ಐಪಿಎಲ್ ನಿಂದ ರೈನಾ-ಹರಭಜನ್ ಕೈಬಿಟ್ಟ ಸಿಎಸ್‌ಕೆ..!

ಈ ಸುದ್ದಿಯನ್ನು ಶೇರ್ ಮಾಡಿ

ದುಬೈ,ಸೆ.7- ಚೆನ್ನೈ ಸೂಪರ್ ಕಿಂಗ್ಸ್‍ನ ಸ್ಟಾರ್ ಪ್ಲೇಯರ್‍ಗಳಾದ ಸುರೇಶ್ ರೈನಾ ಹಾಗೂ ಹರಭಜನ್ ಸಿಂಗ್ ಅವರನ್ನು ಮುಂಬರುವ ಟಿ-20 ಪಂದ್ಯಾವಳಿಯಲ್ಲಿ ತಂಡದಿಂದ ಕೈಬಿಡಲು ನಿರ್ಧರಿಸಲಾಗಿದೆ.

ಮೂರು ಬಾರಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್‍ಗೆ ಇದೊಂದು ಆಘಾತಕಾರಿ ವಿಷಯವಾಗಿದ್ದು, ಆದರೆ ಮಹೇಂದ್ರ ಸಿಂಗ್ ಅವರು ಎಲ್ಲಾವನ್ನು ನೋಡಿಕೊಳ್ಳುತ್ತಾರೆ, ನಮಗೆ ಯಾವುದೇ ಆತಂಕ, ಭಯವಿಲ್ಲ ಎಂದು ವ್ಯವಸ್ಥಾಪಕ ಮಂಡಳಿ ಹೇಳಿದೆ.

ರೈನಾ ಈ ಹಿಂದೆ ಕಿರಿಕ್ ಮಾಡಿಕೊಂಡು ಭಾರತಕ್ಕೆ ಹೋಗಿದ್ದರು. ಅದರೂ ಧೋನಿ ಮೇಲೆ ನಂಬಿಕೆಯಿದೆ ಎಂದು ಹೇಳಿ ನಾನು 12.5 ಕೋಟಿ ಸಂಭಾವನೆಯ ಆಟಗಾರ ದೂರ ಉಳಿಯುವುದು ಹೇಗೆ? ಬೇಗ ಚೆನ್ನೈ ತಂಡ ಸೇರಿಕೊಳ್ಳುತ್ತೇನೆ ಎಂದು ಹೇಳಿದ್ದರು.

ಆದರೆ ಧೀಡರನೆ ಈಗ ರೈನಾ ಮತ್ತು ಹರಭಜನ್ ಸಿಂಗ್ ಅವರನ್ನು ತಂಡದಿಂದ ಕೈಬಿಟ್ಟಿರುವುದು ನಮಗೇನು ಚಿಂತೆಯಿಲ್ಲ. ನಮಗೆ ಅತ್ಯಂತ ವಿಶ್ವಾಸವಿದೆ. ಉತ್ತಮ ತಂಡ ಒಳ್ಳೆಯ ಪ್ರದರ್ಶನ ನೀಡಲಿದೆ ಎಂದು ಟ್ವಿಟರ್‍ನಲ್ಲಿ ತಿಳಿಸಿದೆ.

Facebook Comments