“ಕ್ಯಾಸಿನೋ ಜಾರಿಗೆ ತರುವ ಚಿಂತನೆಯೇ ನಡೆದಿಲ್ಲ” : ಉಲ್ಟಾ ಹೊಡೆದ ಸಚಿವ ಸಿ.ಟಿ.ರವಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.26- ರಾಜ್ಯದಲ್ಲಿ ಕ್ಯಾಸಿನೋ ಜಾರಿಗೆ ತರುವ ಚಿಂತನೆಯೇ ನಡೆದಿಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಯಾಸಿನೋ ಬಗ್ಗೆ ಚಿಂತನೆಯೇ ನಡೆಸದೇ ಜಾರಿಗೆ ತರುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

ಎಫ್‍ಕೆಸಿಸಿಐನಲ್ಲಿ ನಡೆದ ಪ್ರವಾಸೋದ್ಯಮ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಕ್ಯಾಸಿನೋ ವಿಚಾರ ಪ್ರಸ್ತಾಪಿಸಿದಾಗ ರಾಜ್ಯದಲ್ಲಿ ತರಲಾಗುತ್ತದೆಯೇ ಎಂಬ ಪ್ರಶ್ನೆ ಕೇಳಲಾಗಿತ್ತು. ಆ ಸಂದರ್ಭದಲ್ಲಿ ಕ್ಯಾಸಿನೋ ಜಾರಿಗೆ ತರಲಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದೇನೆ. ಆದರೂ ವಿವಾದ ಮಾಡುವುದು ಸರಿಯಲ್ಲ ಎಂದರು.

ಆ ಸಂದರ್ಭದಲ್ಲಿ ಮಾನ್‍ಸೂನ್, ಪಾರಂಪರಿಕ ತಾಣಗಳು, ಪ್ರವಾಸೋದ್ಯಮದ ವಿವಿಧ ಅವಕಾಶಗಳ ಬಗ್ಗೆ ಪ್ರಸ್ತಾಪಿಸಲಾಗಿತ್ತು. ವಿದೇಶಗಳಲ್ಲಿರುವ ಕ್ಯಾಸಿನೋ ಜಾರಿಗೆ ತರುವ ಯಾವುದೇ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಸ್ಪಷ್ಟಪಡಿಸಿದರು.

Facebook Comments