ನಾಳೆ ನಡೆಯಬೇಕಿದ್ದ CSK-RR ನಡುವಿನ ಪಂದ್ಯ ಮುಂದೂಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಮೇ 4-ಕೊರೊನಾ ಕಾರಣದಿಂದ ಮುಂದೂಡಲ್ಪಟ್ಟಿದ್ದ ಆರ್‍ಸಿಬಿ ಮತ್ತು ಕೆಕೆಆರ್ ಪಂದ್ಯ ಮಾದರಿಯಲ್ಲೇ ನಾಳೆ ನಡೆಯಬೇಕಿದ್ದ ಸಿಎಸ್‍ಕೆ ಮತ್ತು ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯವನ್ನು ಮುಂದೂಡಲಾಗಿದೆ.

ಸಿಎಸ್‍ಕೆ ಬೌಲಿಂಗ್ ಕೋಚ್ ಎಲ್.ಬಾಲಾಜಿ ಅವರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡ ಹಿನ್ನಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಯಾವುದೇ ಸೋಂಕಿತ ವ್ಯಕ್ತಿಯ ಸಂಪರ್ಕ ಹೊಂದಿದ್ದ ಆಟಗಾರರು ಆರು ದಿನಗಳ ಕಠಿಣ ಕ್ವಾರಂಟೈನ್‍ಗೆ ಒಳಗಾಗಿ ನಂತರ ನೆಗಿಟಿವ್ ವರದಿ ಪಡೆದ ನಂತರವಷ್ಟೇ ಪಂದ್ಯದಲ್ಲಿ ಪಾಲ್ಗೊಳ್ಳಬೇಕು ಎಂಬ ನಿಯಮ ಜಾರಿಯಲ್ಲಿದೆ.

ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿರುವ ಬಾಲಾಜಿ ಅವರೊಂದಿಗೆ ಆಟಗಾರರು ಸಂಪರ್ಕ ಹೊಂದಿದ್ದ ಹಿನ್ನಲೆಯಲ್ಲಿ ಆಟಗಾರರನ್ನು ಕ್ವಾರಂಟೈನ್‍ಗೆ ಒಳಪಡಿಸಬೇಕಾಗಿರುವುದರಿಂದ ನಾಳಿನ ಪಂದ್ಯವನ್ನು ಮುಂದೂಡಲಾಗಿದೆ.

Facebook Comments

Sri Raghav

Admin