ಮತ್ತೆ IPL ಅಬ್ಬರ ಶುರು, ಇಂದು ಮುಂಬೈ- ಸಿಎಸ್‍ಕೆ ಫೈಟ್

ಈ ಸುದ್ದಿಯನ್ನು ಶೇರ್ ಮಾಡಿ

ಯುಎಇ, ಸೆ. 19- ಕೊರೊನಾ ಹಿನ್ನೆಲೆಯಲ್ಲಿ ಅರ್ಧಕ್ಕೆ ಪ್ರಯಾಣ ನಿಲ್ಲಿಸಿದ್ದ ಐಪಿಎಲ್ 14ರ 2ನೆ ಚರಣದ ಪಂದ್ಯಗಳು ಇಂದಿನಿಂದ ಆರಂಭಗೊಂಡಿದ್ದು ಮೊದಲ ಪಂದ್ಯದಲ್ಲಿ ಬಲಿಷ್ಠ ತಂಡಗಳ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಹಾಗೂ ಕೂಲ್ ಕ್ಯಾಪ್ಟನ್ ಮಹೇಂದ್ರಸಿಂಗ್ ಧೋನಿ ಸಾರಥ್ಯದ ಸಿಎಸ್‍ಕೆಯ ನಡುವಿನ ಹೈವೋಲ್ಟೇಜ್ ಪಂದ್ಯವು ಪ್ರೇಕ್ಷಕರ ಕ್ರೇಜ್ ಹೆಚ್ಚಿಸಲಿದೆ.

ಐಪಿಎಲ್ ಇತಿಹಾಸವನ್ನು ಅವಲೋಕಿಸಿದರೆ ಮುಂಬೈ ತಂಡವು ಸಿಎಸ್‍ಕೆ ಗಿಂತ ಬಲಿಷ್ಠ ತಂಡವಾಗಿದ್ದು 5 ಬಾರಿ ಚಾಂಪಿಯನ್ಸ್ ಆಗಿದ್ದು, ಈ ಬಾರಿ ಡಬಲ್ ಹ್ಯಾಟ್ರಿಕ್ ಸಾಸಲು ಹೊರಟಿದ್ದರೆ, 3 ಬಾರಿ ಚಾಂಪಿಯನ್ ಆಗಿರುವ ಸಿಎಸ್‍ಕೆ ತಂಡವು ಕೂಡ ಈ ಬಾರಿ ಮತ್ತೊಮ್ಮೆ ಚಾಂಪಿಯನ್ ಆಗುವ ತವಕದಲ್ಲಿದೆ.

ಧೋನಿ ಸಾರಥ್ಯದ ಸಿಎಸ್‍ಕೆ ತಂಡದವು ಐಪಿಎಲ್ 14ರಲ್ಲಿ ಆಡಿರುವ 7 ಪಂದ್ಯಗಳಲ್ಲಿ 5ರಲ್ಲಿ ಗೆಲುವು ಸಾಸಿ 10 ಅಂಕಗಳೊಂದಿಗೆ 2ನೆ ಸ್ಥಾನದಲ್ಲಿದ್ದರೆ, ಆಡಿರುವ 7 ಪಂದ್ಯಗಳಲ್ಲಿ 4ರಲ್ಲಿ ಗೆಲುವು ಸಾಸಿರುವ ಮುಂಬೈ ಇಂಡಿಯನ್ಸ್ ತಂಡವು 8 ಅಂಕಗಳನ್ನು ಕಲೆ ಹಾಕುವ ಮೂಲಕ ಪಾಯಿಂಟ್ಸ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಅಲಂಕರಿಸಿದೆ.

ಸಿಎಸ್‍ಕೆ ಗಾಯದ ಸಮಸ್ಯೆ:
ಸಿಎಲ್‍ಪಿ ಲೀಗ್ ವೇಳೆ ಗಾಯಗೊಂಡಿರುವ ಡುಪ್ಲೆಸಿ¸ ಆರಂಭಿಕ ಪಂದ್ಯದಿಂದ ಹೊರಗುಳಿ ಯುವುದರಿಂದ ಮೊದಲ ಚರಣದಲ್ಲಿ ಅವಕಾಶ ಪಡೆಯದ ಕನ್ನಡಿಗ ಋತುರಾಜ್ ಗಾಯಕ್ವಾಡ್‍ರೊಂದಿಗೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ.ಇನ್ನು ಮಧ್ಯಮ ಕ್ರಮಾಂಕದಲ್ಲಿ ರನ್ ಹೆಚ್ಚಿಸುವ ಜವಾಬ್ದಾರಿಯನ್ನು ಸುರೇಶ್‍ರೈನಾ, ಅಂಬಟಿರಾಯುಡು, ಮಹೇಂದ್ರಸಿಂಗ್ ಧೋನಿ, ಅಲೌಂಡರ್‍ಗಳಾದ ಮೊಹಿನ್ ಅಲಿ, ಶಾರ್ದೂಲ್ ಠಾಕೂರ್, ರವೀಂದ್ರಾ ಜಡೇಜಾ ರನ್‍ಗಳ ಸುರಿಮಳೆ ಸುರಿಸಲಿದ್ದಾರೆ.

ಬೌಲಿಂಗ್ ವಿಭಾಗವು ಬಲಿಷ್ಠವಾಗಿದ್ದು ದೀಪಕ್ ಚಹರ್, ಜೋಶ್ ಹೆಜಲ್‍ವುಡ್‍ರವರು ಮುಂಬೈ ಬ್ಯಾಟ್ಸ್‍ಮನ್‍ಗಳ ರನ್ ದಾಹಕ್ಕೆ ಬ್ರೇಕ್ ಹಾಕುವ ಜವಾಬ್ದಾರಿ ಹೊತ್ತಿದ್ದಾರೆ.

# ರನ್ ಸುರಿಮಳೆ:
ಕಳೆದ ಋತುಗಳಂತೆ ಈ ಬಾರಿಯೂ ತಂಡವು ರೋಹಿತ್ ಶರ್ಮಾ, ಡಿ ಕಾಕ್, ಸೂರ್ಯಕುಮಾರ್‍ಯಾದವ್, ಕಿರಾನ್ ಪೋಲಾರ್ಡ್, ಇಶಾನ್‍ಕಿಶಾನ್, ಪಾಂಡ್ಯ ಬ್ರದರ್ಸ್‍ರಂತಹ ಸೋಟಕ ಆಟಗಾರರನ್ನು ಹೊಂದಿರುವುದರಿಂದ ಇಂದಿನ ಪಂದ್ಯದಲ್ಲಿ 200ಕ್ಕೂ ಹೆಚ್ಚು ರನ್ ಗಳನ್ನು ಕಲೆ ಹಾಕುವ ಸೂಚನೆಯನ್ನು ನೀಡಿದ್ದಾರೆ.

ಚೆನ್ನೈ ಸೂಪರ್‍ಕಿಂಗ್ಸ್‍ನಂತೆ ಮುಂಬೈ ಇಂಡಿಯನ್ಸ್‍ನಲ್ಲೂ ಜಸ್‍ಪ್ರೀತ್ ಬೂಮ್ರಾ, ಟ್ರೆಂಟ್ ಬೌಲ್ಟ್ , ರಾಹುಲ್ ಚಹರ್‍ರಂತಹ ಅಂತರರಾಷ್ಟ್ರೀಯ ಬೌಲಿಂಗ್ ಪಡೆಯನ್ನು ಹೊಂದಿದ್ದು ಧೋನಿ ಪಡೆಯ ರನ್ ದಾಹಕ್ಕೆ ಬ್ರೇಕ್ ಹಾಕಲು ಮುಂದಾಗಿದೆ.

Facebook Comments

Sri Raghav

Admin