ಈಗಾಗಲೆ ಘಟನೆಗೆ ಸಂಬಂಧಿಸಿದಂತೆ 7ಆರೋಪಿಗಳನ್ನು ಈ ವರೆಗೆ ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದ್ದಾರೆ.

ಇದರ ನಡುವೆ ಆ ಪ್ರದೇಶದ ಸುತ್ತ ಮುತ್ತ ಸ್ಫೋಟಕಗಳನ್ನು ಅಡಗಿಟ್ಟಿಸಿರುವ ಬಗ್ಗೆ ಅನುಮಾನ ಮೂಡಿದ್ದು, ಪರಿಶೀಲನೆ ಕಾರ್ಯ ಕೂಡ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಘಟನೆ ನಡೆದ ಎರಡು ದಿನಗಳಲ್ಲಿ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದ್ದು, ಇನ್ನು ಸ್ಫೋಟಕ ಪೂರೈಸಿದ ಬಗ್ಗೆ ಸಿಐಡಿ ತನಿಖೆಯಲ್ಲಿ ಹೆಚ್ಚಿನ ಮಾಹಿತಿ ತಿಳಿದು ಬರಲಿದೆ.

Facebook Comments